twitter
    For Quick Alerts
    ALLOW NOTIFICATIONS  
    For Daily Alerts

    ಸರ್ಕಾರದ ಮಧ್ಯಸ್ಥಿಕೆ ಬಳಿಕ 'ಮರಕ್ಕರ್' ಸಿನಿಮಾ ಬಿಡುಗಡೆ ದಿನಾಂಕ ಪ್ರಕಟ: ಏನಿದು ವಿವಾದ?

    |

    ಮೋಹನ್‌ಲಾಲ್ ನಟಿಸಿರುವ 'ಮರಕ್ಕರ್; ಅರಬ್ಬಿ ಕಡಲಿಂಟೆ ಸಿಂಹಂ' ಸಿನಿಮಾ ಮುಗಿದು ಮೂರು ವರ್ಷಗಳ ಮೇಲಾಯ್ತು. ಆದರೆ ಇನ್ನೂ ಬಿಡುಗಡೆ ಆಗಿಲ್ಲ. ಈ ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ಬಿಡುಗಡೆಗೆ ಹಲವು ಅಡ್ಡಿ-ಆತಂಕ ಮುನಿಸು-ಸಂಧಾನಗಳ ಬಳಿಕ ಸಿನಿಮಾದ ಬಿಡುಗಡೆ ದಿನಾಂಕವನ್ನು ಇದೀಗ ಘೋಷಿಸಲಾಗಿದೆ.

    2018 ರಲ್ಲಿ ಚಿತ್ರೀಕರಣ ಆರಂಭಿಸಿದ 'ಮರಕ್ಕರ್' ಸಿನಿಮಾ 2019 ರಲ್ಲಿ ಚಿತ್ರೀಕರಣ ಮುಗಿಸಿ ಅದೇ ವರ್ಷದಲ್ಲಿ ಸೆನ್ಸಾರ್ ಸಹ ಪೂರ್ಣಗೊಳಿಸಿ ಬಿಡುಗಡೆಗೆ ತಯಾರಾಗಿತ್ತು. ಆದರೆ, ಕೊರೊನಾ ಕಾರಣದಿಂದ ಸಿನಿಮಾದ ಬಿಡುಗಡೆ ತಡವಾಯ್ತು. ಇದೀಗ ಡಿಸೆಂಬರ್ 02 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿರುವುದಾಗಿ ಚಿತ್ರತಂಡ ಘೋಷಿಸಿದೆ.

    ಕೇರಳದ ಮೊದಲ 100 ಕೋಟಿ ಬಜೆಟ್‌ನ ಸಿನಿಮಾ ಇದಾಗಿದ್ದು, ಮೋಹನ್‌ಲಾಲ್‌ರ ಅತ್ಯಾಪ್ತ ಆಂಟೊನಿ ಪೆರುಂಬವೂರ್ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಕೇರಳದ ಮೊದಲ ಭಾರಿ ಬಜೆಟ್ ಸಿನಿಮಾ ಆಗಿದ್ದ ಕಾರಣ ಕೇರಳ ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲಿಯೂ ಏಕಕಾಲಕ್ಕೆ ಬಿಡುಗಡೆ ಮಾಡಿ ಒಂದು ತಿಂಗಳ ಕಾಲ ಸಿನಿಮಾ ಪ್ರದರ್ಶನ ಮಾಡುವ ಉದ್ದೇಶ ನಿರ್ಮಾಪಕರಿಗೆ ಇತ್ತು. ಸಿನಿಮಾ ಬಿಡುಗಡೆ ತಡವಾಗಿ ಮೂರು ವರ್ಷಗಳ ಕಾಲ ಬಂಡವಾಳ ಸುಸ್ತಿ ಆಗಿದ್ದರಿಂದ ಚಿತ್ರಮಂದಿರಗಳಿಂದ ಹಾಗೂ ವಿತರಕರಿಂದ ಹೆಚ್ಚಿನ ಹಣವನ್ನು ನಿರ್ಮಾಪಕರು ನಿರೀಕ್ಷೆ ಮಾಡಿದ್ದರು.

    ಒಟಿಟಿ ಜೊತೆಗೆ ಬೃಹತ್ ಮೊತ್ತಕ್ಕೆ ಒಪ್ಪಂದ

    ಒಟಿಟಿ ಜೊತೆಗೆ ಬೃಹತ್ ಮೊತ್ತಕ್ಕೆ ಒಪ್ಪಂದ

    ಮುಂಗಡವಾಗಿ 40 ಕೋಟಿ ಹಣವನ್ನು ನಿರ್ಮಾಪಕರು ಸಂಗ್ರಹಿಸಿದ್ದರು, ಆದರೂ ಚಿತ್ರಮಂದಿರದವರು ಹೆಚ್ಚಿನ ಅಡ್ವಾನ್ಸ್ ಹಣ ನೀಡಲು ಹಿಂದೇಟು ಹಾಕಿದರು. ಹಾಗೂ ಕೇರಳದ ಎಲ್ಲ ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಸಿನಿಮಾ ಬಿಡುಗಡೆ ಮಾಡುವುದು ಸಹ ಅಸಾಧ್ಯ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಆಗ ನಿರ್ಮಾಪಕರು, ತಾವು ಸಿನಿಮಾವನ್ನು ಒಟಿಟಿಗೆ ಬಿಡುಗಡೆ ಮಾಡುವುದಾಗಿ ಹೇಳಿ ಒಟಿಟಿ ಜೊತೆ ಭಾರಿ ಮೊತ್ತಕ್ಕೆ ಒಪ್ಪಂದ ಸಹ ಮಾಡಿಕೊಂಡರು. ಇದಕ್ಕೆ ಚಿತ್ರಮಂದಿರ ಸಂಘ ಹಾಗೂ ವಿತರಕರ ಸಂಘದಿಂದ ತೀವ್ರ ವಿರೋಧ ವ್ಯಕ್ತವಾಯಿತು. ಸರ್ಕಾರ ಸಹ ಆಕ್ಷೇಪ ವ್ಯಕ್ತಪಡಿಸಿತು.

    ಸಚಿವ ಸಜಿ ಚೆರಿಯನ್ ಸಂಧಾನ ಯಶಸ್ವಿ

    ಸಚಿವ ಸಜಿ ಚೆರಿಯನ್ ಸಂಧಾನ ಯಶಸ್ವಿ

    ಅಂತಿಮವಾಗಿ ಕೇರಳದ ಸಾಂಸ್ಕೃತಿಕ ಇಲಾಖೆ ಸಚಿವ ಸಜಿ ಚೆರಿಯನ್, ಮೋಹನ್‌ಲಾಲ್, ಆಂಟೊನಿ ಪೆರುಂಬವೂರ್ ಹಾಗೂ ಚಿತ್ರಮಂದಿರಗಳ ಸಂಘ, ವಿತರಕರ ಸಂಘದ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿ ಕೊನೆಗೂ ಸಿನಿಮಾವು ಚಿತ್ರಮಂದಿರದಲ್ಲಿಯೇ ಬಿಡುಗಡೆ ಆಗುವಂತೆ ಮಾಡಿದ್ದಾರೆ. 'ಮರಕ್ಕರ್' ಸಿನಿಮಾವು ಡಿಸೆಂಬರ್ 02 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.

    ಮೋಹನ್‌ಲಾಲ್ ಸಿನಿಮಾದಿಂದ ಸರ್ಕಾರಕ್ಕೆ ಲಾಭ

    ಮೋಹನ್‌ಲಾಲ್ ಸಿನಿಮಾದಿಂದ ಸರ್ಕಾರಕ್ಕೆ ಲಾಭ

    ಮಲಯಾಳಂನ ಹಲವು ಸಿನಿಮಾಗಳು ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಆಗುತ್ತವೆ. ಆದರೆ ಮೋಹನ್‌ಲಾಲ್ ನಟನೆಯ 'ಮರಕ್ಕರ್' ಸಿನಿಮಾಕ್ಕೆ ಮಾತ್ರವೇ ಸರ್ಕಾರ ವಿಶೇಷ ಮುತುವರ್ಜಿ ವಹಿಸಿ ಸಂಧಾನಕ್ಕೆ ತಾನೇ ಮುಂದೆ ಬಂದಿತು. ಮೋಹನ್‌ಲಾಲ್ ಸಿನಿಮಾಗಳಿಂದ ಭಾರಿ ಮೊತ್ತದ ತೆರಿಗೆ ಸರ್ಕಾರದ ಬೊಕ್ಕಸಕ್ಕೆ ಸೇರುತ್ತದೆ. 'ಮರಕ್ಕರ್' ಸಿನಿಮಾ ಒಂದರಿಂದಲೇ ಸುಮಾರು 35 ಕೋಟಿ ತೆರಿಗೆ ಸರ್ಕಾರಕ್ಕೆ ಸೇರುತ್ತದೆ ಎನ್ನಲಾಗುತ್ತಿದೆ. ಅಲ್ಲದೆ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕೇರಳದಲ್ಲಿ ಚಿತ್ರಮಂದಿರಗಳು ಕೊರೊನಾ ಕಾರಣಕ್ಕೆ ಭಾರಿ ನಷ್ಟದಲ್ಲಿವೆ. ಬಹಳ ತಡವಾಗಿ ಅಲ್ಲಿ ಚಿತ್ರಮಂದಿರಗಳು ತೆರೆಯಲು ಅವಕಾಶ ನೀಡಿದೆ ಸರ್ಕಾರ. ಹೀಗಿರುವಾಗ ಚಿತ್ರಮಂದಿರಗಳ ಪುನಶ್ಚೇತನಕ್ಕೆ 'ಮರಕ್ಕರ್' ಅಂಥಹಾ ಸಿನಿಮಾ ಬೇಕು ಎಂದು ಸರ್ಕಾರ ಹೆಚ್ಚು ಕಾಳಜಿ ವಹಿಸಿ ಮಾತುಕತೆಗೆ ಮುಂದಾಗಿತ್ತು.

    ತೀವ್ರ ವಿರೋಧ ಎದುರಿಸಿದ್ದ 'ಮರಕ್ಕರ್' ಸಿನಿಮಾ

    ತೀವ್ರ ವಿರೋಧ ಎದುರಿಸಿದ್ದ 'ಮರಕ್ಕರ್' ಸಿನಿಮಾ

    ಈ ಹಿಂದೆ ಮೋಹನ್‌ಲಾಲ್ ನಟನೆಯ 'ದೃಶ್ಯಂ 2' ಸಿನಿಮಾ ನೇರ ಒಟಿಟಿಗೆ ಬಿಡುಗಡೆ ಆದಾಗಲೂ ಚಿತ್ರಮಂದಿರ ಮಾಲೀಕರು ಹಾಗೂ ವಿತರಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಆ ಸಮಯದಲ್ಲಿ ಕೇರಳದಲ್ಲಿ ಚಿತ್ರಮಂದಿರಗಳು ತೆರೆದಿರಲಿಲ್ಲ. ಹಾಗಾಗಿ 'ಮರಕ್ಕರ್' ಸಿನಿಮಾದ ಒಟಿಟಿ ಬಿಡುಗಡೆಗೆ ವ್ಯಕ್ತವಾದಷ್ಟು ವಿರೋಧ ವ್ಯಕ್ತವಾಗಲಿಲ್ಲ. ಆದರೆ ಈಗ ಭಾರಿ ವಿರೋಧವನ್ನು ಮೋಹನ್‌ಲಾಲ್ ಹಾಗೂ ನಿರ್ಮಾಪಕ ಆಂಟೊನಿ ಪೆರುಂಬವೂರ್ ಎದುರಿಸಬೇಕಾಗಿ ಬಂತು.

    ಬಿಡುಗಡೆಗೆ ಮುನ್ನ ರಾಷ್ಟ್ರಪ್ರಶಸ್ತಿ ಪಡೆದ ಸಿನಿಮಾ

    ಬಿಡುಗಡೆಗೆ ಮುನ್ನ ರಾಷ್ಟ್ರಪ್ರಶಸ್ತಿ ಪಡೆದ ಸಿನಿಮಾ

    'ಮರಕ್ಕರ್' ಸಿನಿಮಾದಲ್ಲಿ ಮೋಹನ್‌ಲಾಲ್ ನಾಲ್ಕನೇ ಕುಂಜಳಿ ಮರಕ್ಕರ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಪ್ರಿಯದರ್ಶನ್ ನಿರ್ದೇಶಿಸಿದ್ದು, ಸಿನಿಮಾದಲ್ಲಿ ಅರ್ಜುನ್ ಸರ್ಜಾ, ಸುನಿಲ್ ಶೆಟ್ಟಿ, ಕೀರ್ತಿ ಸುರೇಶ್, ಪ್ರಭು, ಮಂಜು ವಾರಿಯರ್ ಇನ್ನೂ ಹಲವು ಸ್ಟಾರ್ ನಟರ ದಂಡೇ ಇದೆ. ಸಿನಿಮಾಕ್ಕೆ 2019ರ ಸಾಲಿನ ಅತ್ಯುತ್ತಮ ಸಿನಿಮಾ ರಾಷ್ಟ್ರಪ್ರಶಸ್ತಿ ದೊರಕಿದೆ, ಜೊತೆಗೆ ಅತ್ಯುತ್ತಮ ಸ್ಪೆಷಲ್ ಎಫೆಕ್ಟ್, ಅತ್ಯುತ್ತಮ ವಸ್ತ್ರ ವಿನ್ಯಾಸ ವಿಭಾಗದಲ್ಲಿಯೂ ರಾಷ್ಟ್ರಪ್ರಶಸ್ತಿ ದೊರಕಿದೆ.

    English summary
    Mohanlal starer Marakkar movie finally releasing on December 02 in theaters world wide. Producer cancels the agreement with OTT.
    Monday, November 15, 2021, 14:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X