ಒಂದೇ ವರ್ಷದಲ್ಲಿ 36 ಸಿನಿಮಾಗಳಲ್ಲಿ ನಟಿಸಿದ್ದ ಸ್ಟಾರ್ ನಟ ಯಾರು?

ಸ್ಟಾರ್ ನಟರು ಹೆಚ್ಚು ಹೆಚ್ಚು ಚಿತ್ರಗಳಲ್ಲಿ ನಟಿಸಬೇಕು ಎನ್ನುವ ಬೇಡಿಕೆ ಇದ್ದೇ ಇದೆ. ವರ್ಷಕ್ಕೆ ಮೂರ್ನಾಲ್ಕು ಚಿತ್ರಗಳಲ್ಲಿ ಸ್ಟಾರ್‌ಗಳು ನಟಿಸಿದರೆ ಮಾತ್ರ ಚಿತ್ರರಂಗಕ್ಕೆ ಉಳಿಗಾಲ ಎಂದು ಕೆಲವರು ಹೇಳುತ್ತಾರೆ. ಆದರೆ ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಬಳಿಕ ಎರಡ್ಮೂರು ವರ್ಷಗಳಿಗೆ ಒಂದೊಂದು ಸಿನಿಮಾ ಬರ್ತಿದೆ.

ಚಿತ್ರರಂಗ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ. ದೊಡ್ಡ ಸಿನಿಮಾಗಳು ಇಲ್ಲದೇ ಚಿತ್ರಮಂದಿರಗಳು ಖಾಲಿ ಹೊಡೆಯುತ್ತಿದೆ. ಹಾಗಾಗಿ ಕೆಲ ದಿನಗಳ ಕಾಲ ಚಿತ್ರಮಂದಿರಗಳ ಬಾಗಿಲು ಮುಚ್ಚಲು ಚರ್ಚೆ ನಡೀತಿದೆ. ವಿತರಕರು, ಚಿತ್ರಮಂದಿರದ ಮಾಲೀಕರು ಸ್ಟಾರ್ ನಟರು ಹೆಚ್ಚು ಸಿನಿಮಾ ಮಾಡಬೇಕು ಎಂದು ಬೇಡಿಕೆ ಇಡುತ್ತಲೇ ಇದ್ದಾರೆ. ಮನೆ ಕಟ್ಟೋಕೆ 6 ತಿಂಗಳು ಸಾಕು, ಅರಮನೆ ಕಟ್ಟೋಕೆ ಹೆಚ್ಚು ಸಮಯ ಬೇಕು ಎಂದು ಪ್ಯಾನ್ ಇಂಡಿಯಾ ಚಿತ್ರಗಳ ಬಗ್ಗೆ ಚಿತ್ರರಂಗದಲ್ಲಿ ಕೆಲವರು ಹೇಳಿಕೊಂಡು ಸುತ್ತುತ್ತಿದ್ದಾರೆ.

Meet the actor who made history by starring in 36 films in a single year

ಡಾ. ರಾಜ್‌ಕುಮಾರ್, ವಿಷ್ಣುವರ್ಧನ್ ವರ್ಷಕ್ಕೆ ಏಳೆಂಟು ಚಿತ್ರಗಳಲ್ಲಿ ನಟಿಸುತ್ತಿದ್ದರು. ಒಂದೇ ವರ್ಷ ಅಣ್ಣಾವ್ರ ಆರೇಳು ಸಿನಿಮಾಗಳು ಬಿಡುಗಡೆಯಾಗಿರುವ ಉದಾಹರಣೆಯಿದೆ. ಎಲ್ಲಾ ಸಿನಿಮಾಗಳು ಗೆಲ್ಲುತ್ತಿದ್ದವು. ಈಗಿನ ನಟರಿಗೆ ಇದು ಯಾಕೆ ಸಾಧ್ಯವಿಲ್ಲ ಎಂದು ಕೇಳುವವರು ಇದ್ದಾರೆ. ಇನ್ನು ಮಲಯಾಳಂ ನಟ ಮೊಮ್ಮಟ್ಟಿ ಒಂದೇ ವರ್ಷದಲ್ಲಿ 36 ಸಿನಿಮಾಗಳಲ್ಲಿ ನಟಿಸಿ ದಾಖಲೆ ಬರೆದಿದ್ದರು.

ಈಗಾಗಲೇ 400ಕ್ಕೂ ಅಧಿಕ ಸಿನಿಮಾಗಳಲ್ಲಿ ಮಮ್ಮುಟಿ ಬಣ್ಣ ಹಚ್ಚಿದ್ದಾರೆ. 1983ರಲ್ಲಿ ಬರೋಬ್ಬರಿ 36 ಸಿನಿಮಾಗಳಲ್ಲಿ ನಟಿಸಿ ಹುಬ್ಬೇರಿಸಿದ್ದರು. ಇವತ್ತಿಗೂ ಸಾಲು ಸಾಲು ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಮಲಯಾಳಂ ಮಾತ್ರವಲ್ಲದೇ ತೆಲುಗು, ತಮಿಳು, ಕನ್ನಡ ಹಾಗೂ ಹಿಂದಿ ಸಿನಿಮಾಗಳಲ್ಲಿ ಕೂಡ ನಟಿಸಿ ಗೆದ್ದಿದ್ದಾರೆ.

Meet the actor who made history by starring in 36 films in a single year

ವಯಸ್ಸು 70 ದಾಟಿದರೂ ಸಿಕ್ಕಾಪಟ್ಟೆ ಯಂಗ್ ಅಂಡ್ ಎನರ್ಜಿಟಿಕ್ ಆಗಿ ಸಿನಿಮಾಗಳಲ್ಲಿ ನಟಿಸುತ್ತಾರೆ. 1984ರಲ್ಲಿ ಕೂಡ ಮಮ್ಮುಟಿ ನಟಿಸಿದ 30ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆ ಆಗಿದ್ದವು. ಕಳೆದ ವರ್ಷ 3 ಸಿನಿಮಾಗಳಲ್ಲಿ ನಟಿಸಿದ್ದರು. ಈ ವರ್ಷ ಕೂಡ 3 ಚಿತ್ರಗಳು ಅವರ ಕೈಯಲ್ಲಿದೆ. ಮಮ್ಮುಟಿ ಪುತ್ರ ದುಲ್ಕರ್ ಸಲ್ಮಾನ್ ಕೂಡ ಸ್ಟಾರ್ ನಟನಾಗಿ ಮೆರೆಯುತ್ತಿದ್ದಾರೆ. ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಮೋಡಿ ಮಾಡುತ್ತಿದ್ದಾರೆ. ಕಳೆದ ವರ್ಷ 'ಲಕ್ಕಿ ಭಾಸ್ಕರ್' ಚಿತ್ರದ ಮೂಲಕ ಮತ್ತೊಮ್ಮೆ ಕಮಾಲ್ ಮಾಡಿದ್ದರು.

1971ರಲ್ಲಿ ಮಮ್ಮುಟಿ ಚಿತ್ರರಂಗ ಪ್ರವೇಶಿಸಿದರು. ಸಣ್ಣ ಪುಟ್ಟ ಪಾತ್ರಗಳ ಮೂಲಕ ನಟನೆ ಆರಂಭಿಸಿದ ಅವರು ನಿಧಾನವಾಗಿ ಹೀರೊ ಆಗಿ ಬಡ್ತಿ ಪಡೆದಿದ್ದರು. ವಾಸುದೇವ್ ನಾಯರ್ ನಿರ್ದೇಶನದ 'ದೇವಲೋಕಂ' ಚಿತ್ರದಲ್ಲಿ ಒಂದೊಳ್ಳೆ ಪಾತ್ರ ಸಿಕ್ಕಿತ್ತು. ಆದರೆ ಆ ಸಿನಿಮಾ ನಿಂತೇಹೋಯಿತು. 1981ರಲ್ಲಿ ಬಂದ 'ತ್ರಿಷ್ಣ' ಚಿತ್ರದಲ್ಲಿ ಮೊದಲ ಬಾರಿಗೆ ಹೀರೊ ಆಗಿ ನಟಿಸಿದರು. ಬಳಿಕ ಹಿಂತಿರುಗಿ ನೋಡಲಿಲ್ಲ. ಅಲ್ಲಿಂದ ಮುಂದೆ ಮಮ್ಮುಟಿ ನಟನೆಯ ಸಿನಿಮಾಗಳ ಸಂಖ್ಯೆ ಹೆಚ್ಚುತ್ತಾ ಹೋಯಿತು.

ಬರೀ ಹೀರೊ ಆಗಿ ಮಾತ್ರವಲ್ಲ ನಟನೆಗೆ ಅವಕಾಶ ಇರುವ ಪಾತ್ರಗಳಲ್ಲಿ ನಟಿಸಿ ಮಮ್ಮುಟಿ ಗಮನ ಸೆಳೆಯುತ್ತಾ ಬಂದರು. ಮೂರು ರಾಷ್ಟ್ರಪ್ರಶಸ್ತಿ, 7 ಕೇರಳ ರಾಜ್ಯ ಪ್ರಶಸ್ತಿ, 14 ಫಿಲ್ಮ್‌ಫೇರ್, ಪದ್ಮಶ್ರೀ ಸೇರಿ ಹಲವು ಪ್ರಶಸ್ತಿ ಗೌರವಗಳನ್ನು ಮಮ್ಮುಟಿ ಸ್ವೀಕರಿಸಿದ್ದಾರೆ. ಒಟ್ಟಾರೆ ಒಂದೇ ವರ್ಷದಲ್ಲಿ 36 ಸಿನಿಮಾಗಳಲ್ಲಿ ನಟಿಸಿದ್ದು ನಿಜಕ್ಕೂ ಭಾರತೀಯ ಚಿತ್ರರಂಗದಲ್ಲೇ ಒಂದು ದಾಖಲೆಯಾಗಿ ಉಳಿದುಬಿಟ್ಟಿದೆ.

More from Filmibeat

English summary
Do you know the actor who appeared in 36 films in just one year?
Read more about: mollywood mammootty
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X