ಮೋಹನ್‌ಲಾಲ್ ರಾಜಕೀಯಕ್ಕೆ ಎಂಟ್ರಿ: ನಟ ಹೇಳಿದ್ದೇನು?
ಮಲಯಾಳಂನ ಸ್ಟಾರ್ ನಟ ಮೋಹನ್‌ಲಾಲ್ ರಾಜಕೀಯಕ್ಕೆ ಎಂಟ್ರಿ ನೀಡುತ್ತಾರೆ ಎಂಬ ಸುದ್ದಿ ಹಳೆಯದ್ದು. ಹಲವು ವರ್ಷಗಳಿಂದಲೂ ಈ ಸುದ್ದಿ ಹರಿದಾಡುತ್ತಲೇ ಇದೆ. ಇದೀಗ ಈ ಬಗ್ಗೆ ನಟ ಸ್ಪಷ್ಟನೆ ನೀಡಿದ್ದಾರೆ.
ಏಷಿಯನ್‌ನೆಟ್ ಜೊತೆ ನಡೆದ ಸಂದರ್ಶನದಲ್ಲಿ ಮಾತನಾಡಿದ ನಟ ಮೋಹನ್‌ಲಾಲ್ ನನಗೆ ರಾಜಕೀಯದ ಬಗ್ಗೆ ಆಸಕ್ತಿ ಇಲ್ಲ. ರಾಜಕೀಯ ನನಗೆ ಸರಿಹೊಂದುವ ಸ್ಥಳವಲ್ಲ. ಹಾಗಾಗಿ ನಾವು ರಾಜಕೀಯ ಪಕ್ಷವನ್ನು ಸೇರುವ ಗುರಿ ಹೊಂದಿಲ್ಲ.
''ಎಲ್ಲ ವರ್ಗದ, ಐಡಿಯಾಲಜಿಗಳ ಜನರೂ ನನ್ನನ್ನು ಒಪ್ಪಿಕೊಳ್ಳಬೇಕು, ಪ್ರೀತಿಸಬೇಕು ಎಂಬ ಆಸೆಯನ್ನು ಹೊಂದಿರುವವನು ನಾನು. ಹಾಗಾಗಿ ರಾಜಕೀಯಕ್ಕೆ ಸೇರಿ ವಿಭೇದ ಮಾಡಲಾರೆ'' ಎಂದಿದ್ದಾರೆ.

ಮುಂದುವರೆದು, ''ನಾನು ಯಾವುದೇ ಪಂದು ಪಕ್ಷ ಸೇರ್ಪಡೆಯಾದರೆ ಆ ಒಂದು ಪಕ್ಷಕ್ಕೆ ಮಾತ್ರವೇ ತಾವು ಸೀಮಿತವಾಗಿರಬೇಕು. ಆದರೆ ಈಗ ನನಗೆ ಹಾಗಲ್ಲ, ನನಗೆ ಯಾವುದೇ ಒಳ್ಳೆಯ ಐಡಿಯಾ ಬಂದರೆ ಅದನ್ನು ನಾನು ಆಸಕ್ತಿಯುಳ್ಳ ಯಾವುದೇ ಪಕ್ಷದೊಂದಿಗೆ, ಪಕ್ಷದ ಸದಸ್ಯರೊಟ್ಟಿಗೆ ಹಂಚಿಕೊಳ್ಳಬಹುದು'' ಎಂದಿದ್ದಾರೆ.
''ಯಾವುದೇ ರಾಜಕೀಯ ಪಕ್ಷ ಸೇರುವ ಮೊದಲು ರಾಜಕೀಯ ಪಕ್ಷ ಎಂದರೇನು? ಅದರ ಉದ್ದೇಶಗಳು, ಇತಿಹಾಸ ಎಲ್ಲವನ್ನೂ ತಿಳಿದುಕೊಳ್ಳುವುದು ಬಹಳ ಮುಖ್ಯ. ಹಲವು ನಾಯಕರು, ಜನರು ರಾಜಕೀಯ ಪಕ್ಷಗಳ ಬಗ್ಗೆ ಸರಿಯಾದ ಮಾಹಿತಿಯೇ ಇಲ್ಲದೆ ಸುಮ್ಮನೆ ಪಕ್ಷ ಸೇರ್ಪಡೆ ಆಗುತ್ತಾರೆ'' ಎಂದು ಹೇಳಿದ್ದಾರೆ.
ನಟ ಮೋಹನ್‌ಲಾಲ್ ಬಿಜೆಪಿ ಪಕ್ಷ ಸೇರ್ಪಡೆಗೊಳ್ಳುತ್ತಾರೆ ಎನ್ನಲಾಗಿತ್ತು. ಅಮಿತ್ ಶಾ ಅವರನ್ನು ಒಮ್ಮೆ ಭೇಟಿ ಸಹ ಆಗಿದ್ದರು ಮೋಹನ್‌ಲಾಲ್. ಅಲ್ಲದೆ ಈ ಹಿಂದೆ ಅವರ ಮೇಲೆ ಐಟಿ ದಾಳಿ ಸಹ ನಡೆದಿತ್ತು. ಇವುಗಳೆಲ್ಲದರ ಹಿನ್ನೆಲೆಯಲ್ಲಿ ಮೋಹನ್‌ಲಾಲ್ ಬಿಜೆಪಿ ಸೇರ್ಪಡೆಗೊಳ್ಳುತ್ತಾರೆ ಎಂಬ ಗಾಳಿಸುದ್ದಿ ಹರಡಿತ್ತು. ಆದರೆ ಮೋಹನ್‌ಲಾಲ್ ಯಾವುದೇ ಪಕ್ಷ ಸೇರಲಿಲ್ಲ.
ಮೋಹನ್‌ಲಾಲ್ ಪ್ರಸ್ತುತ ಹಲವು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ತಮ್ಮದೇ ನಿರ್ದೇಶನದ 'ಬರೋಜ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ 'ಅಲೋನ್', 'ದೃಶ್ಯಂ 3', 'ಒಲವಂ ತೀರವಂ', 'ವೃಷಭ', 'ಮೋನ್‌ಸ್ಟರ್', 'ರಾಜವಿಂಟೇ ಮಕನ್', 'ದಿ ಚೇಸ್', 'ರಾಮ್' ಇನ್ನು ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮಲಯಾಳಂ ಹೊರತಾಗಿ ಬೇರೆ ಭಾಷೆಯ ಸಿನಿಮಾಗಳಲ್ಲಿಯೂ ಮೊಹನ್‌ಲಾಲ್ ನಟಿಸುತ್ತಿದ್ದಾರೆ.


Click it and Unblock the Notifications











