For Quick Alerts
  ALLOW NOTIFICATIONS  
  For Daily Alerts

  ಕೋವಿಡ್ ಭೀತಿಯಲ್ಲೇ ಚಿತ್ರೀಕರಣ ಆರಂಭಿಸಿದ 'ಬ್ರೋ ಡ್ಯಾಡಿ'

  |

  ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಭಾರಿ ನಿರೀಕ್ಷೆಯ ಸಿನಿಮಾ 'ಬ್ರೋ ಡ್ಯಾಡಿ' ಚಿತ್ರೀಕರಣ ಆರಂಭಿಸಿದೆ. ಜುಲೈ 15 ರಂದು ಹೈದರಾಬಾದ್‌ನಲ್ಲಿ ಶೂಟಿಂಗ್ ಶುರು ಮಾಡಿದ್ದು, ಪೃಥ್ವಿರಾಜ್ ಮತ್ತು ನಟಿ ಕಲ್ಯಾಣಿ ಪ್ರಿಯದರ್ಶನ್ ಪಾಲ್ಗೊಂಡಿದ್ದರು.

  ಕೋವಿಡ್ ಕಾರಣದಿಂದ ಸೀಮಿತ ಸಿಬ್ಬಂದಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಚಿತ್ರದ ಮುಹೂರ್ತ ಹಾಗೂ ಶೂಟಿಂಗ್ ಮಾಡಿರುವ ಬಗ್ಗೆ ನಟ-ನಿರ್ದೇಶಕ ಪೃಥ್ವಿರಾಜ್ ಸಾಮಾಜಿಕ ಜಾಲತಾಣದಲ್ಲಿ ಸಂಸತ ಹಂಚಿಕೊಂಡಿದ್ದಾರೆ.

  ಪವನ್ ಕುಮಾರ್ ನಿರ್ದೇಶನದ ತೆಲುಗು ವೆಬ್ ಸರಣಿ ಬಿಡುಗಡೆ ದಿನಾಂಕ ಪ್ರಕಟಪವನ್ ಕುಮಾರ್ ನಿರ್ದೇಶನದ ತೆಲುಗು ವೆಬ್ ಸರಣಿ ಬಿಡುಗಡೆ ದಿನಾಂಕ ಪ್ರಕಟ

  'ಬ್ರೋ ಡ್ಯಾಡಿ' ಸಿನಿಮಾದ ಮೊದಲ ದೃಶ್ಯ ಸಹ ಸೆರೆಹಿಡಿಯಲಾಯಿತು. ನಟ ಪೃಥ್ವಿರಾಜ್ ಸುಕುಮಾರ್ ಬೈಕ್ ಮೇಲೆ ಕುಳಿತಿರುವುದು, ಜೊತೆಯಲ್ಲಿ ಕಲ್ಯಾಣಿ ಪ್ರಿಯದರ್ಶನ್ ನಿಂತು ಮಾತನಾಡುವ ದೃಶ್ಯ ಶೂಟ್ ಮಾಡಲಾಯಿತು. ಈ ಮೇಕಿಂಗ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

  ಪೃಥ್ವಿರಾಜ್ ಮತ್ತು ಕಲ್ಯಾಣಿ ಪ್ರಿಯದರ್ಶನ್ ಜೋಡಿಯಾಗಿ ನಟಿಸುತ್ತಿದ್ದು, ಮೋಹನ್ ಲಾಲ್ ಪ್ರಧಾನ ಪಾತ್ರವೊಂದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇಂದು ನಡೆದ ಮುಹೂರ್ತ ಹಾಗೂ ಚಿತ್ರೀಕರಣದಲ್ಲಿ ಮೋಹನ್ ಲಾಲ್ ಭಾಗವಹಿಸಿಲ್ಲ.

  'ಬ್ರೋ ಡ್ಯಾಡಿ' ಸಿನಿಮಾದಲ್ಲಿ ಮೋಹನ್ ಲಾಲ್ ಪಾತ್ರವೇನು ಎಂಬುವುದರ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ. ಆದರೆ, ತಮ್ಮ ಮುಂದಿನ ಸಿನಿಮಾ '12ತ್ ಮ್ಯಾನ್' ಮೊದಲ ಹಂತದ ಶೂಟಿಂಗ್ ಮುಗಿಸಿದ ನಂತರ ಪೃಥ್ವಿರಾಜ್ ತಂಡ ಸೇರಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

  Mohanlal and prithviraj Starrer Bro Daddy Shoot Begins Today
  ಇಂದ್ರಜಿತ್ ತುಂಬಾ ದೊಡ್ಡೋರು ಪ್ರೂವ್ ಮಾಡ್ಲಿ ನೋಡೋಣ | Darshan | Indrajit Lankesh | Filmibeat Kannada

  ಇನ್ನುಳಿದಂತೆ 'ಬ್ರೋ ಡ್ಯಾಡಿ' ಚಿತ್ರದಲ್ಲಿ ಸೌಬಿನ್ ಶಾಹೀರ್, ಕನಿಹಾ, ಮುರಳಿ ಗೋಪಿ, ಲಾಲು ಅಲೆಕ್ಸ್, ಜಗದೀಶ್ ಪೋಷಕ ಪಾತ್ರದಲ್ಲಿ ನಟಿಸುತ್ತಿದ್ದಾರೆ. ದೀಪಕ್ ದೇವ್ ಸಂಗೀತ ಹಾಗೂ ಅಭಿನಂದನ್ ರಾಮಾನುಜಮ್ ಅವರ ಛಾಯಾಗ್ರಹಣವಿದೆ. ಆಂಟನಿ ಪೆರುಂಬವೂರ್ ಈ ಚಿತ್ರ ನಿರ್ಮಿಸುತ್ತಿದ್ದಾರೆ.

  English summary
  Malayalam Superstar Mohanlal and prithviraj Starrer Bro Daddy Shoot Begins Today at hyderabad.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X