ಮೋಹನ್ ಲಾಲ್ ಹೊಸ ಸಿನಿಮಾ 'ರಾಮ್'
ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಮತ್ತು ಜೀತು ಜೋಸೆಫ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದೆ.
ಹೆಸರಿಡದೆ ಕುತೂಹಲ ಹುಟ್ಟಿಸಿದ್ದ ಈ ಚಿತ್ರಕ್ಕೆ ಈಗ 'ರಾಮ್' ಎಂದು ನಾಮಕರಣ ಮಾಡಲಾಗಿದೆ. ಕಪ್ಪು ಮತ್ತು ಬಿಳುಪು ಕಾಂಬಿನೇಷನ್ ನಲ್ಲಿ ಈ ಪೋಸ್ಟರ್ ಡಿಸೈನ್ ಮಾಡಲಾಗಿದ್ದು, ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿಸಿದೆ.
ಜೀತು ಜೊಸೇಫ್ ನಿರ್ದೇಶನದ ಈ ಚಿತ್ರಕ್ಕೆ ರಮೇಶ್ ಪಿಳೈ ಮತ್ತು ಸುಧನ್ ಎಸ್ ಪಿಳೈ ನಿರ್ಮಿಸುತ್ತಿದ್ದಾರೆ. 2020ರ ಓನಮ್ ಪ್ರಯುಕ್ತ ಈ ಸಿನಿಮಾವನ್ನ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಮೋಹನ್ ಲಾಲ್ ಅವರ ''ಬಿಗ್ ಬ್ರದರ್'' ಸಿನಿಮಾ ಕ್ರಿಸ್ ಮಸ್ ಪ್ರಯುಕ್ತ ತೆರೆಗೆ ಬರಲು ಸಜ್ಜಾಗಿದೆ. ಕಳೆದ ವರ್ಷ ತೆರೆಕಂಡಿದ್ದ ಲೂಸಿಫರ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ 200 ಕೋಟಿ ಗಳಿಸಿತ್ತು. ಮಲಯಾಳಂ ಇಂಡಸ್ಟ್ರಿಯಲ್ಲಿ 200 ಕೋಟಿ ಗಳಿಸಿದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಜೀತು ಜೊಸೇಫ್ ಮತ್ತು ಮೋಹನ್ ಲಾಲ್ ಈ ಹಿಂದೆ ದೃಶ್ಯಂ ಸಿನಿಮಾದಲ್ಲಿ ಕೆಲಸ ಮಾಡಿದ್ದರು. ರಾಮ್ ಸಿನಿಮಾ ಬಿಟ್ಟು ಮರಕ್ಕರ್, ಹಾಗೂ ಲೂಸಿಫರ್ 2 ಚಿತ್ರಗಳು ಕೂಡ ಮೋಹನ್ ಲಾಲ್ ಕೈಯಲ್ಲಿದೆ.


Click it and Unblock the Notifications











