ನೂರು ಕೋಟಿ ಕ್ಲಬ್ ಸ್ಟಾರ್‌ನ ಈ ಚಿತ್ರ ಗಳಿಸಿದ್ದು ಕೇವಲ 1 ಕೋಟಿ; ಹಾಕಿದ್ದ ಬಜೆಟ್ ಕೂಡ ಬರಲಿಲ್ಲ!

ಚಿತ್ರರಂಗ ಪ್ರವೇಶಿಸುವ ನಟರನ್ನೆಲ್ಲಾ ಸ್ಟಾರ್ ನಟರೆಂದು ಪರಿಗಣಿಸಲಾಗುವುದಿಲ್ಲ. ಒಂದಷ್ಟು ಹಿಟ್ ಚಿತ್ರಗಳನ್ನು ನೀಡಿದ ಮಾತ್ರಕ್ಕೆ ಅವರಿಗೆ ಸ್ಟಾರ್ ನಟ ಎಂಬ ಪಟ್ಟ ಸಿಕ್ಕಿಬಿಡುವುದಿಲ್ಲ. ಸ್ಟಾರ್ ನಟ ಎಂಬ ಪಟ್ಟ ಪಡೆಯಬೇಕೆಂದರೆ ಅದಕ್ಕೆಂದೇ ಇರುವ ಕೆಲ ಸಾಮರ್ಥ್ಯಗಳು ನಟರಲ್ಲಿ ಇರಬೇಕು. ಎಂತಹ ಚಿತ್ರವನ್ನು ಆರಿಸಿಕೊಂಡರೂ ಸಹ ಚಿತ್ರಕ್ಕೆ ಬಂಡವಾಳ ಹೂಡುವ ನಿರ್ಮಾಪಕರಿಗೆ ನಷ್ಟ ಉಂಟಾಗಬಾರದು. ತನ್ನನ್ನು ನಂಬಿ ಬಂಡವಾಳ ಹೂಡುವ ನಿರ್ಮಾಪಕರ ಜೇಬು ತುಂಬಿಸುವ, ಚಿತ್ರಮಂದಿರಗಳನ್ನು ತುಂಬಿಸುವವನೇ ನಿಜವಾದ ಸ್ಟಾರ್ ನಟ.

ಹಾಗೆಂದ ಮಾತ್ರಕ್ಕೆ ಸ್ಟಾರ್ ನಟರ ಚಿತ್ರಗಳು ಸೋಲೇ ಕಾಣುವುದಿಲ್ಲ ಎಂದು ಹೇಳಲಾಗುವುದಿಲ್ಲ. ಸ್ಟಾರ್‌ಗಳ ಚಿತ್ರಗಳು ಹೀನಾಯವಾಗಿ ಸೋತ ಹಲವಾರು ಉದಾಹರಣೆಗಳಿವೆ. ಆದರೆ ಸ್ಟಾರ್ ನಟರ ಚಿತ್ರಗಳು ಸೋತಾಗ ಹಣದ ವಿಚಾರದಲ್ಲಿ ನಷ್ಟ ಉಂಟಾಗಿರುವುದಿಲ್ಲ. ಸ್ಟಾರ್ ನಟನಿಗಿರುವ ಅಪಾರ ಅಭಿಮಾನಿಗಳು ಚಿತ್ರವನ್ನು ವೀಕ್ಷಿಸಿದರೆ ಸಾಕು, ಆ ಚಿತ್ರ ಓಕೆ ಓಕೆ ಎಂಬ ಕಲೆಕ್ಷನ್ ಮಾಡಿಬಿಡುತ್ತದೆ. ಇನ್ನು ಈಗಿರುವ ಪೈಪೋಟಿಯುತ ವಾತಾವರಣದಲ್ಲಿ ಸ್ಟಾರ್ ನಟರ ಚಿತ್ರಗಳು ಕಲೆಕ್ಷನ್ ವಿಚಾರದಲ್ಲಿ ಸೋಲುವುದು ತೀರಾ ಕಡಿಮೆ.

ಸಾಧಾರಣ ಎನಿಸಿಕೊಳ್ಳುವ ಸ್ಟಾರ್ ಸಿನಿಮಾಗಳೇ ನಿರಾಯಾಸವಾಗಿ ನೂರು ಕೋಟಿ ಗಳಿಸುತ್ತಿರುವ ಈಗಿನ ಕಾಲಮಾನದಲ್ಲಿ ಚಿತ್ರರಂಗವೊಂದರ ಸ್ಟಾರ್ ನಟನ ಚಿತ್ರವೊಂದು ಕೇವಲ ಒಂದೇ ಒಂದು ಕೋಟಿ ಗಳಿಸಿ ತನ್ನ ಓಟವನ್ನು ಮುಗಿಸಿ ಮಕಾಡೆ ಮಲಗಿಬಿಡುತ್ತೆ ಎಂದರೆ ನೀವು ಅದನ್ನು ನಂಬಲೇಬೇಕು. ಹೌದು, ಕಳೆದ ವಾರವಷ್ಟೇ ಬಿಡುಗಡೆಗೊಂಡ ಸ್ಟಾರ್ ನಟನ ಚಿತ್ರ ಈ ರೀತಿ ಕೆಟ್ಟದಾಗಿ ಸೋಲನ್ನುಂಡಿದ್ದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ಗೆ ಒಳಗಾಗಿದೆ.

ಮುಗ್ಗರಿಸಿದ ಅಲೋನ್ ಗಳಿಸಿದ್ದು 1 ಕೋಟಿ

ಮುಗ್ಗರಿಸಿದ ಅಲೋನ್ ಗಳಿಸಿದ್ದು 1 ಕೋಟಿ

ಮಲಯಾಳಂ ಚಿತ್ರರಂಗದ ದೊಡ್ಡ ಸ್ಟಾರ್ ಎಂದೇ ಖ್ಯಾತಿಯನ್ನು ಗಳಿಸಿರುವ ನಟ ಮೋಹನ್ ಲಾನ್ ನಟನೆಯ ಅಲೋನ್ ಎಂಬ ಚಿತ್ರ ಕಳೆದ ವಾರ ಗಣರಾಜ್ಯೋತ್ಸವದ ಪ್ರಯುಕ್ತ ಚಿತ್ರಮಂದಿರಗಳ ಅಂಗಳಕ್ಕೆ ಬಂದಿತ್ತು. ಇನ್ನು ವಾರ ಮುಗಿಯುವುದರೊಳಗೆ ತನ್ನ ಓಟವನ್ನು ಮುಗಿಸಿರುವ ಅಲೋನ್ ಚಿತ್ರ ಕೇರಳದಲ್ಲಿ 75 ಲಕ್ಷ ಕಲೆಕ್ಷನ್ ಮಾಡಿದೆ ಹಾಗೂ ಕೇರಳ ಹೊರತುಪಡಿಸಿ ಉಳಿದೆಡೆ 25 ಲಕ್ಷ ಗಳಿಸಿದೆ. ಈ ಮೂಲಕ ಒಟ್ಟು 1 ಕೋಟಿ ರೂಪಾಯಿ ಕಲೆಕ್ಷನ್ ಅನ್ನು ಚಿತ್ರ ಮಾಡಿದೆ. ಚಿತ್ರಕ್ಕೆ 2.5 ಕೋಟಿ ರೂಪಾಯಿ ಖರ್ಚಾಗಿದ್ದು, ಬಜೆಟ್‌ನಷ್ಟನ್ನೂ ಸಹ ಮಾಡಲಾಗದೇ ಈ ಚಿತ್ರ ಮಕಾಡೆ ಮಲಗಿದೆ. ವಿವಿಧ ಹಕ್ಕುಗಳಿಂದ ಹಾಕಿದ್ದ ಬಂಡವಾಳಕ್ಕಿಂತ ಹೆಚ್ಚು ಹಣ ನಿರ್ಮಾಪಕರ ಕೈಸೇರಿದೆ. ಆದರೆ ಮೋಹನ್ ಲಾನ್ ಸಿನಿ ಕೆರಿಯರ್‌ನ ಕೆಟ್ಟ ಚಿತ್ರ ಎಂಬ ಹಣೆಪಟ್ಟಿ ಮಾತ್ರ ಅಂಟಿಕೊಂಡಿದೆ, ವಿತರಕರು ಕೈಸುಟ್ಟುಕೊಂಡಿದ್ದಾರೆ.

ಕೆಟ್ಟದಾಗಿ ಟ್ರೋಲ್ ಆದ ಲಾಲೆಟ್ಟನ್

ಕೆಟ್ಟದಾಗಿ ಟ್ರೋಲ್ ಆದ ಲಾಲೆಟ್ಟನ್

ಇನ್ನು ತಮ್ಮ ಅಲೋನ್ ಚಿತ್ರ ಇಷ್ಟು ಕೆಟ್ಟ ಮಟ್ಟದಲ್ಲಿ ಸೋತ ಕಾರಣ ಮೋಹನ್ ಲಾಲ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ಗೆ ಒಳಗಾಗಿದ್ದಾರೆ. ಇಂತಹ ಕಳಪೆ ಬಾಕ್ಸ್ ಆಫೀಸ್ ಸಾಮರ್ಥ್ಯ ಇರುವ ಇವರನ್ನು ಸ್ಟಾರ್ ನಟ ಎಂದು ಹೇಗೆ ಪರಿಗಣಿಸುತ್ತೀರ ಎಂದು ತೆಲುಗು ಹಾಗೂ ತಮಿಳು ಚಿತ್ರರಂಗಗಳ ಸಿನಿ ರಸಿಕರು ಗೇಲಿ ಮಾಡಿದ್ದಾರೆ. ಅದರಲ್ಲಿಯೂ ತೆಲುಗಿನ ಚಿರಂಜೀವಿ ಜತೆ ಮೋಹನ್ ಲಾಲ್ ಅವರನ್ನು ಹೋಲಿಕೆ ಮಾಡುತ್ತಿದ್ದನ್ನು ಕೆದಕಿದ ತೆಲುಗು ಸಿನಿ ರಸಿಕರು ಇಂತಹ ನಟನನ್ನು ಚಿರಂಜೀವಿ ಜರೆ ಹೋಲಿಸುತ್ತಿದ್ರಲ್ಲ ಎಂದು ಟ್ರೋಲ್ ಮಾಡಿ ನಗತೊಡಗಿದ್ದಾರೆ.

ಇಂಡಸ್ಟ್ರಿ ಹಿಟ್ ಇರುವುದು ಈ ನಟನ ಹೆಸರಿನಲ್ಲಿಯೇ

ಇಂಡಸ್ಟ್ರಿ ಹಿಟ್ ಇರುವುದು ಈ ನಟನ ಹೆಸರಿನಲ್ಲಿಯೇ

ಸದ್ಯ ಅಲೋನ್ ಚಿತ್ರದಿಂದ ಕೆಟ್ಟದಾಗಿ ಟ್ರೋಲ್ ಆಗುತ್ತಿರುವ ನಟ ಮೋಹನ್‌ ಲಾನ್ ಹೆಸರಿನಲ್ಲಿ ಇಂಡಸ್ಟ್ರಿ ಹಿಟ್ ಇದೆ. ಹೌದು, 2016ರಲ್ಲಿ ಬಿಡುಗಡೆಗೊಂಡಿದ್ದ ಪುಲಿ ಮುರುಗನ್ ಎಂಬ ಚಿತ್ರ 152 ಕೋಟಿ ಕಲೆಕ್ಷನ್ ಮಾಡಿ ಇಂಡಸ್ಟ್ರಿ ಹಿಟ್ ಎನಿಸಿಕೊಂಡಿತ್ತು. ಈ ಚಿತ್ರ ಅಂದು ಮಾಡಿದ ದಾಖಲೆಯನ್ನು ಯಾರೂ ಸಹ ಮಾಡಿಲ್ಲ. ಇನ್ನು ಮಲಯಾಳಂ ಸಿನಿಮಾ ಇತಿಹಾಸದಲ್ಲಿ ಅತಿಹೆಚ್ಚು ಗಳಿಸಿದ ಚಿತ್ರಗಳ ಪಟ್ಟಿಯಲ್ಲಿ ಪುಲಿ ಮುರುಗನ್ ಅಗ್ರಸ್ಥಾನದಲ್ಲಿದ್ದರೆ, ಮೋಹನ್ ಲಾನ್ ನಟನೆಯ ಮತ್ತೊಂದು ಚಿತ್ರ ಲೂಸಿಫರ್ ಎರಡನೇ ಸ್ಥಾನದಲ್ಲಿದೆ. ಈ ಚಿತ್ರ 127 ಕೋಟಿ ಗಳಿಕೆ ಮಾಡಿದ್ದು, ಮಲಯಾಳಂನಲ್ಲಿ ನೂರು ಕೋಟಿ ಕ್ಲಬ್ ಚಿತ್ರಗಳನ್ನು ಹೊಂದಿರುವ ಏಕೈಕ ನಟ ಎನಿಸಿಕೊಂಡಿದ್ದಾರೆ. ಇಷ್ಟೆಲ್ಲಾ ದಾಖಲೆ ಮಾಡಿರುವ ಮೋಹನ್ ಲಾಲ್ ನಟನೆಯ ಅಲೋನ್ ಚಿತ್ರ ಕೆಟ್ಟ ಕಥೆ ಹಾಗೂ ನಟನ ಹಿಂದಿನ ಚಿತ್ರಗಳ ಫ್ಲಾಪ್ ರಿಸಲ್ಟ್‌ನಿಂದ ಹೀನಾಯವಾಗಿ ಸೋತಿದೆ.

More from Filmibeat

English summary
Mohanlal starrer Alone becomes disaster with just 1 crore box office collection. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X