"ಮೋಹನ್ ಲಾಲ್ ನೋಡಿ ಕಲಿಯಿರಿ"; ಕನ್ನಡದ ಸ್ಟಾರ್ ನಟರನ್ನು ಕುಟುಕಿದ ಸಿನಿರಸಿಕರು

ಮಲಯಾಳಂನಲ್ಲಿ ಮೋಹನ್ ಲಾಲ್ ನಟನೆಯ 'L2: ಎಂಪುರಾನ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. 11 ದಿನಕ್ಕೆ 250 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಸಿನಿಮಾ ಸದ್ದು ಮಾಡ್ತಿದೆ. ಒಂದಷ್ಟು ವಿವಾದದ ನಡುವೆಯೂ ಸಿನಿಮಾ ಮಾಸ್ ಪ್ರೇಕ್ಷಕರನ್ನು ರಂಜಿಸುತ್ತಿದೆ. ಐಪಿಎಲ್ ಟೂರ್ನಿಗೂ 'ಎಂಪುರಾನ್' ಸೆಡ್ಡು ಹೊಡೆದಿದ್ದಾನೆ.

ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ 'ಎಂಪುರಾನ್' ಮಾರ್ಚ್ 27ರಂದು ತೆರೆಗೆ ಬಂದಿತ್ತು. ಆಶೀರ್ವಾದ್ ಸಿನಿಮಾಸ್, ಲೈಕಾ ಪ್ರೊಡಕ್ಷನ್ಸ್ ಹಾಗೂ ಶ್ರೀ ಗೋಕುಲಂ ಮೂವೀಸ್ ಸಂಸ್ಥೆಗಳು ಒಟ್ಟಾಗಿ ಸಿನಿಮಾ ನಿರ್ಮಾಣ ಮಾಡಿವೆ. ಸಿನಿಮಾ ರಿಲೀಸ್ ಬೆನ್ನಲ್ಲೇ ವಿವಾದ ಸೃಷ್ಟಿಯಾಗಿತ್ತು. ಚಿತ್ರದ ಒಂದಷ್ಟು ಸನ್ನಿವೇಶಗಳಿಗೆ ಕತ್ತರಿ ಹಾಕುವಂತಾಗಿತ್ತು. ಅದನ್ನೆಲ್ಲಾ ಮೀರಿ ಸಿನಿಮಾ ಪ್ರೇಕ್ಷಕರನ್ನು ರಂಜಿಸ್ತಿದೆ.

Mohanlal Dominates with Back-to-Back films While Kannada Cinema Struggles to Keep Up

'ಎಂಪುರಾನ್' ತೆರೆಕಂಡು ಒಂದೇ ವಾರಕ್ಕೆ ಮೋಹನ್ ಲಾಲ್ ನಟನೆಯ 'ಥುಡರುಮ್' ಸಿನಿಮಾ ರಿಲೀಸ್ ಡೇಟ್ ಘೋಷಣೆ ಆಗಿದೆ. ಮಾರ್ಚ್ 25ಕ್ಕೆ ಸಿನಿಮಾ ರಿಲೀಸ್ ಎಂದು ಅಧಿಕೃತವಾಗಿ ಮಾಹಿತಿ ಲಭ್ಯವಾಗಿದೆ. ಅಂದರೆ ಕೇವಲ ಒಂದು ತಿಂಗಳ ಅಂತರದಲ್ಲಿ ಮೋಹನ್ ಲಾಲ್ ನಟನೆಯ 2 ಸಿನಿಮಾ ಬಿಡುಗಡೆ ಆಗುತ್ತಿದೆ. ಕನ್ನಡದಲ್ಲಿ ಸ್ಟಾರ್ ನಟರು ಸಿನಿಮಾ ಮಾಡುವುದನ್ನು ತಡ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಮೋಹನ್ ಲಾಲ್ ಅವರನ್ನು ನೋಡಿ ಕಲಿಯಿರಿ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಯಶ್ 4 ವರ್ಷಕ್ಕೆ ಒಂದು ಸಿನಿಮಾ ಮಾಡ್ತಿದ್ದಾರೆ. ಸುದೀಪ್ 2 ವರ್ಷಕ್ಕೆ ಒಂದು ಸಿನಿಮಾ ಕೊಟ್ಟು ಇದೀಗ ಮತ್ತೊಂದು ಸಿನಿಮಾ ಆರಂಭಿಸಲು ತಡ ಮಾಡುತ್ತಿದ್ದಾರೆ. 'ಬಿಲ್ಲ ರಂಗ ಬಾಷ' ಸಿನಿಮಾ ಶೀಘ್ರದಲ್ಲೇ ಶುರುವಾದರೂ ಬಿಡುಗಡೆ ಆಗಲು ಇನ್ನು ಒಂದು ವರ್ಷ ಬೇಕಾಗುತ್ತದೆ. ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಬಹಳ ತಡವಾಗುತ್ತಿದೆ. ಇನ್ನು ರಕ್ಷಿತ್ ಶೆಟ್ಟಿ 'ರಿಚರ್ಡ್ ಆಂಟನಿ' ಸಿನಿಮಾವನ್ನು ಮರೆತೇಬಿಟ್ಟಿದ್ದಾರೆ.

ರಿಷಬ್ ಶೆಟ್ಟಿ 'ಕಾಂತಾರ' ಬಳಿಕ ಪ್ರೀಕ್ವೆಲ್ ಮಾಡಲು 3 ವರ್ಷ ತೆಗೆದುಕೊಳ್ಳುತ್ತಿದ್ದಾರೆ. ನಂತರ ಬೇರೆ ಭಾಷೆಯ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಆ ಸಿನಿಮಾಗಳು ಯಾವಾಗ ತೆರೆಗೆ ಬರುತ್ತದೆ ಎನ್ನುವ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಶ್ರೀಮುರಳಿ ಹೊಸ ಸಿನಿಮಾ ತಡವಾಗಲಿದೆ. ಗಣೇಶ್ ಹಾಗೂ ದುನಿಯಾ ವಿಜಯ್ ನಟನೆಯ ಸಿನಿಮಾಗಳು ಸದ್ಯಕ್ಕೆ ತೆರೆಗೆ ಬರುವಂತೆ ಕಾಣ್ತಿಲ್ಲ. ಶಿವಣ್ಣ ಮಾತ್ರ ಸಾಧ್ಯವಾದಷ್ಟು ಬೇಗ ಸಿನಿಮಾ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಅನಾರೋಗ್ಯದಿಂದ ಇತ್ತೀಚೆಗೆ ಕೊಂಚ ಹಿನ್ನಡೆ ಆಗಿದೆ.

Mohanlal Dominates with Back-to-Back films While Kannada Cinema Struggles to Keep Up

ಇನ್ನುಳಿದಂತೆ ದೊಡ್ಡ ಸಿನಿಮಾಗಳ ಸಂಖ್ಯೆ ದಿನದಿಂದ ದಿನಕ್ಕೆ ಕಮ್ಮಿ ಆಗುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾಗಳ ಹಿಂದೆ ಬಿದ್ದು ಕನ್ನಡ ಸಿನಿಮಾಗಳನ್ನು ಮಾಡುವವರ ಸಂಖ್ಯೆ ಕಮ್ಮಿ ಆಗ್ತಿದೆ. 64 ವರ್ಷ ವಯಸ್ಸಿನ ಮೋಹನ್ ಲಾಲ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಮಾತ್ರ ಮಾಡಬೇಕು ಎಂದು ಹಠ ಮಾಡುತ್ತಿಲ್ಲ. ನಮ್ಮ ನಟರು ಯಾಕೆ ಹೀಗೆ ಮಾಡುತ್ತಿದ್ದಾರೆ ಎಂದು ಕನ್ನಡ ಸಿನಿರಸಿರಕು ಬೇಸರ ಹೊರ ಹಾಕುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡ್ತಿದ್ದಾರೆ.

ಮೋಹನ್ ಲಾಲ್ ಮಾತ್ರವಲ್ಲ ಮಮ್ಮಟಿ ಕೂಡ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕಳೆದ ವರ್ಷ ಅವರ 3 ಚಿತ್ರಗಳು ಬಿಡುಗಡೆ ಆಗಿತ್ತು. ಈ ವರ್ಷ 'ಡೊಮಿನಿಕ್ ಅಂಡ್ ದಿ ಲೇಡೀಸ್‌ಸ್ ಪರ್ಸ್' ಎಂಬ ಸಿನಿಮಾ ಜನವರಿ 23ಕ್ಕೆ ತೆರೆಗೆ ಬಂದಿತ್ತು. ಈ ವಾರ ಮಮ್ಮುಟಿ ನಟನೆಯ 'ಬಾಜೂಕಾ' ಸಿನಿಮಾ ತೆರೆಗೆ ಬರ್ತಿದೆ. ಕಲಮ್‌ಕವಲ್ ಎಂಬ ಮತ್ತೊಂದು ಸಿನಿಮಾ ಕೂಡ ಶೀಘ್ರದಲ್ಲೇ ಬಿಡುಗಡೆ ಆಗಲಿದೆ.

ಅಂದಹಾಗೆ ಈ ವರ್ಷ ಮೋಹನ್ ಲಾಲ್ ನಟನೆಯ 5 ಸಿನಿಮಾಗಳು ಬಿಡುಗಡೆ ಆಗಲಿವೆ. 'ಎಂಪುರಾನ್' ಹಾಗೂ 'ಥುಡರುಂ' ಬಳಿಕ 'ಹೃದಯಪೂರ್ವಂ', 'ವೃಷಭ' ಹಾಗೂ ಮತ್ತೊಂದು ಸಿನಿಮಾ ತಯಾರಾಗುತ್ತಿದೆ. 'ವೃಷಭ' ಚಿತ್ರಕ್ಕೆ ಕನ್ನಡ ನಿರ್ದೇಶಕ ನಂದ ಕಿಶೋರ್ ಆಕ್ಷನ್ ಕಟ್ ಹೇಳ್ತಿದ್ದಾರೆ.

ಸ್ಟಾರ್ ನಟರ ದೊಡ್ಡ ಸಿನಿಮಾಗಳು ಬರದೇ ಕನ್ನಡ ಚಿತ್ರರಂಗ ಸೊರಗುತ್ತಿದೆ. ಕರ್ನಾಟಕದಲ್ಲಿ ಪರಭಾಷಾ ಸಿನಿಮಾಗಳ ಆರ್ಭಟವೇ ಮುಂದುವರೆದಿದೆ. ಈ ವರ್ಷ ಮೊದಲ 3 ತಿಂಗಳಿಗೆ 60ಕ್ಕೂ ಅಧಿಕ ಚಿತ್ರಗಳು ತೆರೆಕಂಡಿದ್ದವು. ಆದರೆ ಯಾವುದೇ ಸಿನಿಮಾ ಹೇಳಿಕೊಳ್ಳುವಂತೆ ಗೆಲ್ಲಲಿಲ್ಲ. ಇದೇ ಕಾರಣಕ್ಕೆ ಸ್ಟಾರ್ ನಟರು ಹೆಚ್ಚು ಸಿನಿಮಾ ಮಾಡಬೇಕು ಎನ್ನುವ ಕೂಗು ಪದೇ ಪದೆ ಕೇಳಿಬರುತ್ತದೆ.

More from Filmibeat

English summary
Fans urge Kannada stars to take inspiration from Malayalam icons Mohanlal and Mammootty. to do more movies;
Read more about: mohanlal mollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X