'Drishyam- 3'; 'ಟಾಕ್ಸಿಕ್' ಹಾದಿಯಲ್ಲಿ'ದೃಶ್ಯಂ- 3'; ರಿಲೀಸ್ ಡೇಟ್ ಪೋಸ್ಟ್‌ಪೋನ್

ಒಂದು ಸಿನಿಮಾ ಹೇಳಿದ ಸಮಯಕ್ಕೆ ತೆರೆಗೆ ತರುವುದು ಅಷ್ಟು ಸುಲಭ ಅಲ್ಲ. ಅದಕ್ಕೆ ನಾನಾ ಕಾರಣಗಳಿವೆ. ಸಮಯ, ಸಂದರ್ಭ ಎಲ್ಲಾ ಚಿತ್ರತಂಡದ ಕೈಯಲ್ಲಿ ಇರಲ್ಲ. ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ಸಿನಿಮಾ ರಿಲೀಸ್ ಮುಂದೂಡಬೇಕಾಗುತ್ತಿದೆ. ಮೋಹನ್ ಲಾಲ್ ನಟನೆಯ 'ದೃಶ್ಯಂ- 3' ಚಿತ್ರ ಕೂಡ ಅದೇ ಹಾದಿಯಲ್ಲಿದೆ.

ಏಪ್ರಿಲ್ 2ರಂದು 'ದೃಶ್ಯಂ- 3' ಸಿನಿಮಾ ಘೋಷಣೆ ಮಾಡುವುದಾಗಿ ಬಹಳ ಹಿಂದಿಯೇ ಘೋಷಣೆ ಮಾಡಿದ್ದರು. ಇನ್ನು 10 ದಿನಗಳು ಮಾತ್ರ ಬಾಕಿಯಿದೆ. ಆದರೆ ಈವರೆಗೆ ಟೀಸರ್, ಟ್ರೈಲರ್, ಸಾಂಗ್ ಬಿಡುಗಡೆ ಆಗಲಿಲ್ಲ. ಸಿನಿಮಾ ಪ್ರಮೋಷನ್ ಶುರುವಾಗಿಲ್ಲ. ಇದನ್ನೆಲ್ಲಾ ನೋಡುತ್ತಿದ್ದರೆ ಇನ್ನೆರಡು ವಾರಗಳಲ್ಲಿ ಈ ಕ್ರೈಂ ಥ್ರಿಲ್ಲರ್ ಸಿನಿಮಾ ತೆರೆಗೆ ಬರಲ್ಲ ಎನ್ನುವುದು ಖಚಿತವಾಗುತ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಮಾತ್ರ ಹೊರಬೀಳಬೇಕಿದೆ.

Mohanlal s Drishyam 3 Release Delay Buzz Grows Amid Gulf Tensions

ಗಲ್ಫ್ ರಾಷ್ಟ್ರಗಳಲ್ಲಿ ಯುದ್ಧದ ಪರಿಣಾಮ ಹಾಗೂ ರಾಜಕೀಯ ಉದ್ವಿಗ್ನತೆಯಿಂದಾಗಿ 'ದೃಶ್ಯಂ- 3' ಸಿನಿಮಾ ಬಿಡುಗಡೆ ತಡವಾಗುತ್ತದೆ ಎಂದು ಕೆಲವರು ವಾದಿಸುತ್ತಿದ್ದಾರೆ. ಮಲಯಾಳಂ ಸಿನಿಮಾಗಳಿಗೆ ಗಲ್ಫ್ ರಾಷ್ಟ್ರಗಳು ಅತಿದೊಡ್ಡ ಮಾರ್ಕೆಟ್. ಮಾಲಿವುಡ್ ಸಿನಿಮಾಗಳು ದುಬೈ ಸೇರಿದಂತೆ ಕೊಲ್ಲಿ ರಾಷ್ಟ್ರಗಳಲ್ಲಿ ಒಳ್ಳೆ ಕಲೆಕ್ಷನ್ ಮಾಡುತ್ತವೆ. ಅದರಲ್ಲೂ ಮೋಹನ್ ಲಾಲ್ ನಟನೆಯ ದೃಶ್ಯಂ ಸರಣಿ ಸಿನಿಮಾ ಅಂದ್ರೆ ಕೇಳ್ಬೇಕಾ? ಆದರೆ ಇಂತಹ ಸಮಯದಲ್ಲಿ ಸಿನಿಮಾ ಬಿಡುಗಡೆ ಒಳ್ಳೆ ಆಯ್ಕೆ ಅಲ್ಲ ಎಂದು ಚರ್ಚೆ ನಡೀತಿದೆ.

ಇರಾನ್ ಹಾಗೂ ಇಸ್ರೇಲ್ ಯುದ್ಧದ ಕಾರಣ ಕೊಟ್ಟು ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಬಿಡುಗಡೆ 3 ತಿಂಗಳು ಮುಂದೂಡಲಾಗಿದೆ. ಮಾರ್ಚ್ 19ಕ್ಕೆ ಬರಬೇಕಿದ್ದ ಸಿನಿಮಾ ಜೂನ್ 2ರಂದು ತೆರೆಗೆ ಬರಲಿದೆ. ಅದೇ ರೀತಿ 'ದೃಶ್ಯಂ' ಸಿನಿಮಾ ತಡವಾಗುವ ಲಕ್ಷಣಗಳು ಸ್ಪಷ್ಟವಾಗಿದೆ. ಜೀತು ಜೋಸೆಫ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸರಣಿಯ ಕೊನೆಯ ಸಿನಿಮಾ ಇದು ಎನ್ನಲಾಗ್ತಿದೆ.

Mohanlal s Drishyam 3 Release Delay Buzz Grows Amid Gulf Tensions

2013ರಲ್ಲಿ ಬಂದಿದ್ದ 'ದೃಶ್ಯಂ' ಸಿನಿಮಾ ಹಿಟ್ ಆಗಿತ್ತು. ಕನ್ನಡ ಸೇರಿ ಹಲವು ಭಾಷೆಗಳಿಗೆ ರೀಮೆಕ್ ಆಗಿತ್ತು. 12 ವರ್ಷಗಳ ಬಳಿಕ ಪಾರ್ಟ್-2 ಬಂದಿತ್ತು. ಸಿನಿರಸಿಕರ ಮನಗೆದ್ದಿತ್ತು. ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ಓಟಿಟಿಯಲ್ಲೇ ಸಿನಿಮಾ ಬಿಡುಗಡೆ ಆಗಿ ಹಿಟ್ ಆಗಿತ್ತು. ಹಾಗಾಗಿ ಸರಣಿಯ ಮತ್ತೊಂದು ಸಿನಿಮಾ ನಿರ್ಮಾಣವಾಗಿದೆ. ಈ ಚಿತ್ರದಲ್ಲಿ ಕೂಡ ಮೋಹನ್ ಲಾಲ್, ಮೀನಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ತನ್ನ ಕುಟುಂಬದ ರಕ್ಷಣೆಗೆ ನಿಂತಿರುವ ಜಾರ್ಜ್ ಕುಟ್ಟಿ ಕಾನೂನಿನ ಕಣ್ಣಿಗೆ ಮಣ್ಣೆರಚಿ ಎರಡೆರಡು ಬಾರಿ ತಪ್ಪಿಸಿಕೊಂಡಿದ್ದಾನೆ. ಈ ಬಾರಿ ಕಥೆ ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಕಾದು ನೋಡಬೇಕಿದೆ.

ನಿರ್ಮಾಪಕ ಆಂಟನಿ ಪೆರುಂಬವೂರ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಹಿಂದಿಯಲ್ಲಿ ಅಕ್ಷಯ್‌ ಕುಮಾರ್ ದೃಶ್ಯಂ ಸರಣಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೂರನೇ ಭಾಗದ ಚಿತ್ರೀಕರಣ ಕೂಡ ಭರದಿಂದ ಸಾಗುತ್ತಿದೆ. ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಪಾರ್ಟ್- 3 ಬಿಡುಗಡೆ ಆಗಲಿದೆ.

ಕೇರಳ ಬಿಟ್ಟ ಮಲಯಾಳಂ ಸಿನಿಮಾಗಳಲ್ಲಿ ಗಲ್ಫ್ ರಾಷ್ಟ್ರಗಳು ದೊಡ್ಡ ಮಾರ್ಕೆಟ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಪ್ಯಾನ್ ವರ್ಲ್ಡ್ ಮಟ್ಟದಲ್ಲಿ 'ಟಾಕ್ಸಿಕ್' ಸಿನಿಮಾ ತೆರೆಗೆ ತರಲು ಯಶ್ ಮುಂದಾಗಿದ್ದಾರೆ. ಆದರೆ ಯುದ್ಧದ ಹಿನ್ನಲೆಯಲ್ಲಿ ಮಧ್ಯಪ್ರಾಚ್ಯ ಭಾಗದಲ್ಲಿ ಚಿತ್ರಕ್ಕೆ ಹಿನ್ನೆಡೆ ಆಗುತ್ತದೆ. ಯುದ್ಧದ ವಾತಾವರಣ ಇರುವಾಗ ಜನ ಬಂದು ಸಿನಿಮಾ ನೋಡಲ್ಲ ಎನ್ನುವ ಕಾರಣಕ್ಕೆ ರಿಲೀಸ್ ಡೇಟ್ ಮುಂದೂಡಲಾಗಿದೆ. 'ಧುರಂಧರ್' ಚಿತ್ರವನ್ನು ಈಗಾಗಲೇ ಕೆಲ ಮುಸ್ಲಿಂ ದೇಶಗಳಲ್ಲಿ ಬ್ಯಾನ್ ಮಾಡಲಾಗಿದೆ. ಹಾಗಾಗಿ ಸೀಕ್ವೆಲ್ ಕೂಡ ಅಲ್ಲಿ ಬಿಡುಗಡೆ ಆಗಲ್ಲ. ಅದೇ ಕಾರಣಕ್ಕೆ ಈ ವಾರ 'ಧುರಂಧರ್'-2 ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಆದರೆ 'ಟಾಕ್ಸಿಕ್' ಹಾಗೂ 'ದೃಶ್ಯಂ'-3 ಚಿತ್ರಗಳ ವಿಚಾರದಲ್ಲಿ ಲೆಕ್ಕಾಚಾರವೇ ಬೇರೆಯಾಗಿದೆ.

More from Filmibeat

Read more about: ott mohanlal mollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X