For Quick Alerts
  ALLOW NOTIFICATIONS  
  For Daily Alerts

  ದುಬೈನಲ್ಲಿ ಐಶಾರಾಮಿ ಮನೆ ಖರೀದಿಸಿದ ನಟ ಮೋಹನ್‌ಲಾಲ್

  |

  ಕೆಲವು ವಾರಗಳಿಂದ ದುಬೈ ನಲ್ಲಿ ವಾಸ್ತವ್ಯ ಹೂಡಿರುವ ಮಲಯಾಳಂ ನಟ ಮೋಹನ್‌ಲಾಲ್ ದುಬಾರಿ ಫ್ಲಾಟ್‌ ಒಂದನ್ನು ಖರೀದಿಸಿದ್ದಾರೆ.

  ಮೋಹನ್‌ಲಾಲ್ ಭಾರಿ ಐಶಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ಫ್ಲಾಟ್ ಖರೀದಿಸಿದ್ದು, ಇನ್ನು ಮುಂದೆ ಅಲ್ಲಿಯೇ ವಾಸ್ತವ್ಯ ಹೂಡುವ ಸಾಧ್ಯತೆ ಇದೆ. ದುಬಾರಿ ಕಾರುಗಳ ಹವ್ಯಾಸ ಹೊಂದಿರುವ ಮೋಹನ್‌ಲಾಲ್ ದುಬೈನಲ್ಲಿ ಸಹ ಭಾರಿ ದುಬಾರಿಯಾದ ಫ್ಲ್ಯಾಟ್ ಅನ್ನು ಖರೀದಿಸಿದ್ದಾರೆ.

  ದಕ್ಷಿಣದ ಖ್ಯಾತ ನಟನೊಂದಿಗೆ ದುಬೈನಲ್ಲಿ ದೀಪಾವಳಿ ಆಚರಿಸಿದ ಸಂಜಯ್ ದತ್

  ಮೋಹನ್‌ಲಾಲ್ ಖರೀದಿಸಿರುವ ದುಬಾರಿ ಮತ್ತು ಐಶಾರಾಮಿ ಫ್ಲಾಟ್‌ನ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಮೋಹನ್‌ಲಾಲ್ ಖರೀದಿಸಿರುವ ಫ್ಲಾಟ್‌ನ ಬೆಲೆ ಕೋಟಿಗಳ ಲೆಕ್ಕದಲ್ಲಿದೆ.

  ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೆಲವೇ ನಿಮಿಷ

  ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೆಲವೇ ನಿಮಿಷ

  ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 20 ನಿಮಿಷ ದೂರದಲ್ಲಿರುವ ಡೌನ್‌ಟೌನ್ ಏರಿಯಾದಲ್ಲಿ 51 ಅಂತಸ್ತಿನ ಗಗನಚುಂಬಿ ಅಪಾರ್ಟ್‌ಮೆಂಟ್‌ನಲ್ಲಿ ಫ್ಲ್ಯಾಟ್ ಖರೀದಿಸಿದ್ದಾರೆ ಮೋಹನ್‌ಲಾಲ್.

  ಪತ್ನಿಯೊಂದಿಗೆ ಹೊಸ ಮನೆ ಪ್ರವೇಶಿಸಿದ ಮೋಹನ್‌ಲಾಲ್

  ಪತ್ನಿಯೊಂದಿಗೆ ಹೊಸ ಮನೆ ಪ್ರವೇಶಿಸಿದ ಮೋಹನ್‌ಲಾಲ್

  ಮೋಹನ್‌ಲಾಲ್, ಪತ್ನಿ ಸುಚಿತ್ರ ಹಾಗೂ ಆತ್ಮೀಯ ಗೆಳೆಯ ಅಶೋಕ್ ಕುಮಾರ್ ಅವರುಗಳು ಹೊಸ ಫ್ಲ್ಯಾಟ್‌ನ ಒಳಗೆ ನಿಂತು ಚಿತ್ರಗಳನ್ನು ತೆಗೆಸಿಕೊಂಡಿದ್ದಾರೆ. ಈ ಚಿತ್ರಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

  ಶಾರೂಖ್, ಪ್ರೀತಿ ಜಿಂಟಾ ಬಳಿಕ ಮತ್ತೊಬ್ಬ ಸೂಪರ್ ಸ್ಟಾರ್ IPL ಅಖಾಡಕ್ಕೆ ಎಂಟ್ರಿ!

  ಆರ್‌ಪಿ ಹೈಟ್ಸ್‌ ಹೆಸರಿನ ಅಪಾರ್ಟ್‌ಮೆಂಟ್

  ಆರ್‌ಪಿ ಹೈಟ್ಸ್‌ ಹೆಸರಿನ ಅಪಾರ್ಟ್‌ಮೆಂಟ್

  ಮೋಹನ್‌ಲಾಲ್ ಆರ್‌ಪಿ ಹೈಟ್ಸ್ ಎಂಬ ಅಪಾರ್ಟ್‌ಮೆಂಟ್‌ನಲ್ಲಿ ಫ್ಲಾಟ್ ಖರೀದಿಸಿದ್ದು, ಇಲ್ಲಿನ ಫ್ಲಾಟ್‌ಗಳು ಕೋಟಿಗಿಂತಲೂ ಕಡಿಮೆ ಇಲ್ಲ. ದುಬೈನ ಬಹಳ ದುಬಾರಿ ಮತ್ತು ಐಶಾರಾಮಿ ಅಪಾರ್ಟ್‌ಮೆಂಟ್‌ಗಳಲ್ಲಿ ಒಂದು ಈ ಆರ್‌ಪಿ ಹೈಟ್ಸ್‌.

  6 ತಿಂಗಳು ಲಾಕ್ ಡೌನ್ ನಲ್ಲಿ ಶಿವಣ್ಣ ಏನ್ ಮಾಡಿದ್ರು ಗೊತ್ತಾ? | Shivanna | Filmibeat Kannada
  ಸಂಜಯ್ ದತ್ ಜೊತೆಗೆ ದೀಪಾವಳಿ ಆಚರಣೆ

  ಸಂಜಯ್ ದತ್ ಜೊತೆಗೆ ದೀಪಾವಳಿ ಆಚರಣೆ

  ದೃಶ್ಯಂ 2 ಸಿನಿಮಾದ ಚಿತ್ರೀಕರಣ ಮುಗಿಸಿ ದುಬೈಗೆ ತೆರಳಿರುವ ಮೋಹನ್‌ಲಾಲ್, ಟಿ20 ಫೈನಲ್‌ ಪಂದ್ಯದಲ್ಲಿ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದರು. ನಂತರ ಸಂಜಯ್ ದತ್ ಜೊತೆಗೆ ದೀಪಾವಳಿ ಆಚರಿಸಿ, ಈಗ ದುಬೈನ ತಮ್ಮ ಹೊಸ ನಿವಾಸದಲ್ಲಿ ಎಂಜಾಯ್ ಮಾಡುತ್ತಿದ್ದಾರೆ.

  English summary
  Malayalam actor Mohanlal purchased new luxury flat in Dubai's RP heights apartment.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X