42ನೇ ವಯಸ್ಸಿನಲ್ಲಿ ತನಗಿಂತ 06 ವರ್ಷ ಚಿಕ್ಕವನ ಜೊತೆ ಮೂರನೇ ಮದುವೆಯಾದ ಖ್ಯಾತ ನಾಯಕಿ...!
ಇಂದು ಖುಷಿ ಖುಷಿಯಾಗಿ ನಿಂತು ಹಸೆಮಣೆ ಏರಿ ಮದುವೆಯಾದವರು ದಿನ ಕಳೆಯುವಷ್ಟರಲ್ಲಿ ಕೋರ್ಟ್ ಮೆಟ್ಟಿಲೇರುವ ಮಟ್ಟಿಗೆ ಮದುವೆ, ದಾಂಪತ್ಯ ಅನ್ನೋದು ಕಾಮನ್ನಾಗಿರೋದು ದುರ್ದೈವ. ಅದರಲ್ಲೂ ಸಿನಿಮಾ ಮಂದಿಗೆ ಇದು ಬಟ್ಟೆ ಬದಲಿಸಿದಷ್ಟೇ ಸುಲಭ ಸಾಧ್ಯ. ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ಮಾಲಿವುಡ್ ನ ನಾಯಕಿ ಮೀರಾ ವಾಸುದೇವನ್ ತಮ್ಮ 42ನೇ ವಯಸ್ಸಿನಲ್ಲಿ ಮೂರನೇ ಮದುವೆಯಾಗಿದ್ದಾರೆ.
ಹೌದು, ಮೀರಾ ವಾಸುದೇವನ್... ಮಲಯಾಳಂ ಚಿತ್ರರಂಗದಲ್ಲಿ ಬದುಕು ಕಟ್ಟಿಕೊಂಡ ಮುಂಬೈ ಮೂಲದ ತಮಿಳು ಚೆಲುವೆ. ಹೆಚ್ಚು ಕಡಿಮೆ ಮೂರು ದಶಕಗಳಿಂದ ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡಿರುವ ಮೀರಾ ಕೇವಲ ಮಲಯಾಳಂನಲ್ಲಿ ಅಷ್ಟೇ ಅಲ್ಲ, ಹಿಂದಿ.. ತೆಲುಗು ಮತ್ತು ತಮಿಳು ಚಿತ್ರಗಳಲ್ಲಿಯೂ ನಟಿಸಿದ್ದಾರೆ.

ಅಂಜಲಿ ಐ ಲವ್ ಯೂ.. ತನ್ಮಾತ್ರ .. ಜೆರ್ರಿ .. ಗುಲ್ಮೋಹರ್.. 13 ಬಿ .. ರೂಲ್ಸ್- ಪ್ಯಾರ್ ಕಾ ಸೂಪರ್ ಹಿಟ್ ಫಾರ್ಮುಲಾ.. ಹೀಗೆ ಇಲ್ಲಿಯವರೆಗೆ ಹತ್ತಾರು ಚಿತ್ರ.. ಹಲವಾರು ಪಾತ್ರ.. ಮಾಡಿರುವ ಮೀರಾ ವಾಸುದೇವನ್ ಈಗ ತಮ್ಮ 42ರ ಹರೆಯದಲ್ಲಿ ಮಲಯಾಳಂ ಚಿತ್ರರಂಗದಲ್ಲಿಯೇ ಸಿನಿಮ್ಯಾಟೋಗ್ರಾಫರ್ ಆಗಿ ಗುರುತಿಸಿಕೊಂಡಿರುವ ವಿಪಿನ್ ಜೊತೆ ಸಪ್ತಪದಿ ತುಳಿದಿದ್ದಾರೆ. ವಿಶೇಷ ಅಂದರೆ ಮೀರಾ ವಾಸುದೇವನ್ ಅವರಿಗಿಂತ ವಿಪಿನ್ ನಯಂಗಮ್ ಆರು ವರ್ಷ ಚಿಕ್ಕವರು
ಇನ್ನೂ ಮೀರಾ ವಾಸುದೇವನ್ ಅವರಿಗೆ ಇದು ಮೊದಲ ಮದುವೆಯಲ್ಲ, ಮೂರನೇ ಮದುವೆ. ಈ ಹಿಂದೆ ಸರಿ ಸುಮಾರು 19 ವರ್ಷದ ಹಿಂದೆ ವಿಶಾಲ್ ಅಗರ್ ವಾಲ್ ಅವರನ್ನ ಮೀರಾ ಮದುವೆಯಾಗಿದ್ದರು. ಆದರೆ ಆ ಸಂಬಂಧ ಐದೇ ವರ್ಷಕ್ಕೆ ಉಸಿರು ಚೆಲ್ಲಿತು. ವಿಶಾಲ್ ಅಗರ್ ವಾಲ್ ಅವರಿಂದ ದೂರವಾದ ನಂತರ ಮೀರಾ ಮಲಯಾಳಂನ ಜನಪ್ರಿಯ ನಟ ಜಾನ್ ಕೊಕ್ಕೆನ್ ಜೊತೆ ಕಾಣಿಸಿಕೊಂಡರು. ಆ ನಂತರ ಜಾನ್ ಜೊತೆ ಮದುವೆಯಾಗಿ ಒಂದು ಮಗುವಿಗೆ ತಾಯಿಯೂ ಆದರು. ಆದರೂ ಅದ್ಯಾಕೋ ಈ ಸಂಬಂಧ ಕೂಡ ಹೆಚ್ಚು ದಿನ ಉಳಿಯಲಿಲ್ಲ. 2016ರಲ್ಲಿ ಮೀರಾ ವಾಸುದೇವನ್, ಜಾನ್ ಕೊಕ್ಕೆನ್ ಅವರಿಂದ ವಿಚ್ಛೇದನ ಪಡೆದು ದೂರವಾದರು.
ಈಗ ಮೀರಾ ವಯಸ್ಸಿನಲ್ಲಿ ತನಗಿಂತ ಆರು ವರ್ಷ ಚಿಕ್ಕವನಾದ ವಿಪಿನ್ ನಯಂಗಮ್ ಜೊತೆ ಸಪ್ತಪದಿಯನ್ನ ತುಳಿದಿದ್ದಾರೆ. ತಮ್ಮ ಕುಟುಂಬಸ್ಥರ ಸಮ್ಮುಖದಲ್ಲಿ ಅತ್ಯಂತ ಸರಳವಾಗಿ ಮದುವೆಯಾಗಿದ್ದಾರೆ. ಅಂದ್ಹಾಗೇ ವಿಪಿನ್ ಜೊತೆ ಮೀರಾ ಹೊಸ ಬದುಕನ್ನ ಆರಂಭ ಮಾಡಿ ಆಗ್ಲೇ ಒಂದು ತಿಂಗಳಾಗಿದ್ದು, ಮದುವೆಯ ವಿಚಾರವನ್ನ ಮೀರಾ ಇಂದು ಹಂಚಿಕೊಂಡಿದ್ದಾರೆ. ನಾವು ಸತಿ-ಪತಿಗಳಾಗಿ ವಿವಾಹ ನೊಂದಣಿಯನ್ನ ಮಾಡಿಕೊಂಡಿದ್ದೇವೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಸದ್ಯಕ್ಕೆ ಮೀರಾ ವಾಸುದೇವನ್ ಮತ್ತು ವಿಪಿನ್ ಅವರಿಗೆ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ. ನವ ಜೋಡಿಗೆ ಮಲಯಾಳಂ ಚಿತ್ರರಂಗ ಹರಸಿ ಹಾರೈಸುತ್ತಿದೆ.


Click it and Unblock the Notifications











