ಮತ್ತೆ ಹಾಟ್ ಫೋಟೊ ಹರಿಬಿಟ್ಟ ಮೀರಾ ಜಾಸ್ಮಿನ್
ಮಲಯಾಳಂ ನಟಿ ಮೀರಾ ಜಾಸ್ಮಿನ್ ಅನ್ನು ಕನ್ನಡ ಸಿನಿಮಾ ಪ್ರೇಮಿಗಳು ಮರೆತಿರಲಿಕ್ಕೆ ಸಾಧ್ಯವಿಲ್ಲ. ಸುಲಭಕ್ಕೆ ಮರೆಯುವಂತಹಾ ಸೌಂದರ್ಯ, ನಟನಾ ಪ್ರತಿಭೆ ಅವರದ್ದಲ್ಲ.
ಪುನೀತ್ ರಾಜ್‌ಕುಮಾರ್ ನಟಿಸಿದ್ದ 'ಮೌರ್ಯ' ಸಿನಿಮಾ ಮೂಲಕ ಕನ್ನಡದಲ್ಲಿ ನಟನೆ ಆರಂಭಿಸಿದ್ದ ಮೀರಾ ಜಾಸ್ಮಿನ್ ಅದೊಂದೆ ಸಿನಿಮಾದ ಮೂಲಕ ಕನ್ನಡ ಸಿನಿ ಪ್ರೇಕ್ಷಕರಿಗೆ ಹತ್ತಿರವಾಗಿದ್ದರು. ಬಳಿಕ ಪುನೀತ್ ನಟನೆಯ 'ಅರಸು' ಸಿನಿಮಾದಲ್ಲಿಯೂ ನಟಿಸಿ ಇನ್ನಷ್ಟು ಹತ್ತಿರವಾದರು.
ಬಳಿಕ 'ಇಜ್ಜೋಡು', 'ದೇವರು ಕೊಟ್ಟ ತಂಗಿ', ರವಿಚಂದ್ರನ್ ಜೊತೆಗೆ 'ಹೂ' ಸಿನಿಮಾಗಳಲ್ಲಿ ನಟಿಸಿದರಾದರೂ 'ಮೌರ್ಯ', 'ಅರಸು' ಅಷ್ಟು ಈ ಸಿನಿಮಾಗಳು ಗಮನ ಸೆಳೆಯಲಿಲ್ಲ. ಆರಂಭದಲ್ಲಿ ದೊಡ್ಡ ಮಟ್ಟದ ಯಶಸ್ಸು ಗಳಿಸಿದ ಮೀರಾ ಜಾಸ್ಮಿನ್ ಒಮ್ಮೆಲೆ ಸಿನಿಮಾ ರಂಗದಿಂದಲೇ ಮರೆಯಾಗಿಬಿಟ್ಟಿದ್ದರು. 2016 ರಲ್ಲಿ ನಟಿಸಿದ 'ಪತ್ತು ಕಲ್ಪನಕ್ಕು' ಅವರ ಕೊನೆಯ ಸಿನಿಮಾ. ಬಳಿಕ 2018 ರ 'ಪೂಮರಂ' ಮಲಯಾಳಂ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದರಷ್ಟೆ.

ಆದರೆ ಈಗ ಮತ್ತೆ ಸಿನಿಮಾ ರಂಗದ ಕಡೆಗೆ ಮುಖ ಮಾಡಲು ತಯಾರಾಗಿರುವ ಮೀರಾ ಜಾಸ್ಮಿನ್ ಸತತವಾಗಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹಾಟ್ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ಹಾಟ್ ಫೊಟೊಗಳನ್ನು ಹಂಚಿಕೊಂಡಿದ್ದ ಮೀರಾ ಜಾಸ್ಮಿನ್ ಈಗ ಮತ್ತೆ ಕೆಲವು ಹಾಟ್ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಇದೀಗ ಮಲಯಾಳಂನ 'ಮಕಲ್' ಸಿನಿಮಾದಲ್ಲಿ ನಟಿಸುತ್ತಿರುವ ಮೀರಾ ಜಾಸ್ಮಿನ್ ತೆಲುಗಿನಲ್ಲಿ ಕೆಲವು ಅವಕಾಶಗಳನ್ನು ಬಾಚಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಬೊಯಪಾಟಿ ಶ್ರೀನು ನಿರ್ದೇಶನದ ಸಿನಿಮಾದಲ್ಲಿ ಮೀರಾ ಜಾಸ್ಮಿನ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.
ಮೀರಾ ಜಾಸ್ಮಿನ್ ಮರು ಎಂಟ್ರಿಗೆ ಮಲಯಾಳಂನ ಹಲವು ಹಿರಿಯ ನಟಿಯರು, ಮೀರಾ ಅವರ ಸಮಕಾಲೀನ ನಟಿಯರು ಶುಭಾಶಯ ಕೋರಿದ್ದಾರೆ. ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿದ್ದ ನಟಿ ಮೀರಾ ಜಾಸ್ಮಿನ್ ತಮ್ಮ ಹೊಸ ಇನ್ನಿಂಗ್ಸ್‌ನಲ್ಲಿ ಯಾವ ರೀತಿಯ ಮೋಡಿ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











