For Quick Alerts
  ALLOW NOTIFICATIONS  
  For Daily Alerts

  ಕೊನೆಗೂ ಜಾರ್ಜ್‌ ಕುಟ್ಟಿ ಕೈಗೆ ಕೋಳ; 'ದೃಶ್ಯಂ' ಮೂರಕ್ಕೆ ಮುಕ್ತಾಯ?

  |

  ಕಂಪ್ಲೀಟ್ ಆಕ್ಟರ್ ಮೋಹನ್ ಲಾಲ್‌ ಸಿನಿಕರಿಯರ್‌ನಲ್ಲೇ ಸಿಕ್ಕಾಪಟ್ಟೆ ಸ್ಪೆಷಲ್ ಸಿನಿಮಾ 'ದೃಶ್ಯಂ'. ಈಗಾಗಲೇ 'ದೃಶ್ಯಂ' ಸರಣಿಯ 2 ಸಿನಿಮಾಗಳು ಸೂಪರ್ ಹಿಟ್ ಆಗಿದ್ದು ಈಗ ಮೂರನೇ ಭಾಗದ ಬಗ್ಗೆ ಚರ್ಚೆ ಶುರುವಾಗಿದೆ.

  9 ವರ್ಷಗಳ ಹಿಂದೆ ಜಿತು ಜೋಸೆಫ್ ನಿರ್ದೇಶನದ ಕ್ರೈಂ ಥ್ರಿಲ್ಲರ್ 'ದೃಶ್ಯಂ' ಸಿನಿಮಾ ದಾಖಲೆ ಬರೆದಿತ್ತು. ಬೇರೆ ಭಾಷೆಗಳಿಗೂ ರೀಮೇಕ್ ಆಗಿ ಗೆದ್ದಿತ್ತು. ಕಳೆದ ವರ್ಷ ಎರಡನೇ ಭಾಗ ರಿಲೀಸ್ ಆಗಿ ಚಮತ್ಕಾರ ಮಾಡಿತ್ತು. ಎರಡನೇ ಭಾಗವೂ ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಪ್ರೇಕ್ಷಕರ ಮುಂದೆ ಬಂದಿದ್ದು ವಿಶೇಷ. ಶೀಘ್ರದಲ್ಲೇ ಸರಣಿಯ ಮೂರನೇ ಸಿನಿಮಾ ಸೆಟ್ಟೇರುವ ಬಗ್ಗೆ ಸುಳಿವು ಸಿಕ್ತಿದ್ದು, ಈಗಾಗಲೇ ಪೋಸ್ಟರ್‌ವೊಂದು ವೈರಲ್ ಆಗಿದೆ.

  ಮಮ್ಮುಟ್ಟಿ ಜೊತೆ ಸಿನಿಮಾ, ಸುಳಿವು ಕೊಟ್ಟ ಮೋಹನ್ ಲಾಲ್?ಮಮ್ಮುಟ್ಟಿ ಜೊತೆ ಸಿನಿಮಾ, ಸುಳಿವು ಕೊಟ್ಟ ಮೋಹನ್ ಲಾಲ್?

  ಅಚಾನಕ್‌ ಆಗಿ ನಡೆಯುವ ಒಂದು ಹತ್ಯೆ ಸುತ್ತಾ 'ದೃಶ್ಯಂ' ಸರಣಿ ಸಿನಿಮಾ ಕಥೆಗಳು ಗಿರಕಿ ಹೊಡೆಯುತ್ತಿದೆ. ಚಿತ್ರದ ನಾಯಕ ತನ್ನ ಚಾಕಚಕ್ಯತೆಯಿಂದ ಪೊಲೀಸರ ಕೈಗೆ ಸಿಗದಂತೆ ತನ್ನ ಕುಟುಂಬವನ್ನು ಹೇಗೆ ಕಾಪಾಡಿಕೊಳ್ಳುತ್ತಾನೆ ಅನ್ನುವುದನ್ನು ಬಹಳ ರೋಚಕವಾಗಿ ಹೇಳಲಾಗಿದೆ. 'ದೃಶ್ಯಂ'-2 ಕ್ಲೈಮ್ಯಾಕ್ಸ್‌ನಲ್ಲಿ 'ಈ ಕಥೆ ಇನ್ನು ಮುಗಿದಿಲ್ಲ. ಮತ್ತೆ ಯಾವಾಗಾದರೂ ಪೊಲೀಸರು ಬರಬಹುದು. ಹಳೆಯದನ್ನು ಮತ್ತೆ ಕೆದಕಬಹುದು. ಸದಾ ನನ್ನ ಕುಟುಂಬವನ್ನು ರಕ್ಷಿಸಿಕೊಳ್ಳಲು ನಾನು ಸಿದ್ಧನಾಗಿರುತ್ತೀನಿ' ಎನ್ನುವ ಡೈಲಾಗ್ ಮೂಲಕ ಮತ್ತೊಂದು ಸೀಕ್ವೆಲ್‌ ಬಗ್ಗೆ ಸುಳಿವು ಕೊಟ್ಟಿದ್ದರು.

   'ದೃಶ್ಯಂ'-3 ಪೋಸ್ಟರ್ ವೈರಲ್

  'ದೃಶ್ಯಂ'-3 ಪೋಸ್ಟರ್ ವೈರಲ್

  ಅಫೀಷಿಯಲ್‌ ಆಗಿ 'ದೃಶ್ಯಂ'-3 ಸಿನಿಮಾ ಘೋಷಣೆ ಆಗಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ 'ದೃಶ್ಯಂ'-3 ಪೋಸ್ಟರ್‌ವೊಂದು ಸಖತ್ ವೈರಲ್‌ ಆಗಿದೆ. ಪೋಸ್ಟರ್‌ನಲ್ಲಿ ಜಾರ್ಜ್‌ ಕುಟ್ಟಿ ಮೋಹನ್‌ ಲಾಲ್ ಕೈಗೆ ಕೋಳ ಹಾಕಿಕೊಂಡು ಸೀರಿಯಸ್ ಆಗಿ ನೋಡುತ್ತಿರುವುದನ್ನು ಕಾಣಬಹುದು. ಹಾಗದರೆ ನಿಜಕ್ಕೂ ಜಾರ್ಜ್‌ ಕುಟ್ಟಿ ಮಾಡಿದ ತಪ್ಪಿಗೆ ಜೈಲು ಸೇರುತ್ತಾನಾ ಅನ್ನುವ ಪ್ರಶ್ನೆ ಮೂಡಿದೆ.

   ಕ್ಲಾಸಿಕ್‌ ಕ್ರಿಮಿನಲ್ ಈಸ್ ಬ್ಯಾಕ್

  ಕ್ಲಾಸಿಕ್‌ ಕ್ರಿಮಿನಲ್ ಈಸ್ ಬ್ಯಾಕ್

  ಸೋಶಿಯಲ್ ಮೀಡಿಯಾದಲ್ಲಿ 'ದೃಶ್ಯಂ'-3 ಪೋಸ್ಟರ್ ಸಖತ್ ಸದ್ದು ಮಾಡ್ತಿದೆ. ಅಭಿಮಾನಿಗಳು ಸಿನಿಮಾಗಾಗಿ ಕಾತರದಿಂದ ಕಾಯುತ್ತಿರುವುದಾಗಿ ಹೇಳ್ತಿದ್ದಾರೆ. ಕ್ಲಾಸಿಕ್‌ ಕ್ರಿಮಿನಲ್ ಈಸ್ ಬ್ಯಾಕ್ ಎಂದು ಕಾತುರತೆ ವ್ಯಕ್ತಪಡಿಸುತ್ತಿದ್ದಾರೆ. 'ದೃಶ್ಯಂ'-3 ಹ್ಯಾಷ್‌ಟ್ಯಾಗ್‌ನ ಟ್ರೆಂಡ್ ಮಾಡುತ್ತಿದ್ದಾರೆ. ಸಣ್ಣ ಎಳೆಯನ್ನು ಇಟ್ಟುಕೊಂಡು ಎರಡು ಸಿನಿಮಾ ಮಾಡಿ ಗೆದ್ದಿರೋ ಚಿತ್ರತಂಡ ಮೂರನೇ ಭಾಗದ ಕುರಿತು ಕುತೂಹಲ ಕೆರಳಿಸಿರುವುದು ತಮಾಷೆಯ ವಿಷಯ ಅಲ್ಲ. ಅದೇ ಕಾರಣಕ್ಕೆ ಕಥೆಗೆ ಯಾವ ರೀತಿಯ ಅಂತ್ಯ ಸಿಗುತ್ತೆ ಅನ್ನುವ ಕುತೂಹಲ ಸಿನಿರಸಿಕರಲ್ಲಿದೆ. ಆಗಸ್ಟ್ 17ರಂದು 'ದೃಶ್ಯಂ'-3 ಸಿನಿಮಾ ಘೋಷಣೆಯಾಗುವ ಸಾಧ್ಯತೆಯಿದೆ.

   'ದೃಶ್ಯಂ' ಸರಣಿ ಕೊನೆಯಾಗುತ್ತಾ?

  'ದೃಶ್ಯಂ' ಸರಣಿ ಕೊನೆಯಾಗುತ್ತಾ?

  ಸದ್ಯ ವೈರಲ್ ಆಗಿರುವ ಪೋಸ್ಟರ್‌ನಲ್ಲಿ 'ದೃಶ್ಯಂ'-3 ದಿ ಕನ್‌ಕ್ಲೂಷನ್ ಎಂದು ಬರೆಯಲಾಗಿದೆ. ಕಥೆಗೆ ಮೂರನೇ ಭಾಗದಲ್ಲಿ ಅಂತ್ಯ ಹಾಡುವ ಸಾಧ್ಯತೆಯಿದೆ. ಸಿನಿರಸಿಕರು ದೃಶ್ಯಂ ಕಥೆ ಕನೆಕ್ಟ್ ಆಗಿದೆ. ಮುಂದೆ ಎಷ್ಟು ಭಾಗಗಳಾಗಿ ಬೇಕಾದರೂ ಈ ಸಿನಿಮಾ ಮಾಡಬಹುದು ಎಂದು ಈ ಹಿಂದೆ ನಟ ಕ್ರೇಜಿಸ್ಟಾರ್ ಡಾ. ರವಿಚಂದ್ರನ್ ಹೇಳಿದ್ದರು. ಹಿಂದಿನ ಎರಡು ಭಾಗಗಳಲ್ಲಿ ಸಿಕ್ಕಾಪಟ್ಟೆ ಟ್ವಿಸ್ಟ್‌ಗಳಿದ್ದವು. ಮೂರನೇ ಭಾಗದಲ್ಲಿ ಅದಕ್ಕಿಂತಲೂ ಹೆಚ್ಚು ಟ್ವಿಸ್ಟ್‌ಗಳು ಗ್ಯಾರೆಂಟಿ.

   'ದೃಶ್ಯಂ' ಸರಣಿ ರೀಮೇಕ್ ಚಿತ್ರಗಳು ಹಿಟ್

  'ದೃಶ್ಯಂ' ಸರಣಿ ರೀಮೇಕ್ ಚಿತ್ರಗಳು ಹಿಟ್

  2013ರಲ್ಲಿ ಬಂದಿದ್ದ ಮಲಯಾಳಂನ 'ದೃಶ್ಯಂ' ಸಿನಿಮಾ ಹಿಟ್ ಆಗಿತ್ತು. ಮೀನಾ ಜಾರ್ಜ್‌ ಕುಟ್ಟಿ ಮಡದಿ ಪಾತ್ರದಲ್ಲಿ ನಟಿಸಿದ್ರೆ, ಅನ್ಸಿಬಾ ಹಾಸನ್, ಎಸ್ತೆಲ್ ಅನಿಲ್ ಅವರ ಮಕ್ಕಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಂತರ ಈ ಚಿತ್ರ ಕನ್ನಡ, ತೆಲುಗು, ಹಿಂದಿ, ತಮಿಳು, ಸಿಂಹಳಿ, ಚೈನೀಸ್ ಹಾಗೂ ಇಂಡೋನೇಷಿಯಾ ಭಾಷೆಗಳಿಗೆ ರಿಮೇಕ್ ಆಗಿತ್ತು. ಕನ್ನಡದಲ್ಲಿ ರವಿಚಂದ್ರನ್, ತಮಿಳಿನಲ್ಲಿ ಕಮಲ್ ಹಾಸನ್, ತೆಲುಗಿನಲ್ಲಿ ವಿಕ್ಟರಿ ವೆಂಕಟೇಶ್, ಹಿಂದಿಯಲ್ಲಿ ಅಜಯ್ ದೇವಗನ್ ಹೀರೋಗಳಾಗಿ ನಟಿಸಿದ್ದರು. ಕಳೆದ ವರ್ಷ ಹಿಟ್ ಆದ ಸರಣಿಯ ಎರಡನೇ ಸಿನಿಮಾ ಕನ್ನಡ, ತೆಲುಗಿನಲ್ಲಿ ರೀಮೇಕ್ ಆಗಿ ರಿಲೀಸ್ ಆಗಿದೆ.

  English summary
  Mohan Lal Starrer Drishyam 3 Movie Set to be Announced on August 17, Know More.
  Sunday, August 14, 2022, 13:27
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X