For Quick Alerts
  ALLOW NOTIFICATIONS  
  For Daily Alerts

  'ಮಿಲನ' ಖ್ಯಾತಿಯ ನಟಿ ಪಾರ್ವತಿ ವರ್ಕೌಟ್ ವಿಡಿಯೋ ವೈರಲ್

  |

  ಮಲಯಾಳಂನ ಖ್ಯಾತ ನಟಿ ಪಾರ್ವತಿ ತಿರುವೊತ್ತು ಯಾರಿಗೆ ತಾನೇ ಗೊತ್ತಿಲ್ಲ. ಮಲಯಾಳಂನ ಕೆಲವೇ ಕೆಲವು ಪ್ರತಿಭಾವಂತ ನಟಿಯರಲ್ಲಿ ಪಾರ್ವತಿ ಕೂಡ ಒಬ್ಬರು. ಪಾರ್ವತಿ ಮಲಯಾಳಂ ಮಾತ್ರವಲ್ಲದೆ ತಮಿಳು ಮತ್ತು ಕನ್ನಡ ಸಿನಿಮಾಗಳಲ್ಲಿಯೂ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.

  Sanjjanaa Galrani ಮಾಧ್ಯಮದವರ ಮೇಲೆ ಗರಂ ಆಗಿದ್ದೇಕೆ ? | Filmibeat Kannada

  ಕನ್ನಡಿಗರಿಗೆ ಪಾರ್ವತಿ ನೆಚ್ಚಿನ ನಟಿಯರಲ್ಲಿ ಒಬ್ಬರಾಗಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಮಿಲನ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ ಪಾರ್ವತಿ, ಕನ್ನಡದಲ್ಲಿ ದೊಡ್ಡ ಮಟ್ಟದ ಖ್ಯಾತಿ ಗಳಿಸಿದರು. ಬಳಿಕ 'ಮಳೆ ಬರಲಿ ಮಂಜೂ ಇರಲಿ', 'ಪೃಥ್ವಿ', 'ಅಂದರ್ ಬಾಹರ್' ಸಿನಿಮಾಗಳಲ್ಲಿ ನಟಿಸಿ ಮೆಚ್ಚುಗೆ ಗಳಿಸಿದ್ದಾರೆ.

  ಸ್ಟಾರ್ ನಟನ ವಿರುದ್ಧ ಆರೋಪಗಳ ಸುರಿಮಳೆ ಮಾಡಿದ 'ಮಿಲನ' ನಟಿಸ್ಟಾರ್ ನಟನ ವಿರುದ್ಧ ಆರೋಪಗಳ ಸುರಿಮಳೆ ಮಾಡಿದ 'ಮಿಲನ' ನಟಿ

  ಮಾಲಿವುಡ್ ನ ಸಹಜ ನಟನೆಯ ಈ ನಟಿಗೆ ಮನ ಸೋಲದವರಿಲ್ಲ. ಅಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಪಾರ್ವತಿ ಸದ್ಯ ಮಲಯಾಳಂ ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ. ಸಿನಿಮಾ ಜೊತೆಗೆ ಫಿಟ್ ನೆಸ್ ಕಡೆಯು ಗಮನ ಹರಿಸಿದ್ದಾರೆ. ಪಾರ್ವತಿ ಇತ್ತೀಚಿಗೆ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

  ಲಾಕ್ ಡೌನ್ ನಿಂದ ಸಿನಿಮಾ ಕೆಲಸಗಳಿಗೆ ಬ್ರೇಕ್ ಹಾಕಿರುವ ಪಾರ್ವತಿ ಜಿಮ್ ನಲ್ಲಿ ಫುಲ್ ಕಸರತ್ತು ಮಾಡುತ್ತಿದ್ದಾರೆ. ಫಿಟ್ನೆಸ್ ಫ್ರೀಕ್ ಆಗಿರುವ ಪಾರ್ವತಿ ತೂಕ

  Milana Fame Actress Parvathy Thiruvothu Workout Photos Viral

  ಇಳಿಸುತ್ತಿದ್ದಾರೆ. ಪಾರ್ವತಿ ವರ್ಕೌಟ್ ಫೋಟೋಗಳಿಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಹರಿದು ಬಂದಿದೆ.

  ಪಾರ್ವತಿ ಕೊನೆಯದಾಗಿ ವೈರಸ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇದೀಗ 'ರಾಚಿಯಮ್ಮ', 'ಹಲಾಲ್ ಲವ್ ಸ್ಟೋರಿ', 'ವರ್ತಮಾನಂ' ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪಾರ್ವತಿ ಯಾವಾಗ ಮತ್ತೆ ಕನ್ನಡ ಪ್ರೇಕ್ಷಕರನ್ನು ರಂಜಿಸಲು ಬರ್ತಾರೆ ಅಂತ ಕನ್ನಡ ಸಿನಿಮಾ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

  English summary
  Milana fame Actress Parvathy Thiruvothu workout photos viral. parvathy thiruvothu is currently busy with malayalam movies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X