For Quick Alerts
  ALLOW NOTIFICATIONS  
  For Daily Alerts

  ಮೋಹನ್ ಲಾಲ್ ಚಿತ್ರಕ್ಕೆ ಮತ್ತೆ ನಿರಾಸೆ: ಬಿಡುಗಡೆ ಮತ್ತೆ ಮುಂದಕ್ಕೆ

  |

  ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ನಟನೆಯಲ್ಲಿ ತಯಾರಾಗಿರುವ 'ಮರಕ್ಕರ್' ಸಿನಿಮಾ ಆಗಸ್ಟ್ 12 ರಂದು ಬಿಡುಗಡೆಯಾಗಬೇಕಿದೆ. ಓನಮ್ ಹಬ್ಬದ ವಿಶೇಷವಾಗಿ ತೆರೆಗೆ ಬರಲಿದ್ದೇವೆ ಎಂದು ಅಧಿಕೃತವಾಗಿ ಪ್ರಕಟಣೆ ಸಹ ಮಾಡಲಾಗಿದೆ.

  ಆದರೆ, ಈ ಬಾರಿಯೂ ಮರಕ್ಕರ್ ಚಿತ್ರಕ್ಕೆ ಕೊರೊನಾ ಅಡ್ಡಿಯಾಗಿದೆ ಎಂದು ವರದಿಯಾಗಿದೆ. ಕೋವಿಡ್ ಎರಡನೇ ಅಲೆ ಕೇರಳ ಪಾಲಿಗೆ ಬಹಳ ಗಂಭೀರವಾಗಿ ಕಾಡ್ತಿದ್ದು, ಚಿತ್ರಮಂದಿರಗಳು ಓಪನ್ ಮಾಡುವ ಸಾಧ್ಯತೆ ಸದ್ಯಕ್ಕಿಲ್ಲ. ಹಾಗಾಗಿ, ಮತ್ತೆ ಮರಕ್ಕರ್ ಸಿನಿಮಾದ ರಿಲೀಸ್ ದಿನಾಂಕ ಮುಂದೂಡಲು ಚಿತ್ರತಂಡ ನಿರ್ಧರಿಸಿದೆ ಎಂಬ ಮಾಹಿತಿ ಇದೆ.

  ರಾಷ್ಟ್ರ ಪ್ರಶಸ್ತಿ ಗೆದ್ದ 'ಮರಕ್ಕರ್' ಬಿಡುಗಡೆ ದಿನಾಂಕ ಪ್ರಕಟರಾಷ್ಟ್ರ ಪ್ರಶಸ್ತಿ ಗೆದ್ದ 'ಮರಕ್ಕರ್' ಬಿಡುಗಡೆ ದಿನಾಂಕ ಪ್ರಕಟ

  ಕೇರಳದ ಎಲ್ಲ ಚಿತ್ರಮಂದಿರಗಳಲ್ಲಿಯೂ ಒಂದೇ ಸಿನಿಮಾ

  ಮರಕ್ಕರ್ ಸಿನಿಮಾದ ನಿರ್ಮಾಪಕರು ಕೇರಳದ ಚಿತ್ರಪ್ರದರ್ಶಕರ ಸಂಘದ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಎಲ್ಲ ಚಿತ್ರಮಂದಿರಗಳಲ್ಲಿ ಒಂದೇ ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಮೊದಲ ಮೂರು ವಾರಗಳು ಬೇರೆ ಯಾವ ಮಲಯಾಳಂ ಅಥವಾ ಇನ್ನಾವುದೇ ಸಿನಿಮಾ ಬಿಡುಗಡೆ ಮಾಡದಿರಲು ಒಪ್ಪಂದ ಆಗಿದೆಯಂತೆ.

  ಮರಕ್ಕರ್ ಚಿತ್ರದ ಬಗ್ಗೆ

  16ನೇ ಶತಮಾನದ ಐತಿಹಾಸಿಕ ಕಥಾಹಂದರ ಹೊಂದಿರುವ 'ಮರಕ್ಕರ್' ಚಿತ್ರವನ್ನು ಪ್ರಿಯದರ್ಶನ್ ನಿರ್ದೇಶನ ಮಾಡಿದ್ದು, ಈ ಮುಂಚೆ ಮಾರ್ಚ್ 26, 2020ಕ್ಕೆ ರಿಲೀಸ್ ಆಗಬೇಕಿತ್ತು. ಆದರೆ ಕೋವಿಡ್ ಕಾರಣದಿಂದ ಮುಂದೂಡಿಕೆಯಾಗಿತ್ತು. ಎರಡನೇ ಬಾರಿಗೆ ಮೇ 13, 2021 ರಂದು ಮರಕ್ಕರ್ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಕೋವಿಡ್ ಎರಡನೇ ಅಲೆಯ ಪರಿಣಾಮ ಆಗಲೂ ಸಾಧ್ಯವಾಗಿಲಿಲ್ಲ. ಮೂರನೇ ಸಲ ಆಗಸ್ಟ್ 12, 2021ಕ್ಕೆ ಬರುವುದಾಗಿ ಹೇಳಿದೆ. ಈ ದಿನಾಂಕವೂ ಅನುಮಾನವಾಗಿದೆ.

  ಕೇರಳದ ಎಲ್ಲ ಚಿತ್ರಮಂದಿರಗಳಲ್ಲಿಯೂ ಒಂದೇ ಸಿನಿಮಾ ಬಿಡುಗಡೆ!ಕೇರಳದ ಎಲ್ಲ ಚಿತ್ರಮಂದಿರಗಳಲ್ಲಿಯೂ ಒಂದೇ ಸಿನಿಮಾ ಬಿಡುಗಡೆ!

  ಮೂರು ರಾಷ್ಟ್ರ ಪ್ರಶಸ್ತಿ ಗೆದ್ದ 'ಮರಕ್ಕರ್'

  ಅಂದ್ಹಾಗೆ, ಮರಕ್ಕರ್ ಸಿನಿಮಾ 2019ರಲ್ಲಿಯೇ ಪೂರ್ಣಗೊಂಡಿತ್ತು. ಅದೇ ವರ್ಷ ಸೆನ್ಸಾರ್ ಸಹ ಮುಗಿಸಿತ್ತು. ರಾಷ್ಟ್ರ ಪ್ರಶಸ್ತಿಗೂ ನಾಮನಿರ್ದೇಶನವಾಗಿತ್ತು. 67ನೇ ರಾಷ್ಟ್ರ ಪ್ರಶಸ್ತಿ ಸಾಲಿನಲ್ಲಿ ಮರಕ್ಕರ್ ಚಿತ್ರಕ್ಕೆ ಮೂರು ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ. ಅತ್ಯುತ್ತಮ ಸಿನಿಮಾ, ಅತ್ಯುತ್ತಮ ಸ್ಪೆಷಲ್ ಎಫೆಕ್ಸ್ ಹಾಗೂ ಅತ್ಯುತ್ತಮ ವಸ್ತ್ರವಿನ್ಯಾಸಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ.

  Mohanlal Starrer Marakkar Release Is Postponed Again?

  ಸುಮಾರು 100 ಕೋಟಿ ಬಜೆಟ್‌ನಲ್ಲಿ ತಯಾರಾಗಿರುವ ಈ ಚಿತ್ರದಲ್ಲಿ ಮೋಹನ್ ಲಾಲ್ ಜೊತೆಗೆ ಮಂಜು ವಾರಿಯರ್, ಕೀರ್ತಿ ಸುರೇಶ್, ಅರ್ಜುನ್ ಸರ್ಜಾ, ಪ್ರಣವ್ ಮೋಹನ್ ಲಾಲ್, ಸುನೀಲ್ ಶೆಟ್ಟಿ, ಪ್ರಭು, ಸಿದ್ಧಿಕಿ, ನೆಡುಮುಡಿ ವೇಣು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

  English summary
  Mohan lal starrer and National Award winning Movie marakkar release is postponed again?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X