ವಂಚಕನೊಂದಿಗೆ ವ್ಯವಹಾರ ಸ್ಟಾರ್ ನಟ ಮೋಹನ್‌ಲಾಲ್‌ಗೆ ಇಡಿ ನೋಟಿಸ್

ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ನಟ ಮೋಹನ್‌ಲಾಲ್ ಅತ್ಯುತ್ತಮ ನಟ ಮಾತ್ರ ಅಲ್ಲ ಕೇರಳದ ಟಾಪ್ ಉದ್ಯಮಿಗಳಲ್ಲಿ ಒಬ್ಬರು. ಹಲವು ಭಿನ್ನ-ಭಿನ್ನ ಉದ್ಯಮಗಳ ಒಡೆತನವನ್ನು ಮೋಹನ್‌ಲಾಲ್ ಹೊಂದಿದ್ದಾರೆ. ಕೇರಳದಲ್ಲಿ ಮಾತ್ರವಲ್ಲ ದುಬೈನಲ್ಲಿಯೂ ಕೆಲವು ಉದ್ಯಮಗಳನ್ನು ಮೋಹನ್‌ಲಾಲ್ ಹೊಂದಿದ್ದಾರೆ.

ಈ ಹಿಂದೆ ಕೆಲ ಬಾರಿ ಮೋಹನ್‌ಲಾಲ್ ಐಟಿ ದಾಳಿಗಳು ನಡೆದಿದ್ದವು. ಇದೀಗ ಮೋಹನ್‌ಲಾಲ್‌ಗೆ ಇಡಿ (ಜಾರಿ ನಿರ್ದೇಶನಾಲಯ) ನೊಟೀಸ್ ಜಾರಿ ಮಾಡಿದೆ.

ಕೇರಳದ ವಂಚಕನೊಬ್ಬನೊಟ್ಟಿಗೆ ಮೋಹನ್‌ಲಾಲ್ ವ್ಯವಹಾರ ಹೊಂದಿರುವ ಕಾರಣದಿಂದ ಜಾರಿ ನಿರ್ದೇಶನಾಲಯವು ಮೋಹನ್‌ಲಾಲ್‌ಗೆ ನೊಟೀಸ್ ಜಾರಿ ಮಾಡಿದ್ದು ಕೆಲವೇ ದಿನಗಳಲ್ಲಿ ಮೋಹನ್‌ಲಾಲ್ ವಿಚಾರಣೆಗೆ ಹಾಜರಾಗಬೇಕಿದೆ.

Mohanlal was sent Notice By ED For Having Connection With Conman Monson Mavunkal

ಮಹಾನ್ ವಂಚಕ ಮುನ್ಸುನ್ ಮವುಂಕಲ್ ಎಂಬಾತನೊಂದಿಗೆ ಮೋಹನ್‌ಲಾಲ್‌ಗೆ ಸಂಬಂಧವಿದ್ದು, ಆತನೊಟ್ಟಿಗೆ ವ್ಯವಹಾರವನ್ನು ಹೊಂದಿದ್ದಾರೆ ಎಂಬ ಕಾರಣಕ್ಕೆ ಮೋಹನ್‌ಲಾಲ್‌ಗೆ ನೊಟೀಸ್ ನೀಡಲಾಗಿದ್ದು, ಕೊಚ್ಚಿಯ ಇಡಿ ಕಚೇರಿಗೆ ಬಂದು ವಿಚಾರಣೆ ಎದುರಿಸುವಂತೆ ಸೂಚಿಸಲಾಗಿದೆ.

ಮುನ್ಸುನ್ ಮವುಂಕಲ್ ಕೇರಳದ ಮಹಾನ್ ವಂಚಕರಲ್ಲಿ ಒಬ್ಬ ಎನ್ನಲಾಗುತ್ತದೆ. ಬೈಬಲ್‌ನ ಮೊಟ್ಟ ಮೊದಲ ಪ್ರತಿ, ಟಿಪ್ಪು ಸುಲ್ತಾನನ ಖಡ್ಗ ಇನ್ನಿತರೆ ಪುರಾತನ ಐತಿಹಾಸಿಕ ವಸ್ತುಗಳು ತನ್ನ ಬಳಿ ಇವೆ ಎಂದು ಹೇಳಿ ಅದನ್ನು ಮಾರಾಟ ಮಾಡುವುದಾಗಿ ಹೇಳಿ ಹಲವರಿಗೆ ಈತ ಮೋಸ ಮಾಡಿದ್ದಾನೆ.

ಕಳೆದ ಸೆಪ್ಟೆಂಬರ್‌ ತಿಂಗಳಲ್ಲಿ ಕೇರಳ ಸಿಐಡಿ ಈತನನ್ನು ಬಂಧಿಸಿತ್ತು. ಈತನ ಮೇಲೆ ಹಲವರಿಗೆ ಮೋಸ ಮಾಡಿರುವ ಆರೋಪಗಳಿದ್ದವು. ಸುಮಾರು 30 ಕೋಟಿ ಹಣವನ್ನು ಈತ ವಿವಿಧ ಜನರಿಗೆ ಮೋಸ ಮಾಡಿದ್ದ. ಈತನ ಪ್ರಕರಣವನ್ನು ಇಡಿ ಸಹ ತನಿಖೆ ನಡೆಸುತ್ತಿತ್ತು. ಈ ಸಮಯ ಈತನಿಗೂ ನಟ ಮೋಹನ್‌ಲಾಲ್‌ಗೂ ನಂಟು ಇರುವ ಅಂಶ ಬೆಳಕಿಗೆ ಬಂದು ಅದರ ವಿಚಾರಣೆಗೆಂದು ಮೋಹನ್‌ಲಾಲ್‌ಗೆ ನೊಟೀಸ್ ನೀಡಲಾಗಿದೆ.

ಮುನ್ಸುನ್ ಮವುಂಕಲ್ ಜೊತೆ ವ್ಯವಹಾರ ಮಾತ್ರವೇ ಅಲ್ಲದೆ ಮೋಹನ್‌ ಲಾಲ್ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವ ಅನುಮಾನವನ್ನೂ ಇಡಿ ವ್ಯಕ್ತಪಡಿಸಿದೆ.

ಮುನ್ಸುನ್ ಮವುಂಕಲ್ ಮಹಾ ವಂಚಕನಾಗಿದ್ದು ತನ್ನ ಬಳಿ ಬೈಬಲ್‌ನ ಮೊದಲ ಪ್ರತಿ, ತಾಳೆ ಗರಿಗಳಲ್ಲಿ ಬರೆದ ಮಹಾಭಾರತ, ರಾಜಾ ರವಿವರ್ಮನ ಪೇಂಟಿಂಗ್, ಪಿಕಾಸೊ ಪೇಂಟಿಗ್‌ಗಳು ಇವೆಯೆಂದು ನಂಬಿಸಿ ಜನರಿಂದ ಕೋಟ್ಯಂತರ ಹಣ ವಸೂಲಿ ಮಾಡುತ್ತಿದ್ದ. ಈತನ ಬಳಿ ಕೆಲವು ಚಿತ್ರಗಳು, ತಾಳೆಗರಿ ಶಾಸನಗಳು ಇದ್ದು ಅದನ್ನು ಪೊಲೀಸರು ವಶಪಡಿಸಿಕೊಂಡು ಪರಿಶೀಲಿಸಿದಾಗ ಅವುಗಳೆಲ್ಲವನ್ನೂ ಅಲ್ಲಪ್ಪಿ ಜಿಲ್ಲೆಯ ಚೇರ್ತಲ ಎಂಬಲ್ಲಿನ ಮರಗೆಲಸದವನೊಬ್ಬ ಮಾಡಿಕೊಟ್ಟಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ.

More from Filmibeat

English summary
Super Star Mohanlal was sent notice by Ed for having connections with conman Monsaon Mavukal. He is high profile cheater in Kerala.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X