ಮೋಹನ್‌ಲಾಲ್ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲಾದ ಮಲಯಾಳಂ ಸೂಪರ್ ಸ್ಟಾರ್..!

ಮೋಹನ್ ಲಾಲ್ ಯಾರಿಗೆ ತಾನೇ ಗೊತ್ತಿಲ್ಲ..! ದೇವರು ನಾಡು ಎಂದೆ ಕರೆಯಲ್ಪಡುವ ಕೇರಳದ ಸೂಪರ್ ಸ್ಟಾರ್. ನಾಲ್ಕು ದಶಕಗಳ ವೃತ್ತಿ ಬದುಕಿನಲ್ಲಿ ಇಲ್ಲಿಯವರೆಗೆ ಮುನ್ನೂರಕ್ಕೂ ಅಧಿಕ ಸಿನಿಮಾ ಮಾಡಿರುವ ಮೋಹನ್ ಲಾಲ್ ಅವರನ್ನು ಅವರ ಅಭಿಮಾನಿಗಳು ಸೇರಿದಂತೆ ಭಾರತೀಯ ಚಿತ್ರರಂಗ ಲಾಲೆಟ್ಟನ್ ಎಂಬ ಹೆಸರಿಂದನೇ ಕರೆಯುತ್ತೆ. ಜಯಘೋಷ ಮೊಳಗಿಸುತ್ತೆ.

ಇಂಥಾ ಮೋಹನ್ ಲಾಲ್ ಅವರ ಆರೋಗ್ಯದಲ್ಲಿ ಇಂದು ಏರುಪೇರಾಗಿದೆ. ಅವರನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಕೊಚ್ಚಿನ ಖಾಸಗಿ ಆಸ್ಪತ್ರೆಗೆ ಮೋಹನ್ ಲಾಲ್ ಅವರನ್ನು ದಾಖಲಿಸಲಾಗಿದ್ದು ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್‌ಗೆ ವಿಪರೀತ ಜ್ವರ ಇದ್ದು ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ ಎಂದು ವೈದ್ಯರು ಹೇಳಿದ್ದಾರೆ. ಮೋಹನ್ ಲಾಲ್ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದಾರೆ.

Mohanlal the renowned Malayalam actor has been hospitalized due to breathing difficulties

ಮೋಹನ್ ಲಾಲ್ ಅವರಿಗೆ ಉಸಿರಾಟದ ಸಮಸ್ಯೆ ಎದುರಾಗಿತ್ತು, ಅವರ ಆರೋಗ್ಯವನ್ನು ನಾನು ಪರೀಕ್ಷೆ ಮಾಡಿದ್ದೇನೆ ಎಂದಿರುವ ಡಾಕ್ಟರ್ ಗಿರೀಶ್ ಕುಮಾರ್, ಉಸಿರಾಟದ ತೊಂದರೆ ಜೊತೆ ಸ್ನಾಯು ನೋವು ಮತ್ತು ಜ್ವರದಿಂದ ಕೂಡ ಮೋಹನ್ ಲಾಲ್ ಬಳಲುತ್ತಿದ್ದಾರೆ ಎಂದು ಹೇಳಿದ್ದಾರೆ.

ಇನ್ನೂ ಅವರಿಗೆ ವೈರಲ್ ಇನ್‌ಫೆಕ್ಟನ್ ಆದಂತೆ ಮೇಲ್ನೋಟಕ್ಕೆ ಕಾಣುತ್ತಿದೆ ಎಂದಿರುವ ವೈದ್ಯರಾದ ಡಾ.ಗಿರೀಶ್ ಕುಮಾರ್ ಐದು ದಿನಗಳ ಕಾಲ ಮೋಹನ್ ಲಾಲ್ ಸಂಪೂರ್ಣ ವಿಶ್ರಾಂತಿ ಪಡೆಯಬೇಕಿದೆ ಎಂದಿದ್ದಾರೆ. ಸಮಯಕ್ಕೆ ಸರಿಯಾಗಿ ಔಷಧಿಗಳನ್ನು ತೆಗೆದುಕೊಳ್ಳುವುದು ಅಲ್ಲದೇ, ಜನನಿಬಿಡ ಪ್ರದೇಶಗಳಲ್ಲಿ ಮೋಹನ್ ಲಾಲ್ ಓಡಾಡಬಾರದು ಎಂದು ಹೇಳಿದ್ದಾರೆ. ಅಭಿಮಾನಿಗಳು ಆತಂಕ ಪಡಬೇಡಿ ಎಂಬ ಮನವಿಯನ್ನೂ ಮಾಡಿಕೊಂಡಿದ್ದಾರೆ.

mohanlal-the-renowned-malayalam-actor-has-been-hospitalized-due-to-breathing-difficulties

ಅಂದ್ಹಾಗೇ ಮೋಹನ್ ಲಾಲ್ ಅವರಿಗೆ ವಯಸ್ಸು 64 ಆದರೂ ಕೂಡ ಉತ್ಸಾಹ ಮಾತ್ರ 24ರ ವಯಸ್ಸಿನ ಯುವಕರದ್ದು. ಇವತ್ತು ಕೂಡ ಮೋಹನ್ ಲಾಲ್ ಒಂದಾದ ಮೇಲೊಂದು ಸಿನಿಮಾ ಮಾಡುತ್ತಲೇ ಇದ್ದಾರೆ. ಹೊಸ ನಾಯಕರನ್ನು ಹಿಂದಿಕ್ಕಿ ಮುನ್ನಡೆಯುತ್ತಿದ್ದಾರೆ. ಇವರ ಶ್ರಮಕ್ಕೆ ಉದಾಹರಣೆ ಎಂಬಂತೆ ಕಳೆದ ನಾಲ್ಕು ವರ್ಷದಲ್ಲಿ ಇವರ ಎಂಟು ಸಿನಿಮಾ ತೆರೆಗೆ ಬಂದಿವೆ.

ಇನ್ನೂ ಮೋಹನ್ ಲಾಲ್ ಈಗ ನಾಯಕ ಮಾತ್ರ ಅಲ್ಲ, ನಿರ್ದೇಶಕರು ಹೌದು. ''ಬಾರೋಜ್‌'' ಎಂಬ ಚಿತ್ರವನ್ನು ಕೂಡ ಮೋಹನ್ ಲಾಲ್ ನಿರ್ದೇಶಿಸಿದ್ಧಾರೆ. ಈ ಅಕ್ಟೋಬರ್‌ನಲ್ಲಿ ತಮ್ಮ ಕನಸಿನ ಚಿತ್ರವನ್ನು ತೆರೆಗೆ ತರಲು ಬೇಕಾದ ತಯಾರಿಗಳನ್ನೂ ಮಾಡಿಕೊಳ್ಳುತ್ತಿದ್ಧಾರೆ. ಈ ಚಿತ್ರದ ಓಡಾಟದಿಂದ ಮೋಹನ್ ಲಾಲ್ ದಣಿದಿದ್ದಾರಾ ಗೊತ್ತಿಲ್ಲ. ಆದರೆ ಮೋಹನ್ ಲಾಲ್ ಅನಾರೋಗ್ಯಕ್ಕೆ ಕೆಲಸದ ಒತ್ತಡ ಕಾರಣ ಎನ್ನುವ ಮಾತು ಕೇರಳದಲ್ಲಿ ಸದ್ಯಕ್ಕೆ ಕೇಳಿ ಬರುತ್ತಿದೆ.

ಈ ಚಿತ್ರಗಳನ್ನು ಹೊರತು ಪಡಿಸಿದರೆ, ಮೋಹನ್ ಲಾಲ್ 'ಲೂಸಿಫರ್' ಭಾಗ 2 ಕೆಲಸಗಳನ್ನು ಮಾಡುತ್ತಿದ್ದಾರೆ. ಮತ್ತೊಂದು ಕಡೆ 'ದೃಶ್ಯಂ' ಚಿತ್ರದ ನಿರ್ದೇಶಕ ಜೀತು ಜೋಸೆಫ್ ಜೊತೆ ಮತ್ತೊಮ್ಮೆ ಕೈ ಜೋಡಿಸಿ 'ರಾಮ್‌' ಎಂಬ ಸಿನಿಮಾ ಕೂಡ ಮಾಡುತ್ತಿದ್ಧಾರೆ. ಇವೆರಡು ಸಿನಿಮಾ ಹೊರತು ಪಡಿಸಿದರೆ ಕನ್ನಡದ ನಿರ್ದೇಶಕ ನಂದಕಿಶೋರ್ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ಪ್ಯಾನ್ ಇಂಡಿಯಾ ಚಿತ್ರ 'ವೃ‍ಷಭ' ಚಿತ್ರಕ್ಕೆ ಕೂಡ ಮೋಹನ್ ಲಾಲ್ ಬಣ್ಣ ಹಚ್ಚಿದ್ಧಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X