ಇಂಡೋನೇಷ್ಯಾಗೆ ಹೊರಟ ದೃಶ್ಯಂ: ದಾಖಲೆ ಬರೆದ ಮೋಹನ್ ಲಾಲ್

2013ರಲ್ಲಿ ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾದ ಬ್ಲಾಕ್ ಬಸ್ಟರ್ ಸಿನಿಮಾ ದೃಶ್ಯಂ. ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಮತ್ತು ಮೀನಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಈ ಚಿತ್ರ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿತ್ತು. ಜೀತು ಜೋಸೆಫ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು.

ಪ್ರೇಕ್ಷಕರಿಂದ ಹಾಗೂ ವಿಮರ್ಶಾತ್ಮಕವಾಗಿಯೂ ದೃಶ್ಯಂ ಸಿನಿಮಾ ವರ್ಷದ ಹಿಟ್ ಚಿತ್ರ ಎನಿಸಿಕೊಂಡಿತ್ತು. ತದನಂತರ ದೇಶದ ಪ್ರಮುಖ ಭಾಷೆಗಳಲ್ಲಿ ಈ ಸಿನಿಮಾ ರಿಮೇಕ್ ಆಗಿದೆ. ಈ ಮೂಲಕ ದೃಶ್ಯಂ ಸಿನಿಮಾ ರಿಮೇಕ್‌ನಲ್ಲೂ ದಾಖಲೆ ಬರೆದಿತ್ತು.

ಕುತೂಹಲಕಾರಿ ವಿಷಯ ಏನಪ್ಪಾ ಅಂದ್ರೆ, ದೃಶ್ಯಂ ಸಿನಿಮಾ ಈಗ ಇಂಡೋನೇಷ್ಯಾ ಭಾಷೆಗೆ ರಿಮೇಕ್ ಆಗುತ್ತಿರುವ ವಿಚಾರ ಹೊರಬಿದ್ದಿದೆ. ಈ ಮೂಲಕ ಇಂಡೋನೇಷ್ಯಾ ಭಾಷೆಯಲ್ಲಿ ರಿಮೇಕ್ ಆಗುತ್ತಿರುವ ಮೊದಲ ಮಲಯಾಳಂ ಚಿತ್ರ ದೃಶ್ಯ ಎನಿಸಿಕೊಂಡಿದೆ.

Mohanlals Drishyam to be remade in Indonesian

ಇದೇ ಚಿತ್ರ ಈ ಮೊದಲು ಚೈನಿಸ್ ಭಾಷೆಗೂ ರಿಮೇಕ್ ಆಗಿತ್ತು. ಆಗಲೂ ಮಲಯಾಳಂ ಚಿತ್ರವೊಂದು ಮೊದಲ ಬಾರಿಗೆ ಚೈನೀಸ್‌ನಲ್ಲಿ ರಿಮೇಕ್ ಆದ ಅಪರೂಪದ ದಾಖಲೆ ಬರೆದಿತ್ತು. ಈಗ ಮೊದಲ ಸಲ ಇಂಡೋನೇಷ್ಯಾಗೆ ಮಲಯಾಳಂ ಚಿತ್ರ ಹೋಗುತ್ತಿದೆ. ಈ ಸುದ್ದಿಯನ್ನು ಸ್ವತಃ ದೃಶ್ಯಂ ನಿರ್ಮಾಪಕ ಆಂಟನಿ ಪೆರುಂಬಾವೂರ್ ಹಂಚಿಕೊಂಡಿದ್ದಾರೆ.

''ದೃಶ್ಯಂ, ಇಂಡೋನೇಷಿಯನ್ ಭಾಷೆಗೆ ರೀಮೇಕ್ ಆಗುತ್ತಿರುವ ಮೊದಲ ಮಲಯಾಳಂ ಚಿತ್ರ ಎಂದು ಘೋಷಿಸಲು ನಮಗೆ ಸಂತೋಷವಾಗಿದೆ. ಈ ಚಿತ್ರವನ್ನು ಇಂಡೋನೇಷ್ಯಾದಲ್ಲಿ ಜಕಾರ್ತಾ ಮೂಲದ ಪಿಟಿ ಫಾಲ್ಕನ್ ಸಂಸ್ಥೆ ಪ್ರಸ್ತುತಪಡಿಸುತ್ತಿದೆ. 'ದೃಶ್ಯಂ' ಈಗಾಗಲೇ 4 ಭಾರತೀಯ ಭಾಷೆಗಳಲ್ಲಿ ಮತ್ತು 2 ವಿದೇಶಿ ಭಾಷೆಗಳಲ್ಲಿ ರೀಮೇಕ್ ಮಾಡಲಾಗಿದೆ. ಮೇಲಾಗಿ, 'ದೃಶ್ಯಂ' ಚೈನೀಸ್‌ಗೆ ರೀಮೇಕ್ ಮಾಡಿದ ಮೊದಲ ಮಲಯಾಳಂ ಚಿತ್ರವಾಗಿದೆ. ನನ್ನ ಆತ್ಮೀಯ ಗೆಳೆಯ ಜೀತು ಜೋಸೆಫ್ ನಿರ್ದೇಶಿಸಿದ ಮತ್ತು ಮೋಹನ್ ಲಾಲ್ ಸರ್ ನಟಿಸಿರುವ 'ದೃಶ್ಯಂ' ಭಾಷೆ ಮತ್ತು ದೇಶದ ಗಡಿಗಳನ್ನು ಮೀರಿದೆ. ಈ ಚಿತ್ರವನ್ನು ಮಾಡಿದ್ದು ಹೆಮ್ಮೆ ತಂದಿದೆ ಎಂದು ನಿಮ್ಮೊಂದಿಗೆ ಹಂಚಿಕೊಳ್ಳುವುದು ಸಂತೋಷ ಉಂಟು ಮಾಡಿದೆ"ಎಂದು ಆಂಟನಿ ಪೆರುಂಬಾವೂರ್ ಪೋಸ್ಟ್ ಹಾಕಿದ್ದಾರೆ.

ಅಂದ್ಹಾಗೆ, ದೃಶ್ಯಂ ಚಿತ್ರದ ಸೂಪರ್ ಸಕ್ಸಸ್ ಬಳಿಕ 2021ರಲ್ಲಿ ಸೀಕ್ವೆಲ್ ತಯಾರು ಮಾಡಲಾಯಿತು. ಜಿತು ಜೋಸೆಫ್ ನಿರ್ದೇಶನದಲ್ಲಿ ಬಂದ ಈ ಚಿತ್ರವೂ ಅಷ್ಟೇ ದೊಡ್ಡ ಹಿಟ್ ಆಗಿದೆ. ಮೊದಲ ಚಿತ್ರದಂತೆ ಎರಡನೇ ಚಿತ್ರವೂ ಭಾರತೀಯ ಭಾಷೆಗಳಲ್ಲಿ ರಿಮೇಕ್ ಆಗುತ್ತಿದೆ. ಎರಡು ಭಾಗವೂ ಹಿಟ್ ಆದ್ಮೇಲೆ ಈಗ ಮೂರನೇ ಭಾಗ ಮಾಡುವುದಾಗಿ ಜಿತು ಜೋಸೆಫ್ ಹೇಳಿಕೊಂಡಿದ್ದಾರೆ. ಪ್ರಸ್ತುತ ಜಿತು ಜೋಸೆಫ್ ಜೊತೆ ಮಾಡುತ್ತಿರುವ 12ಥ್ ಮ್ಯಾನ್ ಚಿತ್ರದಲ್ಲಿ ಮೋಹನ್ ಲಾಲ್ ಬ್ಯುಸಿಯಿದ್ದಾರೆ.

Mohanlals Drishyam to be remade in Indonesian

ದೃಶ್ಯಂ ಸಿನಿಮಾವನ್ನು ಕನ್ನಡದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ರಿಮೇಕ್ ಮಾಡಿದರು. ರವಿಚಂದ್ರನ್, ನವ್ಯ ನಾಯರ್, ಅಚ್ಯುತ್ ಕುಮಾರ್ ನಟಿಸಿದ್ದರು. ಪಿ ವಾಸು ನಿರ್ದೇಶಿಸಿದ್ದರು. ತೆಲುಗಿನಲ್ಲಿ ವೆಂಕಟೇಶ್, ಮೀನಾ ನಟಿಸಿದರು. ತಮಿಳಿನಲ್ಲಿ ಕಮಲ್ ಹಾಸನ್ ಮತ್ತು ಗೌತಮಿ ಅಭಿನಯಿಸಿದ್ದರು. ಹಿಂದಿಯಲ್ಲಿ ಅಜಯ್ ದೇವಗನ್ ಮತ್ತು ಶ್ರಿಯಾ ಸರಣ್ ಕಾಣಿಸಿಕೊಂಡಿದ್ದರು.

ಈಗ ದೃಶ್ಯಂ 2 ಚಿತ್ರವನ್ನು ಎಲ್ಲಾ ಭಾಷೆಯಲ್ಲಿ ಅದೇ ಕಲಾವಿದರು ರಿಮೇಕ್ ಮಾಡುತ್ತಿದ್ದಾರೆ. ತೆಲುಗು ಮತ್ತು ಕನ್ನಡದಲ್ಲಿ ಶೂಟಿಂಗ್ ಮುಗಿದಿದೆ. ಹಿಂದಿ ಹಾಗೂ ತಮಿಳಿನಲ್ಲಿ ಸಿನಿಮಾ ಮೇಕಿಂಗ್ ಹಂತದಲ್ಲಿದೆ. ಪೃಥ್ವಿರಾಜ್ ಮತ್ತು ಕಲ್ಯಾಣಿ ಪ್ರಿಯದರ್ಶನ್ ಜೋಡಿಯಾಗಿ ನಟಿಸುತ್ತಿರುವ ಬ್ರೋ ಡ್ಯಾಡಿ ಚಿತ್ರದಲ್ಲಿ ಮೋಹನ್ ಲಾಲ್ ಪ್ರಧಾನ ಪಾತ್ರವೊಂದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
The blockbuster film Drishyam is now set for an Indonesian remake. directed by Jeethu Joseph.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X