ಅಮೆರಿಕಾದಲ್ಲಿ ಅಣ್ಣಾವ್ರ ಹಾಡು ಹಾಡಿ ಮತ್ತೆ ಕನ್ನಡಿಗರ ಹೃದಯ ಗೆದ್ದ ಮೋಹನ್ ಲಾಲ್

ಡಾ. ರಾಜ್‌ಕುಮಾರ್. ಭಾರತೀಯ ಚಿತ್ರರಂಗ ಕಂಡ ದೈತ್ಯ ಪ್ರತಿಭೆ. ನಟನಾಗಿ, ಗಾಯಕನಾಗಿ, ಯೋಗಪಟುವಾಗಿ ಕನ್ನಡಿಗರ ಮನಗೆದ್ದು ಅಭಿಮಾನಿಗಳನ್ನು ದೇವರು ಎಂದು ಕರೆದ ದೇವತಾ ಮನುಷ್ಯ. ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಸದಾ ನೆಲೆಸಿರುವ ಧೀಮಂತ ಚೇತನ ಅಣ್ಣಾವ್ರಿಗೆ ಭಾರತೀಯ ಚಿತ್ರರಂಗದ ದಿಗ್ಗಜ ಕಲಾವಿದರೆಲ್ಲರೂ ಅಭಿಮಾನಿಗಳೇ.

ಎನ್‌ಟಿಆರ್, ಎಎನ್‌ಆರ್, ಎಂಜಿಆರ್ ಶಿವಾಜಿ ಗಣೇಶನ್, ಅಮಿತಾಬ್ ಬಚ್ಚನ್, ರಜನಿಕಾಂತ್ ಹೀಗೆ ಭಾರತೀಯ ಚಿತ್ರರಂಗದ ದಿಗ್ಗಜರೆಲ್ಲಾ ಅಣ್ಣಾವ್ರ ನಟನೆ, ಆದರ್ಶ ವ್ಯಕ್ತಿತ್ವಕ್ಕೆ ಮಾರು ಹೋಗಿದ್ದರು. ಮಲಯಾಳಂ ನಟ ಮೋಹನ್ ಲಾಲ್ ಕೂಡ ಅಣ್ಣಾವ್ರ ಅಭಿಮಾನಿ. ಎರಡು ವರ್ಷಗಳ ಹಿಂದೆ ಮೋಹನ್ ಲಾಲ್ 'ಎರಡು ಕನಸು' ಚಿತ್ರದ 'ಎಂದೆಂದೂ ನಿನ್ನನು ಮರೆತು ಬದುಕಿರಲಾರೆ' ಹಾಡು ಸಖತ್ ವೈರಲ್ ಆಗಿತ್ತು.

Mohanlal recently sang Dr Rajkumar s Kannada super hit song at a US event

ಮೊಬೈಲ್‌ನಲ್ಲಿ ಅಣ್ಣಾವ್ರ ಸಿನಿಮಾ ಹಾಡು ನೋಡುತ್ತಾ ಕೇಳುತ್ತಾ ಮೋಹನ್ ಲಾಲ್ ಗುನುಗಿದ್ದರು. ಆ ವಿಡಿಯೋ ವೈರಲ್ ಆಗಿತ್ತು. ಮಲಯಾಳಂ ನಟನ ಪ್ರಯತ್ನಕ್ಕೆ ಕನ್ನಡಿಗರಿಂದ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಇದೀಗ ಮತ್ತೆ ಇದೇ ಹಾಡನ್ನು ವೇದಿಕೆಯಲ್ಲಿ ಹಾಡಿ ಅಭಿಮಾನಿಗಳ ಪ್ರೀತಿಯ ಲಾಲೆಟ್ಟನ್ ಮೋಡಿ ಮಾಡಿದ್ದಾರೆ. ಅದೂ ಕೂಡ ಅಮೆರಿಕಾದ ವೇದಿಕೆಯೊಂದರಲ್ಲಿ ಲೈವ್ ಪರ್ಫಾರ್ಮನ್ಸ್ ವೇಳೆ ಅಣ್ಣಾವ್ರ ಹಾಡು ಹಾಡಿದ್ದಾರೆ.

ಇತ್ತೀಚೆಗೆ ಮೋಹನ್ ಲಾಲ್ ಅಮೆರಿಕಾ ಪ್ರವಾಸ ಕೈಗೊಂಡಿದ್ದರು. ತಮ್ಮದೇ 'ನಾರನ್' ಚಿತ್ರದ 'ವೇಲ್ ಮುರುಗ' ಎಂಬ ಹಾಡನ್ನು ಅವರು ಹಾಡಿದ್ದರು. ಅದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿತ್ತು. ಇದೀಗ ಅಣ್ಣಾವ್ರ ಹುಟ್ಟುಹಬ್ಬದ ಸಂಭ್ರಮದಲ್ಲೇ ಮೋಹನ್ ಲಾಲ್ ಹಾಡಿರುವ 'ಎರಡು ಕನಸು' ಚಿತ್ರದ ಹಾಡಿನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ಅದ್ಭುತ ನಟ ಮೋಹನ್ ಲಾಲ್ ಒಳ್ಳೆ ಗಾಯಕರು ಕೂಡ ಹೌದು. ಸಾಕಷ್ಟು ವೇದಿಕೆಗಳಲ್ಲಿ ಗಾಯನದ ಮೂಲಕ ರಂಜಿಸಿದ್ದಾರೆ.

ಮಾಲಿವುಡ್ ನಟ ಮೋಹನ್ ಲಾಲ್ ಕನ್ನಡ 'ಮೈತ್ರಿ' ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಜೊತೆ ನಟಿಸಿದ್ದರು. 4 ದಶಕಗಳ ಹಿಂದೆ ಮಲಯಾಳಂ ಚಿತ್ರರಂಗ ಪ್ರವೇಶಿಸಿದ ಮೋಹನ್ ಲಾಲ್ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯರಾಗಿದ್ದಾರೆ. 300ಕ್ಕೂ ಅಧಿಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ವಯಸ್ಸು 60 ದಾಟಿದ್ರು ಇವತ್ತಿಗೂ ಯುವ ನಟರನ್ನು ನಾಚಿಸುವಂತೆ ವರ್ಷಕ್ಕೆ ನಾಲ್ಕೈದು ಸಿನಿಮಾಗಳಲ್ಲಿ ನಟಿಸುತ್ತಾ ಬರ್ತಿದ್ದಾರೆ.

ಮೋಹನ್ ಲಾಲ್ ಸಿನಿಮಾಗಳು ಬಾಕ್ಸಾಫೀಸ್ ಶೇಕ್ ಮಾಡ್ತಿದೆ. 'ದೃಶ್ಯಂ- 3' ಸಿನಿಮಾ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರಲು ಲಾಲೆಟ್ಟನ್ ಸಜ್ಜಾಗಿದ್ದಾರೆ. ಅಣ್ಣಾವ್ರ ದೊಡ್ಡ ಅಭಿಮಾನಿಯಾಗಿರುವ ಮೋಹನ್ ಲಾಲ್ ಅವರೊಟ್ಟಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಅವರೊಟ್ಟಿಗೆ ನಟಿಸುವ ಆಸರ ಕೂಡ ಇತ್ತು. ಆದರೆ ಅದು ಸಾಧ್ಯವಾಗಲಿಲ್ಲ.

'ಮೈತ್ರಿ' ಸಿನಿಮಾ ವೇಳೆ ಡಾ. ರಾಜ್‌ಕುಮಾರ್ ಬಗ್ಗೆ ಮೋಹನ್ ಲಾಲ್ ಮಾತನಾಡಿದ್ದರು. ನಾನು ರಾಜ್‌ಕುಮಾರ್ ಸರ್ ಅವರಿಗೆ ಆತ್ಮೀಯನಾಗಿದ್ದೆ. ನನಗೆ ಅವರೊಟ್ಟಿಗೆ ನಟಿಸುವ ಆಸೆ ಇತ್ತು. ಅದು ಸಾಧ್ಯವಾಗಲಿಲ್ಲ. ಆದರೆ ಪುನೀತ್ ರಾಜ್‌ಕುಮಾರ್ ಜೊತೆ ನಟಿಸಿದ್ದು ಸಂತಸ ತಂದಿದೆ" ಎಂದಿದ್ದರು. ಕಳೆದ ವರ್ಷ ಮೋಹನ್ ಲಾಲ್ ನಟಿಸಿದ್ದ 4 ಸಿನಿಮಾಗಳು ತೆರೆಗೆ ಬಂದಿತ್ತು. ಎರಡು ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. 'ವೃಷಭ' ಸಿನಿಮಾ ಮಾತ್ರ ಹೀನಾಯವಾಗಿ ಸೋತಿತ್ತು.

ಈ ವರ್ಷ 5 ಸಿನಿಮಾಗಳು ಮೋಹನ್ ಲಾಲ್ ಕೈಯಲ್ಲಿವೆ. ಮಮ್ಮುಟ್ಟಿ ಜೊತೆ ನಟಿಸಿರುವ 'ಪೆಟ್ರಿಯಾಟ್' ಸಿನಿಮಾ ಮೇ 1ರಂದು ತೆರೆಗೆ ಬರಲಿದೆ. ಇನ್ನು ಬಹುನಿರೀಕ್ಷಿತ 'ದೃಶ್ಯಂ- 3' ಸಿನಿಮಾ ಮೇ 21ರಂದು ಬಿಡುಗಡೆ ಆಗಲಿದೆ. ಏಪ್ರಿಲ್ ಮೊದಲ ವಾರದಲ್ಲೇ ಈ ಸಿನಿಮಾ ರಿಲೀಸ್ ಪ್ಲಾನ್ ನಡೆದಿತ್ತು. ಆದರೆ ಇರಾನ್-ಇಸ್ರೇಲ್ ವಾರ್ ಕಾರಣಕ್ಕೆ ಮುಂದೂಡುವಂತಾಯಿತು.

Read more about: rajkumar mohanlal song
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X