For Quick Alerts
  ALLOW NOTIFICATIONS  
  For Daily Alerts

  ಮತ್ತೊಂದು ಹೊಸ ಚಿತ್ರಕ್ಕೆ ಮೋಹನ್ ಲಾಲ್ ಚಾಲನೆ, ಟೈಟಲ್ ಬಹಿರಂಗ

  |

  ಸುಮಾರು 12 ವರ್ಷದ ನಂತರ ನಿರ್ದೇಶಕ ಶಾಜಿ ಕೈಲಾಸ್ ಜೊತೆ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಸಿನಿಮಾ ಮಾಡ್ತಿದ್ದಾರೆ. ಅಧಿಕೃತವಾಗಿ ಈ ಪ್ರಾಜೆಕ್ಟ್ ಆರಂಭವಾಗಿದ್ದು, ಮೊದಲ ಹಂತವಾಗಿ ಚಿತ್ರದ ಹೆಸರು ಅನಾವರಣಗೊಳಿಸಲಾಗಿದೆ.

  ಮೋಹನ್ ಲಾಲ್ ಮತ್ತು ಶಾಜಿ ಕೈಲಾಸ್ ಕಾಂಬಿನೇಷನ್‌ನಲ್ಲಿ ಮೂಡಿಬರಲಿರುವ ಚಿತ್ರಕ್ಕೆ 'ಅಲೋನ್' ಎಂದು ನಾಮಕರಣ ಮಾಡಿದ್ದಾರೆ. ಮಂಗಳವಾರ (ಅಕ್ಟೋಬರ್ 5) ಮೋಹನ್ ಲಾಲ್-ಶಾಜಿ ಸಿನಿಮಾದ ಟೈಟಲ್ ಲಾಂಚ್ ಕಾರ್ಯಕ್ರಮ ನಡೆದಿದ್ದು, ಅಧಿಕೃತವಾಗಿ ಹೆಸರು ಘೋಷಣೆ ಮಾಡಲಾಗಿದೆ.

  ಪೃಥ್ವಿರಾಜ್‌ಗೆ ದುಬಾರಿ ಉಡುಗೊರೆ ನೀಡಿದ ಮೋಹನ್ ಲಾಲ್ಪೃಥ್ವಿರಾಜ್‌ಗೆ ದುಬಾರಿ ಉಡುಗೊರೆ ನೀಡಿದ ಮೋಹನ್ ಲಾಲ್

  ಸ್ವತಃ ಮೋಹನ್ ಲಾಲ್ ಅವರೇ 'ಅಲೋನ್' ಚಿತ್ರದ ಟೈಟಲ್ ಬಿಡುಗಡೆ ಮಾಡಿದರು. ಆಶೀರ್ವಾದ್ ಸಿನಿಮಾಸ್ ಸಂಸ್ಥೆ ಈ ಚಿತ್ರ ನಿರ್ಮಿಸುತ್ತಿದೆ. ಟೈಟಲ್ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಮೋಹನ್ ಲಾಲ್, "ಇಂದು ಆಶೀರ್ವಾದ್ ಸಿನಿಮಾಸ್‌ನ 30ನೇ ಚಿತ್ರದ ಟೈಟಲ್ ರಿಲೀಸ್ ಮಾಡಿದ್ದೇವೆ. ಆಶೀರ್ವಾದ್ ಸಿನಿಮಾಸ್‌ನ ಮೊದಲ ಚಿತ್ರ ನಿರ್ದೇಶಿಸಿದ್ದ ಶಾಜಿ ಕೈಲಾಸ್ 'ಅಲೋನ್' ಈ ಪ್ರಾಜೆಕ್ಟ್ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ನಾನು ಮತ್ತು ಶಾಜಿ ಹಲವಾರು ಚಿತ್ರಗಳಲ್ಲಿ ಕೆಲಸ ಮಾಡಿದ್ದೇವೆ. ಶಾಜಿ ಚಿತ್ರದಲ್ಲಿ ನಾಯಕರು ಯಾವಾಗಲೂ ಪ್ರಬಲ ಮತ್ತು ಧೈರ್ಯಶಾಲಿ. ನಿಜವಾದ ಹೀರೋ ಯಾವತ್ತಿದ್ದರೂ ಒಬ್ಬಂಟಿಯಾಗಿರುತ್ತಾನೆ. ನೀವು ಈ ಚಿತ್ರವನ್ನು ನೋಡಿದಾಗ ಅದನ್ನು ಅರಿತುಕೊಳ್ಳುವಿರಿ'' ಎಂದರು.

  ಮೋಹನ್ ಲಾಲ್-ಶಾಜಿ ಕೈಲಾಸ್ ಸಿನಿಮಾ ಮಾಡ್ತಾರೆ ಎಂಬ ಸುದ್ದಿ ಹಲವು ದಿನಗಳಿಂದಲೂ ಚಾಲ್ತಿಯಲ್ಲಿತ್ತು. ಇದೀಗ, ಟೈಟಲ್ ಲಾಂಚ್ ಮಾಡುವುದರೊಂದಿಗೆ ಅಭಿಮಾನಿಗಳ ಕುತೂಹಲಕ್ಕೆ ಉತ್ತರ ಕೊಟ್ಟಿದ್ದಾರೆ. ಅಂದ್ಹಾಗೆ, ಅಲೋನ್ ಸಿನಿಮಾ ಆಕ್ಷನ್ ಥ್ರಿಲ್ಲರ್ ಕಥೆ ಹೊಂದಿದ್ದು, ಮೋಹನ್ ಲಾಲ್ ಮಾಸ್ ಹೀರೋ ಇಮೇಜ್‌ನಲ್ಲಿ ನಟಿಸಲಿದ್ದಾರೆ.

  ಮಮ್ಮುಟ್ಟಿ ಜೊತೆ ಸಿನಿಮಾ, ಸುಳಿವು ಕೊಟ್ಟ ಮೋಹನ್ ಲಾಲ್?ಮಮ್ಮುಟ್ಟಿ ಜೊತೆ ಸಿನಿಮಾ, ಸುಳಿವು ಕೊಟ್ಟ ಮೋಹನ್ ಲಾಲ್?

  'ಅಲೋನ್' ಚಿತ್ರದ ಟೈಟಲ್ ಪೋಸ್ಟರ್ ಜೊತೆಗೆ ಸಿನಿಮಾದಲ್ಲಿ ಕೆಲಸ ಮಾಡಲಿರುವ ತಾಂತ್ರಿಕ ಸಿಬ್ಬಂದಿಯ ವಿವರ ಕೂಡ ಬಹಿರಂಗವಾಗಿದೆ. ಚಿತ್ರಕ್ಕೆ ರಾಜೇಶ್ ಜಯರಾಮನ್ ಸ್ಕ್ರಿಪ್ಟ್ ಮಾಡಿದ್ದು, ಅಭಿನಂದನ್ ರಾಮಾನುಜಂ ಛಾಯಾಗ್ರಾಹಕ ಆಗಿದ್ದಾರೆ. ಜೇಕ್ಸ್ ಬಿಜಾಯ್ ಹಾಡುಗಳು ಹಾಗೂ ಹಿನ್ನಲೆ ಸಂಗೀತ ಸಂಯೋಜಿಸುತ್ತಿದ್ದಾರೆ. ಡಾನ್ ಮ್ಯಾಕ್ಸ್ ಸಂಕಲನ ಮತ್ತು ಸಂತೋಷ್ ರಾಮನ್ ಪ್ರೊಡಕ್ಷನ್ ಡಿಸೈನರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.

  Mohanlals next with Shaji Kailas Titled as Alone

  ಆಶೀರ್ವಾದ್ ಸಿನಿಮಾಸ್ ಮಾಡಿರುವ 30 ಚಿತ್ರಗಳ ಪೈಕಿ ಅತಿ ಹೆಚ್ಚು ಸಿನಿಮಾ ಮಾಡಿರುವುದು ಮೋಹನ್ ಲಾಲ್ ಜೊತೆಯಲ್ಲಿ. ದೃಶ್ಯಂ, ದೃಶ್ಯಂ 2, ಲೂಸಿಫರ್, ಒಡಿಯನ್, ಒಪ್ಪಂ, ಲೋಹಂ, ಲೇಡಿಸ್ ಅಂಡ್ ಜಂಟಲ್‌ಮ್ಯಾನ್, ಸ್ಪಿರಿಟ್, ಹೀಗೆ ಹಲವು ಪ್ರಾಜೆಕ್ಟ್‌ ನಿರ್ಮಿಸಿದ್ದಾರೆ.

  ಈಗ ತಯಾರಾಗುತ್ತಿರುವ ಬ್ರೋ ಡ್ಯಾಡಿ, 12ಥ್ ಮ್ಯಾನ್, ಲೂಸಿಫರ್ 2, ಮರಕ್ಕರ್ ಚಿತ್ರಗಳಿಗೂ ಇದೇ ಸಂಸ್ಥೆ ಬಂಡವಾಳ ಹಾಕಿದೆ. ಈ ಚಿತ್ರಗಳನ್ನು ಹೊರತುಪಡಿಸಿ ಮೋಹನ್ ಲಾಲ್ ನಟನೆಯ ಆರಟ್ಟು, ರಾಮ್ ಸಿನಿಮಾಗಳು ಬಿಡುಗಡೆಗೆ ತಯಾರಾಗಿದೆ.

  English summary
  Malayalam Superstar Mohanlal's next with Shaji Kailas Titled as 'Alone'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X