For Quick Alerts
  ALLOW NOTIFICATIONS  
  For Daily Alerts

  ನಿರ್ದೇಶನಕ್ಕೆ ಕೈ ಹಾಕಿದ ಮೋಹನ್‌ಲಾಲ್: ಗುಡ್‌ಲಕ್ ಎಂದ ಅಮಿತಾಬ್

  |

  ನಟ ಮೋಹನ್‌ಲಾಲ್ ಅವರಿಗೆ ಈಗ 60 ವರ್ಷ ವಯಸ್ಸು. ಈಗಲೂ ಮಲಯಾಳಂನ ನಂಬರ್ 1 ನಟ. ಈಗಲೂ ಅವರ ಕೈಲಿ ಐದು ಸಿನಿಮಾಗಳಿವೆ.

  ನಟನೆಗೆ ಎರಡು ರಾಷ್ಟ್ರಪ್ರಶಸ್ತಿ, ಒಂದು ವಿಶೇಷ ಜ್ಯೂರಿ ಅವಾರ್ಡ್, ಹಲವು ಫಿಲಂಫೇರ್‌, ಕೇರಳ ರಾಜ್ಯ ಪ್ರಶಸ್ತಿಗಳನ್ನು ಪಡೆದಿರುವ ಈ ನಟ ಎಂದರೆ ಬಾಲಿವುಡ್ಡಿಗರಿಗೂ ಗೌರವ. ನಟನೆಯಲ್ಲಿ ಇನ್ನೂ ಉತ್ತುಂಗದಲ್ಲಿ ಇರುವಾಗಲೇ ನಿರ್ದೇಶನಕ್ಕೆ ಕೈ ಹಾಕಿದ್ದಾರೆ ಮೋಹನ್‌ಲಾಲ್.

  ಮಲಯಾಳಿಗರ ಮೆಚ್ಚಿನ ಲಾಲೆಟ್ಟಾ ಮೋಹನ್‌ಲಾಲ್ ಮೊದಲ ಬಾರಿಗೆ ನಿರ್ದೇಶಕನ ಟೋಪಿ ಧರಿಸಿದ್ದಾರೆ. ಕೆಲವಾರು ಸಿನಿಮಾಗಳು ನಿರ್ಮಾಣ ಮಾಡಿರುವ ಮೋಹನ್‌ಲಾಲ್ ನಿರ್ದೇಶಕರಾಗುತ್ತಿರುವುದು ಇದೇ ಮೊದಲು.

  170 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಮೋಹನ್‌ಲಾಲ್‌ಗೆ ಸಿನಿಮಾದ ಆಳ-ಅಗಲದ ಅರಿವಿದೆ. ನಟನೆಯ ಅನುಭವವನ್ನೇ ಆಧಾರವಾಗಿಟ್ಟುಕೊಂಡು ಒಂದು ಭಿನ್ನ ಮಾದರಿಯ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದಾರೆ ಮೋಹನ್‌ಲಾಲ್. ಸಿನಿಮಾದ ಹೆಸರು 'ಬರ್ರೋಜ್; ನಿಧಿ ಕಕ್ಕುಮ್ ಭೂತಂ' ಎಂದು ಹೆಸರು.

  ಹೆಸರು ವಿಚಿತ್ರವಾಗಿರುವಂತೆಯೇ ಕತೆಯೂ ಸಹ ಭಿನ್ನವಾಗಿಯೇ ಇರಲಿದೆ. ವಾಸ್ಕೋಡಿಗಾಮಾ ಭಾರತಕ್ಕೆ ಬಂದಾಗ ಹೂತಿಟ್ಟಿದ್ದ ಎನ್ನಲಾಗುವ ಸಂಪತ್ತನ್ನು ಕಾಯುವ ಭೂತದ ಕತೆ ಇದಾಗಿರಲಿದೆಯಂತೆ.

  'ಬರ್ರೋಜ್; ಗಾರ್ಡಿಯನ್ ಆಫ್ ಡಿ'ಗಾಮಾಸ್ ಟ್ರೆಶರ್' ಎಂಬ ಕತೆಯನ್ನಾಧಿರಿಸಿದ ಸಿನಿಮಾ ಇದಾಗಿದೆ. ಕತೆಯನ್ನು ಜಿಜೊ ಪುನ್ನೋಸೆ ಬರೆದಿದ್ದಾರೆ. ಮೋಹನ್‌ಲಾಲ್ ನಿರ್ದೇಶಿಸುತ್ತಿರುವ ಸಿನಿಮಾಕ್ಕೆ ಚಿತ್ರಕತೆಯೂ ಅವರದ್ದೇ.

  ಅಮೀರ್ ಗೆ ಕೊರೊನಾ ಬಂದಿರೊದನ್ನು ಕೇಳಿ ರಾಖಿ ಸಾವಂತ್ ಕೊಟ್ಟ ರಿಯಾಕ್ಷನ್ ಫುಲ್ ವೈರಲ್ | Filmibeat Kannada

  ಸಿನಿಮಾದಲ್ಲಿ ಮೋಹನ್‌ಲಾಲ್ ಜೊತೆಗೆ ಪೃಥ್ವಿರಾಜ್ ಸುಕುಮಾರನ್, ಶಾಲ್ಯಾ ಮೆಕ್‌ಫ್ರೀ, ಸಾರಾ ವೆಗಾ ಇನ್ನೂ ಹಲವರು ಇರಲಿದ್ದಾರೆ. ಮೋಹನ್‌ಲಾಲ್ ಅವರ ಮಾಜಿ ಕಾರು ಚಾಲಕ ಆಂಟೊನಿ ಪೆರುಂಬವೂರ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ

  English summary
  Actor Mohanlal directorial debut Barroz movie gets start. Pruthviraj Sukumaran also acting in the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X