ಭಾಷಾ ಗೊಂದಲದ ನಡುವೆ ಕರ್ನಾಟಕದಲ್ಲಿ 'ಎಂಪುರಾನ್' ಮೋಹನ್ ಲಾಲ್ ಆರ್ಭಟ

ಕರ್ನಾಟಕದಲ್ಲಿ ಪರಭಾಷಾ ಸಿನಿಮಾಗಳ ಹಾವಳಿ ಹೊಸದೇನು ಅಲ್ಲ. ಇತ್ತೀಚೆಗೆ ಮಲಯಾಳಂ ಸಿನಿಮಾಗಳು ಕೂಡ ರಾಜ್ಯದ ಕೆಲವೆಡೆ ಭರ್ಜರಿ ಸದ್ದು ಮಾಡ್ತಿವೆ. ಈ ವಾರ ಮೋಹನ್ ಲಾಲ್ ನಟನೆಯ 'L2: ಎಂಪುರಾನ್' ಸಿನಿಮಾ ತೆರೆಗೆ ಬರ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗ್ತಿದ್ದು ಕನ್ನಡಕ್ಕೂ ಡಬ್ ಆಗಿದೆ.

2019ರಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದ 'ಲೂಸಿಫರ್' ಚಿತ್ರದ ಸೀಕ್ವೆಲ್ ಇದು. ಪೃಥ್ವಿರಾಜ್ ಸುಕುಮಾರ್ ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳಿ ಜಾಯೆದ್ ಮಸೂದ್ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಮೊದಲ ಭಾಗಕ್ಕಿಂತ ಬಹಳ ದೊಡ್ಡಮಟ್ಟದಲ್ಲಿ 2ನೇ ಭಾಗ ಕಟ್ಟಿಕೊಟ್ಟಿರೋದು ಟೀಸರ್, ಟ್ರೈಲರ್‌ನಲ್ಲೇ ಗೊತ್ತಾಗುತ್ತಿದೆ. 'ಲೂಸಿಫರ್' ಸಿನಿಮಾ ಮಲಯಾಳಂ ಬಿಟ್ಟು ಬೇರೆ ಭಾಷಿಕರನ್ನು ರಂಜಿಸಿತ್ತು. ಹಾಗಾಗಿ ಸೀಕ್ವೆಲ್‌ಗೆ ದೊಡ್ಡಮಟ್ಟದ ಓಪನಿಂಗ್ ನಿರೀಕ್ಷೆ ಮಾಡಲಾಗುತ್ತಿದೆ. ಕನ್ನಡ ವರ್ಷನ್‌ಗೆ ಕಮ್ಮಿ ಶೋ ಕೊಟ್ಟಿದ್ದಾರೆ ಎಂದು ಕೆಲವರು ಆರೋಪಿಸುತ್ತಿದ್ದಾರೆ.

Massive craze for MohanLal and Pruthviraj s L2 Empuraan in Karnataka

ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಕರ್ನಾಟಕದಲ್ಲಿ 'L2: ಎಂಪುರಾನ್' ಚಿತ್ರವನ್ನು ವಿತರಣೆ ಮಾಡುತ್ತಿದೆ. ಹೊಂಬಾಳೆ ಹಾಗೂ ಪೃಥ್ವಿರಾಜ್ ಸುಕುಮಾರನ್ ನಡುವೆ ಉತ್ತಮ ಒಡನಾಟವಿದೆ. ಈ ಹಿಂದೆ 'ಕೆಜಿಎಫ್' ಸರಣಿ, 'ಸಲಾರ್' ಹಾಗೂ 'ಧೂಮಂ' ಚಿತ್ರಗಳನ್ನು ಪೃಥ್ವಿರಾಜ್ ಕೇರಳದಲ್ಲಿ ಬಿಡುಗಡೆ ಮಾಡಿದ್ದರು. ಇದೀಗ ಪೃಥ್ವಿರಾಜ್ ನಿರ್ದೇಶಿಸಿ ನಟಿಸಿರುವ 'L2: ಎಂಪುರಾನ್' ಚಿತ್ರವನ್ನು ಕರ್ನಾಟಕದಾದ್ಯಂತ ಹೊಂಬಾಳೆ ಸಂಸ್ಥೆ ಪ್ರೇಕ್ಷಕರ ಮುಂದೆ ತರ್ತಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.

IPL ಟೂರ್ನಿ ಹಿನ್ನೆಲೆಯಲ್ಲಿ ಕನ್ನಡದ ದೊಡ್ಡ ಚಿತ್ರಗಳು ತೆರೆಗೆ ಬರ್ತಿಲ್ಲ. ಯೋಗರಾಜ್ ಭಟ್ ನಿರ್ದೇಶನದ 'ಮನದ ಕಡಲು' ಸಿನಿಮಾ ಮಾತ್ರ ಈ ವಾರ ರಿಲೀಸ್ ಆಗ್ತಿದೆ. ಇನ್ನುಳಿದಂತೆ ಯಾವುದೇ ದೊಡ್ಡ ಸಿನಿಮಾ ಇಲ್ಲ. ಇದರ ಲಾಭವನ್ನು ಮೋಹನ್ ಲಾಲ್ ನಟನೆಯ 'L2: ಎಂಪುರಾನ್' ಚಿತ್ರ ಪಡೆದುಕೊಳ್ತಿದೆ. ರಾಜ್ಯಾದ್ಯಂತ ಬರೀ ಅಡ್ವಾನ್ಸ್ ಬುಕ್ಕಿಂಗ್‌ನಲ್ಲೇ 200 ಶೋಗಳು ಹೌಸ್‌ಫುಲ್ ಆಗಿದೆ. ಈ ಬಗ್ಗೆ ಹೊಂಬಾಳೆ ಸಂಸ್ಥೆಯೇ ಅಧಿಕೃತವಾಗಿ ಮಾಹಿತಿ ನೀಡಿದೆ. ತಮಿಳು, ತೆಲುಗಿನ ದೊಡ್ಡ ಚಿತ್ರಗಳಿಂದ ಇಂತಹ ಕ್ರೇಜ್ ಇರ್ತಿತ್ತು. ಇದೀಗ ಮಲಯಾಳಂ ಚಿತ್ರವೂ ಅದೇ ರೀತಿ ಸದ್ದು ಮಾಡ್ತಿದೆ.

ಬೆಂಗಳೂರಿನಲ್ಲಿ ಮೊದಲ ದಿನವೇ 'L2: ಎಂಪುರಾನ್' ಚಿತ್ರಕ್ಕೆ 940 ಶೋಗಳು ಸಿಕ್ಕಿದೆ. ಈಗಾಗಲೇ ರಾಜ್ಯದಲ್ಲಿ ಚಿತ್ರಕ್ಕಾಗಿ 70 ಸಾವಿರಕ್ಕೂ ಅಧಿಕ ಟಿಕೆಟ್ ಬುಕ್ ಆಗಿದೆ ಎಂದು ಹೇಳಲಾಗ್ತಿದೆ. ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಮೋಹನ್ ಲಾಲ್ ಸಿನಿಮಾ ಕ್ರೇಜ್ ಜೋರಾಗಿದೆ. ಕರ್ನಾಟಕದಲ್ಲಿ ಈ ಹಿಂದೆ ಯಾವುದೇ ಮಲಯಾಳಂ ಸಿನಿಮಾ ಈ ಮಟ್ಟಿಗೆ ಹವಾ ಕ್ರಿಯೇಟ್ ಮಾಡಿರಲಿಲ್ಲ. ಬೆಳಗ್ಗೆ 6 ಗಂಟೆಗೆ ಕೆಲವೆಡೆ ಸಿನಿಮಾ ಪ್ರದರ್ಶನ ಆರಂಭವಾಗಲಿದೆ. ಸದ್ಯ ಸಿನಿಮಾ ಪ್ರಚಾರಕ್ಕಾಗಿ ಮೋಹನ್ ಲಾಲ್ ಹಾಗೂ ಪೃಥ್ವಿರಾಜ್ ಬೆಂಗಳೂರಿಗೆ ಬಂದಿದ್ದಾರೆ.

ಕಾಲೇಜು ರಜೆ ಘೋಷಣೆ

ಬೆಂಗಳೂರಿನಲ್ಲಿ 'L2: ಎಂಪುರಾನ್' ಸಿನಿಮಾ ಫೀವರ್ ಯಾವ ರೇಂಜಿಗೆ ಇದೆ ಅಂದ್ರೆ ರಾಜರಾಜೇಶ್ವರಿ ನಗರದ ಖಾಸಗಿ ಕಾಲೇಜು ಸಿನಿಮಾ ನೋಡಲು ವಿದ್ಯಾರ್ಥಿಗಳಿಗೆ ರಜೆ ಘೋಷಿಸಿದೆ. ಅಷ್ಟೇ ಅಲ್ಲ ಸಿನಿಮಾ ವೀಕ್ಷಿಸಲು ಫ್ರೀ ಟಿಕೆಟ್ ಕೊಟ್ಟು ಕಳುಹಿಸುತ್ತದೆ ಎನ್ನಲಾಗ್ತಿದೆ. ಕಾಲೇಜು ನಿರ್ದೇಶಕರು ನಟ ಮೋಹನ್ ಲಾಲ್ ಅವರ ದೊಡ್ಡ ಅಭಿಮಾನಿ ಅಂತೆ. ಹಾಗಾಗಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗ್ತಿದೆ.

'L2: ಎಂಪುರಾನ್' ಕಥೆ

ಅಧಿಕಾರ, ದ್ರೋಹ, ದುರಾಸೆ, ಸೇಡಿನೊಂದಿಗೆ ಈ ಬಾರಿ 'L2: ಎಂಪುರಾನ್' ಪ್ರಪಂಚ ಮತ್ತಷ್ಟು ರಂಗೇರಲಿದರೆ. 'ಲೂಸಿಫರ್' ಕಥೆಯಲ್ಲಿದ್ದ ಸ್ಟೀಫನ್ ನೆಡುಂಪಲ್ಲಿ ಯಾರು? ಸ್ಟೀಫನ್‌ನ ನೋಡಿ ಮುಂಬೈ ಮಾಫಿಯಾ ಸೇರಿದಂತೆ ವಿಶ್ವದ ದೊಡ್ಡ ದೊಡ್ಡ ಏಜೆನ್ಸಿಗಳು ಯಾಕೆ ನಡುಗುತ್ತವೆ ಎಂಬ ಪ್ರಶ್ನೆಗಳಿಗೆ ಸೀಕ್ವೆಲ್‌ನಲ್ಲಿ ಉತ್ತರ ಸಿಗಲಿದೆ.

ಬಾಕ್ಸಾಫೀಸ್ ಲೆಕ್ಕಾಚಾರ

ತೆಲುಗು, ತಮಿಳು, ಕನ್ನಡ ಸಿನಿಮಾಗಳಷ್ಟು ದೊಡ್ಡಮಟ್ಟದಲ್ಲಿ ಮಲಯಾಳಂ ಸಿನಿಮಾಗಳು ಸದ್ದು ಮಾಡುತ್ತಿರಲಿಲ್ಲ. ಆದರೆ ಇತ್ತೀಚೆಗೆ ಆ ಲೆಕ್ಕಾಚಾರ ಬದಲಾಗಿದೆ. 'L2: ಎಂಪುರಾನ್' ಇದನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಸುಳಿವು ಸಿಗುತ್ತಿದೆ. ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರ, ತೆಲಂಗಾಣ ಹೀಗೆ ಎಲ್ಲಾ ರಾಜ್ಯಗಳಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಚೆನ್ನಾಗಿದೆ. ಗಲ್ಫ್ ದೇಶಗಳಲ್ಲಿ ಕೂಡ ಸಿನಿಮಾ ದೊಡ್ಡ ಓಪನಿಂಗ್ ಪಡೆಯುವ ಸುಳಿವು ಸಿಕ್ಕಿದೆ. ಈಗಾಗಲೇ 10 ಲಕ್ಷಕ್ಕೂ ಹೆಚ್ಚು ಟಿಕೆಟ್ ಮಾರಾಟವಾಗಿದೆ.

More from Filmibeat

English summary
L2: Empuraan emerged as only malayalam movie to do 2Cr Presales at Karnataka Box Office
Read more about: mohanlal mollywood box office
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X