ಕೇರಳದ ಎಲ್ಲ ಚಿತ್ರಮಂದಿರಗಳಲ್ಲಿಯೂ ಒಂದೇ ಸಿನಿಮಾ ಬಿಡುಗಡೆ!

ಬಿಡುಗಡೆ ಆಗುವ ಸಿನಿಮಾಗಳಿಗೆ ಚಿತ್ರಮಂದಿರಗಳು ಸಿಗದೆ ಒದ್ದಾಡುವ ಪರಿಸ್ಥಿತಿ ಕರ್ನಾಟದಲ್ಲಿದೆ. ನಮ್ಮ ಸಿನಿಮಾಕ್ಕೆ ಚಿತ್ರಮಂದಿರ ಇಲ್ಲ, ನಮ್ಮ ಚಿತ್ರವನ್ನು ಎತ್ತಂಗಡಿ ಮಾಡಲಾಯಿತು ಎಂದು ಪ್ರತಿ ಶುಕ್ರವಾರವೂ ಒಬ್ಬರಲ್ಲ ಒಬ್ಬರು ನಿರ್ಮಾಪಕರು ದೂರು ಹೇಳುವುದು ಸಾಮಾನ್ಯವಾಗಿತ್ತು. ಕೊರೊನಾದಿಂದ ಪರಿಸ್ಥಿತಿ ಬೇರಾಯಿತು.

ಆದರೆ ಕೇರಳದಲ್ಲಿ ಸಕ್ರಿಯವಾಗಿರುವ ಎಲ್ಲ ಚಿತ್ರಮಂದಿರಗಳಲ್ಲಿಯೂ ಒಂದೇ ಸಿನಿಮಾ ಏಕಕಾಲಕ್ಕೆ ಬಿಡುಗಡೆ ಆಗಲಿದೆ. ಅಷ್ಟೇ ಅಲ್ಲದೆ ಮೂರು ವಾರಗಳ ಕಾಲ ಅದೊಂದೆ ಸಿನಿಮಾ ಎಲ್ಲ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಿದೆ.

ಹೌದು, ಆಶ್ಚರ್ಯವೆನಿಸಿದರೂ ಇದು ನಿಜ. ಮೋಹನ್‌ಲಾಲ್ ನಟನೆಯ ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ 'ಮರಕ್ಕರ್; ಅರಬ್ಬಿಕಡಲಿಂಟೆ ಸಿಂಹಂ' ಆಗಸ್ಟ್ 12 ರಂದು ಬಿಡುಗಡೆ ಆಗಲಿದ್ದು, ಕೇರಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಮಲ್ಟಿಫ್ಲೆಕ್ಸ್‌ಗಳು, ಚಿತ್ರಮಂದಿರಗಳಲ್ಲಿ ಇದೊಂದೇ ಸಿನಿಮಾ ಪ್ರದರ್ಶನ ಕಾಣಲಿದೆ.

ಒಪ್ಪಂದ ಮಾಡಿಕೊಂಡಿರುವ ನಿರ್ಮಾಪಕರು

ಒಪ್ಪಂದ ಮಾಡಿಕೊಂಡಿರುವ ನಿರ್ಮಾಪಕರು

ಸಿನಿಮಾದ ನಿರ್ಮಾಪಕರು ಕೇರಳದ ಚಿತ್ರಪ್ರದರ್ಶಕರ ಸಂಘದ ಒಪ್ಪಂದ ಮಾಡಿಕೊಂಡಿದ್ದು, ಎಲ್ಲ ಚಿತ್ರಮಂದಿರಗಳಲ್ಲಿ ಇದೊಂದೆ ಸಿನಿಮಾ ಬಿಡುಗಡೆ ಮಾಡಲು ಸಂಘವೂ ಸಹ ಒಪ್ಪಿದೆ ಎನ್ನಲಾಗುತ್ತಿದೆ. ಮೂರು ವಾರಗಳ ಇನ್ನಾವ ಮಲಯಾಳಂ ಅಥವಾ ಇನ್ನಾವುದೇ ಸಿನಿಮಾ ಬಿಡುಗಡೆ ಆಗುವಂತಿಲ್ಲ.

ಮಲಯಾಳಂನ ಅತಿ ದೊಡ್ಡ ಬಜೆಟ್‌ನ ಸಿನಿಮಾ

ಮಲಯಾಳಂನ ಅತಿ ದೊಡ್ಡ ಬಜೆಟ್‌ನ ಸಿನಿಮಾ

'ಮರಕ್ಕರ್; ಅರಬ್ಬಿಕಡಲಿಂಟೆ ಸಿಂಹಂ' ಸಿನಿಮಾವು ಕೇರಳದ ಈವರೆಗೆ ಅತಿ ಹೆಚ್ಚು ಬಜೆಟ್‌ನ ಸಿನಿಮಾ ಆಗಿದೆ. ಸಿನಿಮಾಕ್ಕೆ ಬರೋಬ್ಬರಿ 100 ಕೋಟಿ ಖರ್ಚು ಮಾಡಲಾಗಿದೆ. ಹಾಗಾಗಿ ಸಿನಿಮಾವನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಸಿನಿಮಾವನ್ನು ಖ್ಯಾತ ನಿರ್ದೇಶಕ ಪ್ರಿಯದರ್ಶನ್ ನಿರ್ದೇಶನ ಮಾಡಿದ್ದಾರೆ.

ರಾಷ್ಟ್ರಪ್ರಶಸ್ತಿಗೆ ಭಾಜನವಾದ ಸಿನಿಮಾ

ರಾಷ್ಟ್ರಪ್ರಶಸ್ತಿಗೆ ಭಾಜನವಾದ ಸಿನಿಮಾ

'ಮರಕ್ಕರ್ ಅರಬ್ಬಿಕಡಲಿಂಟೆ ಸಿಂಹಂ' ಸಿನಿಮಾವನ್ನು ಮೋಹನ್‌ಲಾಲ್ ರ ಆಪ್ತ ಆಂಟೊನಿ ಪೆರಂಬೂರ್, ಫ್ಯೂಚರ್ ಗ್ರೂಫ್ಸ್ ಮತ್ತು ಮೂನ್‌ಶಾಟ್ ಎಂಟರ್ಟೈನ್‌ಮೆಂಟ್ಸ್ ಒಟ್ಟಿಗೆ ನಿರ್ಮಾಣ ಮಾಡಿದ್ದಾರೆ. ಸಿನಿಮಾವು ಈಗಾಗಲೇ ಅತ್ಯುತ್ತಮ ಸಿನಿಮಾ ರಾಷ್ಟ್ರಪ್ರಶಸ್ತಿಗೆ ಭಾಜನವಾಗಿದೆ. ಹಾಗಾಗಿ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇದೆ.

Recommended Video

ಸುರೇಶ್ ರೈನಾ ಸಿನಿಮಾದಲ್ಲಿ ಹೀರೋ ಪಾತ್ರ ಮಾಡೋದ್ಯಾರು | Filmibeat Kannada
ಹಲವು ಭಾಷೆಗಳಲ್ಲಿ ಬಿಡುಗಡೆ

ಹಲವು ಭಾಷೆಗಳಲ್ಲಿ ಬಿಡುಗಡೆ

ಈ ಸಿನಿಮಾವು ಮಲಯಾಳಂ ಮಾತ್ರವಲ್ಲದೆ, ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿದೆ. ಜುಲೈ 16 ಕ್ಕೆ ಕನ್ನಡದ 'ಕೆಜಿಎಫ್ 2' ಸಿನಿಮಾವು ಮಲಯಾಳಂ ಭಾಷೆಯಲ್ಲಿ ಕೇರಳದಲ್ಲಿ ಬಿಡುಗಡೆ ಆಗಲಿದೆ. 'ಮರಕ್ಕರ್' ಸಿನಿಮಾ ಎಲ್ಲ ಚಿತ್ರಮಂದಿರಗಳಲ್ಲಿ ಬಿಡುಗಡೆ ಆದದ್ದೇ ಆದಲ್ಲಿ 'ಕೆಜಿಎಫ್ 2' ಸಿನಿಮಾಕ್ಕೆ ಕೇರಳದಲ್ಲಿ ಸಣ್ಣ ಹೊಡೆತ ಬೀಳುವ ಸಾಧ್ಯತೆ ಇದೆ.

More from Filmibeat

English summary
Mohanlal starer Marakkar movie will be releasing in exclusively in all theaters in Kerala. And it will screened for three weeks continuously.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X