For Quick Alerts
  ALLOW NOTIFICATIONS  
  For Daily Alerts

  ಡಬ್ಬಿಂಗ್ ಆರಂಭಿಸಿದ ಮೋಹನ್ ಲಾಲ್ 'ರಾಮ್' ಸಿನಿಮಾ

  |

  ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ನಟನೆಯ ಮೂರು ಸಿನಿಮಾಗಳು ಬಿಡುಗಡೆಗೆ ತಯಾರಾಗುತ್ತಿದೆ. ಮರಕ್ಕರ್, ದೃಶ್ಯಂ 2 ಹಾಗೂ ರಾಮ್ ಚಿತ್ರಗಳು ಶೂಟಿಂಗ್ ಮುಗಿಸಿದೆ. ಲಾಕ್‌ಡೌನ್ ಕಾರಣದಿಂದ ರಿಲೀಸ್ ವಿಳಂಬವಾಗಿದೆ.

  ಬಹುನಿರೀಕ್ಷೆಯ ರಾಮ್ ಚಿತ್ರ ಈಗ ಡಬ್ಬಿಂಗ್ ಕೆಲಸ ಆರಂಭಿಸಿದೆ. ಈ ಕುರಿತು ಸ್ವತಃ ನಿರ್ದೇಶಕ ಜಿತು ಜೊಸೇಫ್ ತಮ್ಮ ಅಧಿಕೃತ ಇನ್ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡಿದ್ದು, ಇತರೆ ಕಲಾವಿದರ ಜೊತೆ ಡಬ್ಬಿಂಗ್ ಕೆಲಸ ಶುರು ಮಾಡಿದ್ದಾರೆ.

  275 ದಿನಗಳ ಬಳಿಕ ಮನೆಯಿಂದ ಹೊರಗೆ ಬಂದ ಮಲಯಾಳಂ ಸೂಪರ್ ಸ್ಟಾರ್275 ದಿನಗಳ ಬಳಿಕ ಮನೆಯಿಂದ ಹೊರಗೆ ಬಂದ ಮಲಯಾಳಂ ಸೂಪರ್ ಸ್ಟಾರ್

  ರಾಮ್ ಸಿನಿಮಾದ ಪೋಸ್ಟರ್‌ನಿಂತ ಕುತೂಹಲ ಕಾಪಾಡಿಕೊಂಡಿರುವ ಚಿತ್ರತಂಡ ಬಹುಶಃ ಟೀಸರ್ ಬಿಡುಗಡೆ ಮಾಡುವ ಸಿದ್ಧತೆಯಲ್ಲಿರಬಹುದು ಎಂದು ಹೇಳಲಾಗುತ್ತಿದೆ. ಹೊಸ ವರ್ಷದ ಪ್ರಯುಕ್ತ ಟೀಸರ್ ಬರಬಹುದು ಎಂದು ಮೂಲಗಳು ಹೇಳಿದೆ.

  ಅಂದ್ಹಾಗೆ, ರಾಮ್ ಸಿನಿಮಾ ಆಕ್ಷನ್ ಡ್ರಾಮಾ ಆಗಿದ್ದು ಈ ಚಿತ್ರದಲ್ಲಿ ಮೋಹಲ್ ಲಾಲ್ ಪವರ್ ಫುಲ್ ಪಾತ್ರ ನಿಭಾಯಿಸುತ್ತಿದ್ದಾರೆ. ನೈಜ ಘಟನೆಯನ್ನಾಧರಿಸಿ ಕಥೆ ಮಾಡಲಾಗಿದೆಯಂತೆ.

  ದುಬೈನಲ್ಲಿ ಐಶಾರಾಮಿ ಮನೆ ಖರೀದಿಸಿದ ನಟ ಮೋಹನ್‌ಲಾಲ್ದುಬೈನಲ್ಲಿ ಐಶಾರಾಮಿ ಮನೆ ಖರೀದಿಸಿದ ನಟ ಮೋಹನ್‌ಲಾಲ್

  ಪ್ರೀತಿಯ SIL ಗೆ ಶುಭ ಕೋರಿದ ಮೇಘನಾ ರಾಜ್ | Filmibeat Kannada

  ಮೋಹನ್ ಲಾಲ್ ಜೊತೆ ಬಹುಭಾಷಾ ನಟಿ ತ್ರಿಷಾ ಕೃಷ್ಣನ್ ನಾಯಕಿಯಾಗಿ ನಟಿಸುತ್ತಿದ್ದಾರೆ. ರಾಮ್ ಅವರ ಪತ್ನಿ ಪಾತ್ರದಲ್ಲಿ ತ್ರಿಷಾ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಇಂದ್ರಜಿತ್ ಸುಕುಮಾರ್, ಬಾಲಿವುಡ್ ನಟ ಆದಿಲ್ ಹುಸೇನ್, ಪ್ರಾಚಿ ತೆಹ್ಲನ್, ಸಾಯಿ ಕುಮಾರ್, ಸಿದ್ದೀಕಿ, ದುರ್ಗ ಕೃಷ್ಣ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ.

  English summary
  Malayalam superstar Mohanlal starrer 'Ram' movie dubbing works starts.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X