ಫ್ಯಾನ್ಸ್ ಕಾಯ್ತಿದ್ದ ಆ ಟೈಂ ಬಂದೇಬಿಡ್ತು; ಗುಡ್ ನ್ಯೂಸ್ ಕೊಟ್ರು ಮೋಹನ್ ಲಾಲ್

ಮಾಲಿವುಡ್ ನಟ ಮೋಹನ್ ಲಾಲ್ ತಮ್ಮ ಅದ್ಭುತ ಸಿನಿಮಾಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ವರ್ಷಕ್ಕೆ ಎರಡ್ಮೂರು ಸಿನಿಮಾಗಳಲ್ಲಿ ನಟಿಸಿ ಕಮಾಲ್ ಮಾಡುತ್ತಿದ್ದಾರೆ. ಈ ವರ್ಷ ಕಂಪ್ಲೀಟ್ ಆಕ್ಟರ್ ನಟನೆಯ 2 ಸಿನಿಮಾಗಳು ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಇದೆಲ್ಲದರ ನಡುವೆ ಅಭಿಮಾನಿಗಳು ಸಿಹಿಸುದ್ದಿ ಕೊಟ್ಟಿದ್ದಾರೆ.

ಈಗ ಮೋಹಲ್ ಲಾಲ್ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡ್ತಿವೆ. ಓಟಿಟಿ ಟ್ರೆಂಡ್ ಶುರುವಾದ ಬಳಿಕ ಅವರ ಸಿನಿಮಾಗಳು ಹೆಚ್ಚು ಜನರನ್ನು ತಲುಪುತ್ತಿದೆ. ಕನ್ನಡಕ್ಕೂ ಸಿನಿಮಾಗಳು ಡಬ್ ಆಗಿ ಬರ್ತಿವೆ. ಇನ್ನು ಮೋಹನ್ ಲಾಲ್ ನಟನೆಯ ಸಿನಿಮಾಹಳನ್ನು ರೀಮೆಕ್ ಮಾಡಲು ಕೆಲವರು ಹೆದರುತ್ತಾರೆ. ಆದರೂ ಕೆಲವೊಮ್ಮೆ ಅಂತಹ ಸಾಹಸ ಮಾಡುವವರು ಇದ್ದಾರೆ.

Mohanlal reveals Drishyam- 3 Shooting Starts From October 2025

12 ವರ್ಷಗಳ ಹಿಂದೆ ಬಂದಿದ್ದ ಕ್ರೈಂ ಥ್ರಿಲ್ಲರ್ ಸಿನಿಮಾ 'ದೃಶ್ಯಂ' ಬಾಕ್ಸಾಫೀಸ್ ಶೇಕ್ ಮಾಡಿತ್ತು. ಕನ್ನಡ ಸೇರಿದಂತೆ ಹಲವು ಭಾಷೆಗಳಿಗೆ ರೀಮೆಕ್ ಆಗಿ ಗೆದ್ದಿತ್ತು. 11 ವರ್ಷಗಳ ಬಳಿಕ 'ದೃಶ್ಯಂ' ಸೀಕ್ವೆಲ್ ಕೂಡ ಬಂದು ಸಕ್ಸಸ್ ಕಂಡಿತ್ತು. ಇದೀಗ ಸರಣಿಯನ್ನು ಮತ್ತೆ ಮುಂದುವರೆಸಲು ಚಿತ್ರತಂಡ ಮುಂದಾಗಿದೆ. ಈ ಬಗ್ಗೆ ಅಧಿಕೃತವಾಗಿ ಮೋಹನ್ ಲಾಲ್ ಮಾಹಿತಿ ನೀಡಿದ್ದಾರೆ. ಇದೇ ಅಕ್ಟೋಬರ್‌ನಲ್ಲಿ 'ದೃಶ್ಯಂ'-3 ಚಿತ್ರೀಕರಣ ಆರಂಭ ಎಂದು ಟ್ವೀಟ್ ಮಾಡಿದ್ದಾರೆ.

ಕೇಬಲ್ ಆಪರೇಟರ್ ಜಾರ್ಜ್‌ಕುಟ್ಟಿ(ಮೋಹನ್ ಲಾಲ್) ಮತ್ತು ಅವರ ಪತ್ನಿ ರಾಣಿ(ಮೀನಾ). ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ಬಹಳ ಸಂತೋಷವಾಗಿ ಮಧ್ಯಮವರ್ಗದ ಪುಟ್ಟ ಕುಟುಂಬ ಅದು. ಅಚಾನಕ್ ಆಗಿ ರಾಣಿ ಹಾಗೂ ಮಗಳು ಅಂಜು ಮಾಡುವ ಕೊಲೆ ದೊಡ್ಡ ಬಿರುಗಾಳಿ ಎಬ್ಬಿಸಿಬಿಡುತ್ತದೆ. ಪತ್ನಿ ಹಾಗೂ ಮಗಳನ್ನು ಕಾನೂನಿನಿಂದ ರಕ್ಷಿಸಲು ಜಾರ್ಜ್ ಕುಟ್ಟಿ ಮುಂದಾಗುತ್ತಾನೆ. ಸತ್ತವನ ಹೆಣ ಮುಚ್ಚಿಟ್ಟು ಏನು ಗೊತ್ತಾಗದಂತೆ ಪ್ರಕರಣದಿಂದ ಕುಟುಂಬವನ್ನು ಕಾಪಾಡಿಕೊಳ್ಳಲು ಹೋರಾಟ ಮಾಡುತ್ತಾನೆ.

ಸತ್ತವನು ಹಿರಿಯ ಪೊಲೀಸ್ ಅಧಿಕಾರಿ ಮಗ ವರುಣ್ ಪ್ರಭಾಕರನ್. ಆದರೆ ಹೆಣ ಸಿಕ್ಕಿಲ್ಲ. ಮಗ ಸತ್ತಿದ್ದಾನೋ ಇಲ್ಲವೋ ಎನ್ನುವುದು ಪೋಷಕರಿಗೆ ಗೊತ್ತಿಲ್ಲ. ಈ ಗೊಂದಲದಲ್ಲೇ 'ದೃಶ್ಯಂ' ಚಿತ್ರದ ಕಥೆ ಮುಗಿದಿತ್ತು. ನಿರ್ಮಾಣ ಹಂತದಲ್ಲಿದ್ದ ಪೊಲೀಸ್ ಠಾಣೆ ಕಟ್ಟಡದ ಕೆಳಗೆ ವರುಣ್ ಶವವನ್ನು ಹೂತಿತ್ತಂತೆ ಕ್ಲೈಮ್ಯಾಕ್ಸ್‌ನಲ್ಲಿ ತೋರಿಸಲಾಗಿತ್ತು. ಅಲ್ಲಿಂದ ಮುಂದೆ ಪಾರ್ಟ್-2 ಬಗ್ಗೆ ಕುತೂಹಲ ಮೂಡಿತ್ತು. 4 ವರ್ಷಗಳ ಹಿಂದೆ ಅದಕ್ಕೆ ಬ್ರೇಕ್ ಬಿದ್ದಿತ್ತು. ಅಲ್ಲಿಂದಲೂ ವರುಣ್ ಶವವನ್ನು ಬದಲಾಯಿಸಿ ಜಾರ್ಜ್‌ಕುಟ್ಟಿ ತನ್ನ ಕುಟುಂಬವನ್ನು ರಕ್ಷಿಸಿಕೊಂಡಿದ್ದ.

ತನ್ನ ಚಾಕಚಕ್ಯತೆಯಿಂದ ಪೊಲೀಸ್ ಇಲಾಖೆಯನ್ನು ಯಾಮಾರಿಸಿ ಮಡದಿ ಮಗಳನ್ನು ಶಿಕ್ಷೆಯಿಂದ ತಪ್ಪಿಸಲು ಜಾರ್ಜ್ ಕುಟ್ಟಿ ಹೋರಾಟ ಎರಡನೇ ಭಾಗದಲ್ಲಿ ಮುಂದುವರೆದಿತ್ತು. ಕ್ಲೈಮ್ಯಾಕ್ಸ್‌ನಲ್ಲಿ ವರುಣ್ ಅಸ್ಥಿಯನ್ನು ಜಾರ್ಜ್‌ಕುಟ್ಟಿ ಪೋಷಕರಿಗೆ ಕೊಟ್ಟಿದ್ದಾನೆ. ಕಥೆ ಮುಂದುವರೆಯುವ ಸುಳಿವು ಸಿಕ್ಕಿತ್ತು. ಅಲ್ಲಿಂದ ಮುಂದೆ ಕತೆ ಏನು? ಎನ್ನುವುದನ್ನು 'ದೃಶ್ಯಂ' ಪಾರ್ಟ್-3 ಚಿತ್ರದಲ್ಲಿ ನೋಡಬೇಕು.

ಸರಣಿಯ ಎರಡೂ ಸಿನಿಮಾಗಳನ್ನು ಜಿತು ಜೋಸೆಫ್ ಕಟ್ಟಿಕೊಟ್ಟಿದ್ದರು. ಇದೀಗ ಸರಣಿಯ ಮೂರನೇ ಚಿತ್ರವನ್ನು ಅವರೇ ನಿರ್ದೇಶನ ಮಾಡಲಿದ್ದಾರೆ. ಮುಂದಿನ ದಿನಗಳಲ್ಲಿ ಚಿತ್ರದ ಬಗ್ಗೆ ಮತ್ತಷ್ಟು ಅಪ್‌ಡೇಟ್ ಸಿಗಲಿದೆ. 'ದೃಶ್ಯಂ' ಸಿನಿಮಾ ಭಾಗ-1 ಹಾಗೂ ಭಾಗ-2 ಕನ್ನಡಕ್ಕೂ ರೀಮೆಕ್ ಆಗಿತ್ತು. ಮೋಹನ್ ಲಾಲ್ ಪಾತ್ರವನ್ನು ರವಿಚಂದ್ರನ್ ನಿಭಾಯಿಸಿದ್ದರು.

ತೆಲುಗಿನಲ್ಲಿ ವೆಂಕಟೇಶ್, ತಮಿಳಿನಲ್ಲಿ ಕಮಲ್ ಹಾಸನ್, ಹಿಂದಿಯಲ್ಲಿ ಅಜಯ್ ದೇವಗನ್ 'ದೃಶ್ಯಂ' ಸಿನಿಮಾ ರೀಮೆಕ್ ಮಾಡಿದ್ದರು. ಭಾರತೀಯ ಭಾಷೆಗಳಲ್ಲಿ ಮಾತ್ರವಲ್ಲ ಸಿಂಹಳ ಹಾಗೂ ಮ್ಯಾಂಡರೀನ್ ಚೈನೀಸ್ ಭಾಷೆಗೂ ಈ ಸಿನಿಮಾ ರೀಮೆಕ್ ಆಗಿ ಸಂಚಲನ ಸೃಷ್ಟಿಸಿತ್ತು.

More from Filmibeat

English summary
Drishyam- 3 film is officially on the way, Shoot starts October 2025;
Read more about: mohanlal mollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X