4 ದಿನಕ್ಕೆ ಚಿತ್ರಮಂದಿರಗಳಿಂದ 'ವೃಷಭ' ಚಿತ್ರ ಎತ್ತಂಗಡಿ; ಎಷ್ಟು ಕೋಟಿ ನಷ್ಟ ಗೊತ್ತಾ?

ಸಿನಿಮಾ ಸಕ್ಸಸ್ ಸೂತ್ರ ಎನ್ನುವುದಿಲ್ಲ. ಯಾವಾಗ ಯಾವ ಚಿತ್ರವನ್ನು ಪ್ರೇಕ್ಷಕರು ಗೆಲ್ಲಿಸುತ್ತಾರೆ, ಯಾವ ಸಿನಿಮಾ ಸೋಲಿಸುತ್ತಾರೆ ಎಂದು ಹೇಳುವುದು ಕಷ್ಟ. ಮಾಲಿವುಡ್ ಸೂಪರ್ ಸ್ಟಾರ್ ಮೋಹನ್‌ ಲಾಲ್‌ಗೆ ಈ ವಾರ ದೊಡ್ಡ ಶಾಕ್ ಎದುರಾಗಿದೆ. 'ವೃಷಭ' ಸಿನಿಮಾ ಬಹಳ ಹೀನಾಯವಾಗಿ ಸೋಲುಂಡಿದೆ. 4 ದಿನಕ್ಕೆ ಚಿತ್ರಮಂದಿರಗಳಿಂದ ಸಿನಿಮಾ ಜಾಗ ಕಾಲಿ ಮಾಡುವಂತಾಗಿದೆ.

ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ಕೊಟ್ಟ ಮೋಹನ್ ಲಾಲ್ ಇದೀಗ ಸೋಲಿನ ಸುಳಿಗೆ ಸಿಲುಕುವಂತಾಗಿದೆ. ಕನ್ನಡ ನಿರ್ದೇಶಕ ನಂದಕಿಶೋರ್ 'ವೃಷಭ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಮೊದಲಿನಿಂದಲೂ ಸಿನಿಮಾ ನಿರೀಕ್ಷೆ ಹುಟ್ಟಿಸಿರಲಿಲ್ಲ. ಬಿಡುಗಡೆ ಬಳಿಕ ಕೂಡ ಯಾವುದೇ ಮ್ಯಾಜಿಕ್ ನಡೆಯಲಿಲ್ಲ. ಹಾಗಾಗಿ ಬಹುತೇಕ ಎಲ್ಲಾ ಕಡೆ ಚಿತ್ರಮಂದಿರಗಳಿಂದ ಸಿನಿಮಾ ತೆಗೆಯುವಂತಾಗಿದೆ.

Mohanlal s Vrusshabha Turns Biggest Shock of the Year Pulled from Theatres in 5 Days

ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಸಿನಿಮಾ 2 ಕೋಟಿ ರೂ. ಕಲೆಕ್ಷನ್ ಮಾಡಲು ವಿಫಲವಾಗಿದೆ. ವರ್ಷ ಬಹುದೊಡ್ಡ ಫ್ಲಾಪ್ ಸಿನಿಮಾ ಎನ್ನುವ ಕುಖ್ಯಾತಿಗೆ 'ವೃಷಭ' ಸಿನಿಮಾ ಪಾತ್ರವಾಗುವ ಸುಳಿವು ಸಿಗುತ್ತಿದೆ. 'ಮಗಧೀರ' ರೀತಿ ಐತಿಹಾಸಿಕ ಕಥಾಹಂದರವನ್ನು ಸೇರಿಸಿ ನಂದಕಿಶೋರ್ ಸಿನಿಮಾ ಕಟ್ಟಿಕೊಟ್ಟಿದ್ದರು. ಮೋಹನ್ ಲಾಲ್ ಮಗನ ಪಾತ್ರದಲ್ಲಿ ಸಮರ್ಜಿತ್ ಲಂಕೇಶ್ ನಟಿಸಿದ್ದರು.

ಅಂದಾಜು 70 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ ನಯಾಪೈಸೆ ಹಣವನ್ನು ನಿರ್ಮಾಪಕರಿಗೆ ವಾಪಸ್ ತಂದುಕೊಟ್ಟಿಲ್ಲ ಎನ್ನುವ ಚರ್ಚೆ ಶುರುವಾಗಿದೆ. ರಾಗಿಣಿ, ಗರುಡ ರಾಮ್, ಕಿಶೋರ್ ಸೇರಿ ಕೆಲ ಕನ್ನಡ ಕಲಾವಿದರು ಚಿತ್ರದಲ್ಲಿ ನಟಿಸಿದ್ದರು. ದೊಡ್ಡ ತಂತ್ರಜ್ಞರ ತಂಡ ಕಟ್ಟಿಕೊಂಡು ಸಿನಿಮಾ ನಿರ್ದೇಶನ ಮಾಡಿದ್ದರು ನಂದಕಿಶೋರ್.

Mohanlal s Vrusshabha Turns Biggest Shock of the Year Pulled from Theatres in 5 Days

ದಿನದಿಂದ ದಿನಕ್ಕೆ ಸಿನಿಮಾ ಕಲೆಕ್ಷನ್ ಕಡಿಮೆ ಆಗುತ್ತಲೇ ಇದೆ. ಬರೀ ಲಕ್ಷಗಳಲ್ಲೇ ಸಿನಿಮಾ ಗಳಿಕೆ ಕಾಣುತ್ತಿದೆ. ಬುಕ್‌ಮೈ ಶೋನಲ್ಲಿ ಗಮನಿಸಿದರೆ ನಾಳೆ(ಡಿಸೆಂಬರ್ 31)ಯಿಂದ ಬಹುತೇಕ ಎಲ್ಲಾ ಕಡೆ ಸಿನಿಮಾ ತೆಗೆದು ಹಾಕಲಾಗಿದೆ. ಬಹಳ ನೀರಸ ಪ್ರತಿಕ್ರಿಯೆ ಸಿಗುತ್ತಿರುವುದರಿಂದ ಶೋಗಳನ್ನು ಕ್ಯಾನ್ಸಲ್ ಮಾಡಲಾಗ್ತಿದೆ. 5 ದಿನಕ್ಕೆ ಸಿನಿಮಾ 1.94 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ಹೇಳಲಾಗ್ತಿದೆ.

ಕಮ್ಮಿ ಕಲೆಕ್ಷನ್

ಮೊದಲ 5 ದಿನಗಳಲ್ಲಿ 'ವೃಷಭ' ಸಿನಿಮಾ ನಿರಾಸೆ ಮೂಡಿಸಿದೆ. ಮಲಯಾಳಂ ವರ್ಷ್ 1.01 ಕೋಟಿ ರೂ. ಕಲೆಕ್ಷನ್ ಮಾಡಿದೆ. ಹಿಂದಿ 8 ಲಕ್ಷ, ತೆಲುಗು 32 ಲಕ್ಷ ರೂ. ಕನ್ನಡ 4 ಲಕ್ಷ ಹಾಗೂ ಓವರ್‌ಸೀಸ್‌ನಲ್ಲಿ 25 ಲಕ್ಷ ರೂ. ಕಲೆಕ್ಷನ್ ಮಾಡಿರುವುದಾಗಿ ವರದಿಯಾಗಿದೆ. 70 ಕೋಟಿ ರೂ. ಬಜೆಟ್ ಸಿನಿಮಾ ಹೆಚ್ಚು ಕಮ್ಮಿ 65 ಕೋಟಿ ರೂ. ನಷ್ಟ ಅನುಭವಿಸಿದೆ ಎಂದು ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ.

ಓಟಿಟಿ ರೈಟ್ಸ್ ಕೇಳೋರಿಲ್ಲ

ಮೊದಲಿನಿಂದ 'ವೃಷಭ' ಸಿನಿಮಾ ಹೈಪ್ ಕ್ರಿಯೇಟ್ ಮಾಡಿರಲಿಲ್ಲ. ಹಾಗಾಗಿ ಓಟಿಟಿ ರೈಟ್ಸ್ ಸೇಲ್ ಆಗಿರಲಿಲ್ಲ. ಇನ್ನೂ ಸಿನಿಮಾ ಬಿಡುಗಡೆ ಬಳಿಕ ನೆಗೆಟಿವ್ ಟಾಕ್ ಬಂದಿತ್ತು. ಸಾಕಷ್ಟು ಜನ ಸಿನಿಮಾ ನೋಡಲು ಉತ್ಸುಕತೆ ತೋರಲಿಲ್ಲ. ಪರಿಣಾಮ ಓಟಿಟಿ ಈಗ ಓಟಿಟಿ ರೈಟ್ಸ್ ಕೇಳುವವರು ಇಲ್ಲದಂತಾಗಿದೆ. ಪೇ ಫಾರ್ ವೀವ್ ಲೆಕ್ಕದಲ್ಲಿ ಯಾವುದಾದರೂ ಓಟಿಟಿ ಸಂಸ್ಥೆಗೆ ಸಿನಿಮಾ ಮಾರಾಟವಾಗುವ ಸಾಧ್ಯತೆಯಿದೆ.

ಮೋಹನ್ ಲಾಲ್‌ಗೆ ಮುಖಭಂಗ

ಸ್ಟಾರ್ ನಟರ ಸಿನಿಮಾಗಳು ಸಾಮಾನ್ಯವಾಗಿ ಹೀನಾಯವಾಗಿ ಸೋಲುವುದಿಲ್ಲ. ಕೊನೆ ಪಕ್ಷ ಒಂದು ವಾರ ಆದರೂ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತದೆ. ಆದರೆ 'ವೃಷಭ' ಎಲ್ಲರ ಲೆಕ್ಕ ತಲೆಕೆಳಗಾಗಿಸಿದೆ. ಇದೇ ವರ್ಷ ಬಂದಿದ್ದ ಮೋಹನ್ ಲಾಲ್ ನಟನೆಯ 'ಎಂಪುರಾನ್', 'ಥುಡರುಂ' ಹಾಗೂ 'ಹೃದಯಪೂರ್ವಂ' ಸಿನಿಮಾ ಹಿಟ್ ಲಿಸ್ಟ್ ಸೇರಿದ್ದವು. ವರ್ಷದ ಕೊನೆ ಸಿನಿಮಾ ಕೈಕೊಟ್ಟಿದೆ.

More from Filmibeat

Read more about: mohanlal nanda kishore
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X