For Quick Alerts
  ALLOW NOTIFICATIONS  
  For Daily Alerts

  ಮತ್ತೆ ಒಂದಾದ 'ದೃಶ್ಯಂ' ಜೋಡಿ: ಈ ಬಾರಿ ಬೇರೆಯದ್ದೇ ಸಿನಿಮಾ

  |

  'ದೃಶ್ಯಂ' ಹಾಗೂ ಇತ್ತೀಚೆಗೆ 'ದೃಶ್ಯಂ 2' ಮೂಲಕ ಅತಿ ದೊಡ್ಡ ಹಿಟ್ ಸಿನಿಮಾ ನೀಡಿದ್ದ ಮಲಯಾಳಂನ ಜೀತು ಜೋಸೆಫ್ ಹಾಗೂ ಮೋಹನ್‌ಲಾಲ್ ಜೋಡಿ ಮತ್ತೆ ಒಂದಾಗುತ್ತಿದೆ.

  ಜೀತು ಜೋಸೆಫ್ ಹಾಗೂ ಮೋಹನ್‌ಲಾಲ್ ಒಂದಾಗಿ 'ದೃಶ್ಯಂ 3' ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆ ಸಹಜವಾಗಿಯೇ ಎದ್ದಿದೆ. ಆದರೆ ಈ ಜೋಡಿ ಒಂದಾಗಿರುವುದು 'ದೃಶ್ಯಂ' ಸರಣಿಯ ಮುಂದುವರೆದ ಭಾಗಕ್ಕಾಗಿ ಅಲ್ಲ ಬದಲಿಗೆ ಬೇರೆ ಸಿನಿಮಾಕ್ಕಾಗಿ.

  ನಿರ್ಮಾಪಕ, ಮೋಹನ್‌ ಲಾಲ್‌ರ ಆಪ್ತ ಆಂಟೊನಿ ಪೆರವಂಬೂರ್ ಈ ಬಗ್ಗೆ ಮಾಹಿತಿ ನೀಡಿದ್ದು, ಜೀತು ಜೋಸೆಫ್ ನಿರ್ದೇಶನದ ಹೊಸ ಸಿನಿಮಾದಲ್ಲಿ ಮೋಹನ್‌ಲಾಲ್ ನಟಿಸುತ್ತಿದ್ದಾರೆ. ಆದರೆ ಇದು 'ದೃಶ್ಯಂ' ಸರಣಿಯ ಮುಂದುವರೆದ ಭಾಗವಲ್ಲ ಎಂದಿದ್ದಾರೆ. ಈ ಸಿನಿಮಾಕ್ಕೆ ಆಂಟೊನಿ ಪೆರವಂಬೂರ್ ಅವರೇ ಬಂಡವಾಳ ಹೂಡುತ್ತಿದ್ದಾರೆ.

  ಜೀತು ಜೋಸೆಫ್‌ ಜೊತೆಗೆ ನಾಲ್ಕನೇ ಸಿನಿಮಾದಲ್ಲಿ ಮೋಹನ್‌ಲಾಲ್ ನಟಿಸುತ್ತಿದ್ದಾರೆ. 'ದೃಶ್ಯಂ', 'ದೃಶ್ಯಂ 2' ಆಕ್ಷನ್ ಸಿನಿಮಾ 'ರಾಮ್' ಬಳಿಕ ಇದು ನಾಲ್ಕನೇ ಸಿನಿಮಾ ಆಗಲಿದೆ. ಆದರೆ 'ರಾಮ್' ಸಿನಿಮಾದ ಚಿತ್ರೀಕರಣ ಇನ್ನೂ ಅಂತ್ಯವಾಗಿಲ್ಲ. ಆ ಸಿನಿಮಾ ಮುಗಿದ ಬಳಿಕವಷ್ಟೆ ನಾಲ್ಕನೇ ಸಿನಿಮಾ ಸೆಟ್ಟೇರಲಿದೆ.

  'ರಾಮ್' ಸಿನಿಮಾದ ಚಿತ್ರೀಕರಣ 50% ಮುಗಿದಿದ್ದು ಉಳಿದ ಚಿತ್ರೀಕರಣ ಲಂಡನ್‌ನಲ್ಲಿ ಆಗಬೇಕಿದೆ. ಆದರೆ ಕೊರೊನಾ ಕಾರಣಕ್ಕೆ ಸಿನಿಮಾದ ಚಿತ್ರೀಕರಣ ನಿಂತಿದೆ. ಸಿನಿಮಾದಲ್ಲಿ ತ್ರಿಶಾ ಕೃಷ್ಣನ್ ನಾಯಕಿಯಾಗಿ ನಟಿಸಿದ್ದಾರೆ.

  ಸ್ಯಾಂಡಲ್ ವುಡ್ ಮ್ಯೂಸಿಷಿಯನ್ ಮನೆಬಾಗಿಲಿಗೆ ದಿನಸಿ ವ್ಯವಸ್ಥೆ | Filmibeat Kannada

  ಇನ್ನುಳಿದಂತೆ ಮೋಹನ್‌ಲಾಲ್ ನಟಿಸಿರುವ 'ಮರಕ್ಕರ್' ಸಿನಿಮಾ ಬಿಡುಗಡೆ ಆಗಬೇಕಿದೆ. ಪ್ರಿಯದರ್ಶನ್ ನಿರ್ದೇಶನದ ಈ ಸಿನಿಮಾಕ್ಕೆ ಈಗಾಗಲೇ ರಾಷ್ಟ್ರ ಪ್ರಶಸ್ತಿ ದೊರಕಿದೆ. ಮೊಹನ್‌ ಲಾಲ್ ಮೊದಲ ಬಾರಿಗೆ ನಿರ್ದೇಶನ ಮಾಡಿ ನಟಿಸುತ್ತಿರುವ 'ಬಾರೋಜ್' ಸಿನಿಮಾದ ಚಿತ್ರೀಕರಣ ಅಂತಿಮ ಹಂತದಲ್ಲಿದೆ.

  English summary
  Drishyam pair Mohanlal and director Jeethu Joseph teaming up again for new movie but not for Drishyam series.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X