7ನೇ ವಯಸ್ಸಲ್ಲೇ ಟೀಚರ್‌ನಿಂದ ದೈಹಿಕ ಕಿರುಕುಳ ; 10ವರ್ಷದ ನರಕಯಾತನೆ ನೆನೆದು ಖ್ಯಾತ ನಟಿ ಭಾವುಕ

ಇಂದು ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಪುರುಷನಿಗೆ ಸರಿ ಸಮಾನವಾಗಿ ಮಹಿಳೆ ನಿಲ್ಲುವ ಪ್ರಯತ್ನ ಮಾಡುತ್ತಿದ್ದಾಳೆ. ಸಾಮಾಜಿಕವಾಗಿ.. ಆರ್ಥಿಕವಾಗಿ... ರಾಜಕೀಯವಾಗಿ.. ಮಹಿಳೆ ಸಬಲಳಾಗುತ್ತಿದ್ದಾಳೆ ಎನ್ನುವುದಕ್ಕೆ ಹಲವಾರು ಉದಾಹರಣೆಗಳಿವೆ. ಆ ಕ್ಷೇತ್ರ.. ಈ ಕ್ಷೇತ್ರ ಎಂದಲ್ಲ. ಹಲವು ಕ್ಷೇತ್ರಗಳಲ್ಲಿ ಪುರುಷನನ್ನೇ ಮಹಿಳೆ ಮೀರಿ ನಿಂತಿದ್ದಾಳೆ.

ಆದರೆ, ಕಾಲ ಎಷ್ಟೇ ಬದಲಾದರು ಕೂಡ ಮಹಿಳೆಯರ ಮೇಲಿನ ಶೋ‍ಷಣೆ...ದೌರ್ಜನ್ಯ ಮಾತ್ರ ಇವತ್ತು ಕೂಡ ಕಡಿಮೆಯಾಗಿಲ್ಲ. ಕೆಲಸ ಮಾಡುವ ಕಛೇರಿಗಳಿಂದ ಹಿಡಿದು ಸಾರ್ವಜನಿಕ ಸ್ಥಳದವರೆಗೆ .. ಪರಿಚಿತರಿಂದಲೇ ದೌರ್ಜನ್ಯ ಅಪರಿಚಿತರಿಂದ ಲೈಂ*ಗಿಕ ಕಿರುಕುಳ, ಶೋಷಣೆ ನಡೆಯುತ್ತಲೇ ಇವೆ.

Meera Vasudevan Breaks Her Silence I Was Abused by My Tutor for 10 Years

ಇನ್ನು ಈ ಕಾ*ಮಾಂಧರು ಮಕ್ಕಳನ್ನು ಕೂಡ ಬಿಡುವುದಿಲ್ಲ. ಮಕ್ಕಳ ಮೇಲಿನ ಲೈಂ*ಗಿಕ ದೌರ್ಜನ್ಯ ಜಾಗತಿಕ ಹಂತದಲ್ಲಿ ದೊಡ್ಡ ಪೀಡುಗಾಗಿದೆ. ಭಾರತದಲ್ಲಿ ಪ್ರತಿ ಮೂವರಲ್ಲಿ ಒಬ್ಬ ಮಹಿಳೆ ಮೇಲೆ ಮತ್ತು ಏಳರಲ್ಲಿ ಒಬ್ಬ ಪುರುಷನ ಮೇಲೆ 18 ತುಂಬುವ ಮೊದಲೇ ಬಾಲ್ಯದಲ್ಲೇ ಲೈಂ*ಗಿಕ ದೌರ್ಜನ್ಯ ನಡೆದಿರುತ್ತದೆ ಎಂದು ''ದಿ ಲ್ಯಾನ್ಸೆಟ್'' ಅಧ್ಯಯನ ವರದಿ ಹೇಳುತ್ತದೆ. ಇದೇ ತರಹದ ದೌರ್ಜನ್ಯಕ್ಕೆ ಬಾಲ್ಯದಲ್ಲಿ ಒಳಗಾದವರಲ್ಲಿ ಮೀರಾ ವಾಸುದೇವನ್ ಕೂಡ ಒಬ್ಬರು.

ಹೌದು, ಮೀರಾ ವಾಸುದೇವನ್... ಮಲಯಾಳಂ ಚಿತ್ರರಂಗದಲ್ಲಿ ಬದುಕು ಕಟ್ಟಿಕೊಂಡ ಮುಂಬೈ ಮೂಲದ ತಮಿಳು ಚೆಲುವೆ. ಹೆಚ್ಚು ಕಡಿಮೆ ಮೂರು ದಶಕಗಳಿಂದ ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡಿರುವ ಮೀರಾ ಕೇವಲ ಮಲಯಾಳಂನಲ್ಲಿ ಅಷ್ಟೇ ಅಲ್ಲ, ಹಿಂದಿ.. ತೆಲುಗು ಮತ್ತು ತಮಿಳು ಚಿತ್ರಗಳಲ್ಲಿಯೂ ನಟಿಸಿದ್ದಾರೆ.

''ಅಂಜಲಿ ಐ ಲವ್ ಯೂ''.. ''ತನ್ಮಾತ್ರ'' .. ''ಜೆರ್ರಿ'' .. ''ಗುಲ್ಮೋಹರ್''.. ''13 ಬಿ'' .. ''ರೂಲ್ಸ್- ಪ್ಯಾರ್ ಕಾ ಸೂಪರ್ ಹಿಟ್ ಫಾರ್ಮುಲಾ''.. ಹೀಗೆ ಇಲ್ಲಿಯವರೆಗೆ ಹತ್ತಾರು ಚಿತ್ರ.. ಹಲವಾರು ಪಾತ್ರ.. ಮಾಡಿರುವ ಮೀರಾ ವಾಸುದೇವನ್ ಇಲ್ಲಿಯವರೆಗೆ ಮೂರು ಮದುವೆ ಮಾಡಿಕೊಂಡಿದ್ದಾರೆ. ಆದರೆ ಇವರಿಗೆ ಸಂಸಾರದ ಸುಖ ಮಾತ್ರ ಸಿಗಲಿಲ್ಲ.

ಇಂಥಾ ಮೀರಾ ವಾಸುದೇವನ್ ಬಾಲ್ಯದಲ್ಲಿ ತಮ್ಮ ಮೇಲಾದ ಲೈಂ*ಗಿಕ ದೌರ್ಜನ್ಯದ ಕುರಿತು ಮಾತನಾಡಿದ್ದಾರೆ. 10 ವರ್ಷ ನರಕ ಅನುಭವಿಸಿದ್ದೇನೆ ಎಂದು ಬಿಕ್ಕಿದ್ದಾರೆ.

Meera Vasudevan Breaks Her Silence I Was Abused by My Tutor for 10 Years

ಈ ಕುರಿತು '''ಧನ್ಯಾ ವರ್ಮಾ'' ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಮೀರಾ ವಾಸುದೇವನ್, ನನಗಾಗ 7-8 ವರ್ಷ. ನಾನು ತಮಿಳಿನಲ್ಲಿ ಸ್ವಲ್ಪ ವೀಕ್ ಇದ್ದೆ, ಹೀಗಾಗಿ ನಮ್ಮ ಅಜ್ಜಿ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬನ ಹತ್ತಿರ ನಾನು ಟ್ಯೂಷನ್ ಹೋಗುತ್ತಿದ್ದೆ, ಆದರೆ ಆತ ಪಾಠ ಮಾಡುವ ಬದಲು ನನ್ನ ಮೇಲೆ ದೌರ್ಜನ್ಯ ಎಸಗುತ್ತಿದ್ದ ಎಂದಿದ್ದಾರೆ. ಕೇವಲ ನನ್ನ ಮೇಲೆ ಮಾತ್ರ ಅಲ್ಲ ಅಲ್ಲಿ ಬರುತ್ತಿದ್ದ ಬೇರೆಯವರ ಮೇಲೂ ಕೂಡ ಆತ ದೌರ್ಜನ್ಯ ನಡೆಸುತ್ತಿದ್ದ ಎಂದಿದ್ದಾರೆ.

ನಿರಂತರ ಬೆದರಿಕೆ

ನಾನು ಒಳ್ಳೆಯ ಹುಡುಗಿ ಅಲ್ಲ ಅಂತ, ನಿನ್ನ ಅಪ್ಪ-ಅಮ್ಮನ ಹತ್ತಿರ ಹೇಳ್ತೀನಿ, ಆಗ ಅವರು ನಿನ್ನನ್ನು ಮನೆಯಿಂದ ಹೊರ ಹಾಕ್ತಾರೆ, ಅವರು ಆ ನಂತರ ಆತ್ಮ*ಹತ್ಯೆ ಮಾಡಿಕೊಳ್ತಾರೆ ಎಂದು ಸದಾ ಬೆದರಿಕೆ ಹಾಕುತ್ತಿದ್ದ ಎಂದು ಹೇಳಿರುವ ಮೀರಾ ಆಗಿನ್ನೂ ನಮಗೆ ಲೈಂ*ಗಿಕ ಶಿಕ್ಷಣದ ಅರಿವು ಇರಲಿಲ್ಲ, ಚಿಕ್ಕ ವಯಸ್ಸು, ಅವರ ಮಾತು ಕೇಳಿ ನಾನು ಹೆದರುತ್ತಿದ್ದೆ ಎಂದಿದ್ದಾರೆ.

ನಮ್ಮ ದೌರ್ಬಲ್ಯವೇ ಅವರ ಅಸ್ತ್ರ

ಮುಂದುವರೆದು ಬಾಡಿ ಲ್ಯಾಂಗ್ವೇಜ್ ತುಂಬಾ ಮುಖ್ಯ, ಈ ಕಾ*ಮಾಂಧರು ಅದನ್ನೇ ಗಮನಿಸುತ್ತಾರೆ ಎಂದು ಹೇಳಿರುವ ಮೀರಾ ವಾಸುದೇವನ್, ದೌರ್ಜನ್ಯಕ್ಕೆ ಒಳಗಾದವರ ಹಾವ ಭಾವ ಬದಲಾಗಿಬಿಡುತ್ತದೆ,
ದೇಹದ ಭಾಷೆ ಬದಲಾಗುತ್ತದೆ, ಮುಖದಲ್ಲಿ ಹೆದರಿಕೆ ಕಾಣಿಸುತ್ತದೆ, ಅವರು ಸುಲಭವಾಗಿ ಬಗ್ಗುತ್ತಾರೆ. ಇದನ್ನೇ ಅವರು ದುರುಪಯೋಗಪಡಿಸಿಕೊಳ್ಳುತ್ತಾರೆ ಎಂದಿದ್ದಾರೆ. ಯಾವುದೇ ಕೆಟ್ಟ ಅನುಭವ ಆಗದವರು, ಏನಾದರೂ ಆದರೆ ತಕ್ಷಣ ಪ್ರತಿಕ್ರಿಯಿಸುತ್ತಾರೆ ಎಂದಿದ್ದಾರೆ.

ಅಪ್ಪ-ಅಮ್ಮನ ಜೊತೆ ಗಲಾಟೆ

ನಾನು ಕಿರುಚುತ್ತಿದ್ದೆ, ಕಣ್ಣೀರು ಹಾಕುತ್ತಿದ್ದೆ, ನನಗೆ ನಾನೇ ಗಾಯ ಮಾಡಿಕೊಳ್ಳುತ್ತಿದ್ದೆ, ನನ್ನ ಮಾತು ಯಾರು ಅರ್ಥ ಮಾಡಿಕೊಳ್ಳಲ್ಲ ಎಂದುಕೊಂಡು ಸುಮ್ಮನಾದೆ ಎಂದು ಹೇಳಿರುವ ಮೀರಾ ಸ್ನೇಹಿತರ ಬಳಿ ಹೇಳಿಕೊಳ್ಳೋಣ ಅಂದರೆ ನನಗೆ ಸ್ನೇಹಿತರು ಇರಲಿಲ್ಲ ಎಂದಿದ್ದಾರೆ.

ಇನ್ನು ನನಗೇನಾಗುತ್ತಿದೆ ಎನ್ನುವುದೇ ನನಗೆ ಅರ್ಥ ಆಗ್ತಿರಲಿಲ್ಲ, ಹೀಗಾಗಿ ಅಪ್ಪ-ಅಮ್ಮನಿಗೆ ಇದೆಲ್ಲಾ ಹೇಗೆ ಹೇಳುವುದು ಎನ್ನುವುದು ಕೂಡ ನನಗೆ ಗೊತ್ತಾಗುತ್ತಿರಲಿಲ್ಲ ಎಂದು ಹೇಳಿರುವ ಮೀರಾ ವಾಸುದೇವನ್ ನನ್ನ ತಂಗಿಯನ್ನು ಕೂಡ ಅವನ ಹತ್ತಿರವೇ ಟ್ಯೂಷನ್‌ಗೆ ಸೇರಿಸಲು ಮನೆಯಲ್ಲಿ ಮುಂದಾದಾಗ ನಾನು ಗಲಾಟೆ ಮಾಡಿದ್ದೆ ಎಂದಿದ್ದಾರೆ. ನನಗೆ 17 ವರ್ಷ ಆಗುವರೆಗೆ ನಾನು ಈ ನರಕ ಯಾತನೆ ಅನುಭವಿಸಿದ್ದೇನೆ ಎಂದು ಭಾವುಕರಾಗಿದ್ದಾರೆ.

English summary
Actress Meera Vasudevan shares her shocking childhood trauma, revealing she was abused by her tutor for 10 years. Read her powerful story.
Read more about: harrasment mollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X