Prabhas Vs Mohanlal: ಪ್ರಭಾಸ್ ಎದುರು ಮೋಹನ್ ಲಾಲ್ ಪೈಪೋಟಿಗೆ ಇಳಿದಿದ್ಯಾಕೆ?
ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಡಿಸೆಂಬರ್ 22ಕ್ಕೆ ಸಿನಿಮಾ ರಿಲೀಸ್ ಆಗ್ತಿದ್ದು 50 ದಿನಗಳು ಮಾತ್ರ ಬಾಕಿಯಿದೆ. 'ಸಲಾರ್' ಎದುರು ಶಾರುಖ್ ಖಾನ್ ನಟನೆಯ 'ಡಂಕಿ' ಸಿನಿಮಾ ಕೂಡ ತೆರೆಗಪ್ಪಳಿಸುತ್ತಿದೆ. ಇತ್ತೀಚಿಗೆ ಈ ಬಾಕ್ಸಾಫೀಸ್ ಫೈಟ್‌ಗೆ ಹಾಲಿವುಡ್‌ನ 'ಅಕ್ವಾಮನ್' ಕೂಡ ಎಂಟ್ರಿ ಕೊಟ್ಟಿದ್ದ.
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಸಲಾರ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಪ್ರಶಾಂತ್ ನೀಲ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. 5 ಭಾಷೆಗಳಲ್ಲಿ ಸಿನಿಮಾ ತೆರೆಗಪ್ಪಳಿಸುತ್ತಿದೆ. ಕನ್ನಡದಲ್ಲೂ ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ವಸಿಷ್ಠ ಸಿಂಹ ಕನ್ನಡದಲ್ಲಿ ಪ್ರಭಾಸ್ ಪಾತ್ರಕ್ಕೆ ವಾಯ್ಸ್ ಕೊಟ್ಟಿದ್ದಾರೆ. ಸೆಪ್ಟೆಂಬರ್ 28ಕ್ಕೆ ರಿಲೀಸ್ ಆಗಬೇಕಿದ್ದ ಸಿನಿಮಾ 3 ತಿಂಗಳು ತಡವಾಗಿ ಪ್ರೇಕ್ಷಕರ ಮುಂದೆ ಬರುವಂತಾಗಿದೆ.

ರಾಜ್‌ಕುಮಾರ್ ಹಿರಾನಿ ನಿರ್ದೇಶನದ 'ಡಂಕಿ' ಸಿನಿಮಾ ರಿಲೀಸ್ ಡೇಟ್ ಬಹಳ ಹಿಂದೆ ಅನೌನ್ಸ್ ಆಗಿತ್ತು. ಆದರೆ ಸುಖಾ ಸುಮ್ಮನೆ 'ಸಲಾರ್' ಸಿನಿಮಾ 'ಡಂಕಿ' ಎದುರು ಬಾಕ್ಸಾಫೀಸ್ ಫೈಟ್‌ಗೆ ಇಳಿಯುವಂತಾಗಿದೆ. ಗ್ರಾಫಿಕ್ಸ್ ಇಷ್ಟವಾಗದ ಕಾರಣ ಪ್ರಶಾಂತ್ ನೀಲ್ ರೀವರ್ಕ್ ಮಾಡಿಸುತ್ತಿದ್ದು ಕ್ರಿಸ್‌ಮಸ್ ಸಂಭ್ರಮದಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ಈ ಸಿನಿಮಾ ಬಳಿಕ 'ಕಲ್ಕಿ' ಹಾಗೂ 'ರಾಜಾ ಡೀಲಕ್ಸ್' ಸಿನಿಮಾಗಳಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ.
ಮಂಚು ವಿಷ್ಣು ನಟನೆಯ 'ಕಣ್ಣಪ್ಪ' ಚಿತ್ರದ ಅತಿಥಿ ಪಾತ್ರದಲ್ಲಿ ಪ್ರಭಾಸ್ ನಟಿಸಲಿದ್ದಾರೆ. ಇದೇ ಚಿತ್ರದಲ್ಲಿ ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ ಲಾಲ್ ಕೂಡ ನಟಿಸುತ್ತಿದ್ದಾರೆ. ಆದರೆ ಇದ್ದಕ್ಕಿದಂತೆ ಪ್ರಭಾಸ್- ಮೋಹನ್ ಲಾಲ್ ಎದುರು ಪೈಪೋಟಿ ಏರ್ಪಟ್ಟಿದೆ. ಅದು 'ಸಲಾರ್' ಹಾಗೂ 'ನೆರು' ಸಿನಿಮಾಗಳ ನಡುವೆ. ಹೌದು ಪ್ರಭಾಸ್ 'ಸಲಾರ್' ಸಿನಿಮಾ ಎದುರು ಮೋಹನ್ ಲಾಲ್ ನಟನೆಯ 'ನೆರು' ಸಿನಿಮಾ ರಿಲೀಸ್ ಆಗುತ್ತಿದೆ. ದಿಢೀರನೆ ಸಿನಿಮಾ ರಿಲೀಸ್ ಡೇಟ್ ಘೋಷಣೆ ಮಾಡಲಾಗಿದೆ.
'ದೃಶ್ಯಂ' ಸರಣಿ ಸಿನಿಮಾಗಳನ್ನು ಮಾಡಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಜಿತು ಜೋಸೆಫ್ 'ನೆರು' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಜಿತು- ಮೋಹನ್‌ಲಾಲ್ ಕಾಂಬಿನೇಷನ್ ಒನ್ಸ್ ಅಗೇನ್ ಮ್ಯಾಜಿಕ್ ಮಾಡುತ್ತದೆ ಎನ್ನುವ ನಿರೀಕ್ಷೆ ಇದೆ. 'ನೆರು' ಲೀಗಲ್ ಥ್ರಿಲ್ಲರ್ ಸಿನಿಮಾ ಆಗಿದ್ದು ಮೋಹನ್ ಲಾಲ್ ವಕೀಲನ ಪಾತ್ರದಲ್ಲಿ ನಟಿಸಿದ್ದಾರೆ.
'ಸಲಾರ್' ಹಾಗೂ 'ಡಂಕಿ' ರೀತಿಯ ದೊಡ್ಡ ಸಿನಿಮಾಗಳಿಗೆ ಹೆಚ್ಚು ಹೆಚ್ಚು ಸ್ಕ್ರೀನ್‌ಗಳು ಬೇಕು. ಸದ್ಯ ಹಾಲಿವುಡ್‌ನ 'ಅಕ್ವಾಮನ್' ಸರಣಿ ಸಿನಿ ಆ ಕೂಡ ಕ್ರಿಸ್‌ಮಸ್ ಸಂಭ್ರಮದಲ್ಲೇ ರಿಲೀಸ್ ಆಗ್ತಿದೆ. ಆ ಸಿನಿಮಾ ಒಂದಷ್ಟು ಸ್ಕ್ರೀನ್‌ಗಳಲ್ಲಿ ಆವರಿಸಿಕೊಳ್ಳಲಿದೆ. ಇದೀಗ ಮೋಹನ್ ಲಾಲ್ 'ನೆರು' ಸಿನಿಮಾ ಕೂಡ ಡಿಸೆಂಬರ್ 21ಕ್ಕೆ ರಿಲೀಸ್ ಆಗುತ್ತಿದೆ. ಇದು 'ಸಲಾರ್' ಸಿನಿಮಾ ಮೇಲೆ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ.
ದೊಡ್ಡ ದೊಡ್ಡ ಸಿನಿಮಾಗಳನ್ನು ಹಬ್ಬದ ಸಂಭ್ರಮದಲ್ಲಿ ಅಥವಾ ಲಾಂಗ್ ವೀಕೆಂಡ್ ನೋಡಿ ರಿಲೀಸ್ ಮಾಡುತ್ತಾರೆ. ಅದೇ ಕಾರಣಕ್ಕೆ ಕ್ರಿಸ್‌ಮಸ್ ವೀಕೆಂಡ್‌ನಲ್ಲಿ ಸಿನಿಮಾಗಳನ್ನು ತೆರೆಗೆ ತರಲು ಫಿಲ್ಮ್ ಮೇಕರ್ಸ್ ಮುಗಿ ಬಿದ್ದಿದ್ದಾರೆ. 'ಸಲಾರ್' ಹಾಗೂ 'ಡಂಕಿ' ಚಿತ್ರತಂಡಗಳು ರಿಲೀಸ್ ಡೇಟ್ ಮುಂದೂಡಲು ಸಿದ್ಧರಿಲ್ಲ. ಇದೀಗ ಈ ಪೈಪೋಟಿಗೆ ಮೋಹನ್ ಲಾಲ್ ಸಹ ಎಂಟ್ರಿ ಕೊಟ್ಟಂತಾಗಿದೆ.
ಹೈವೋಲ್ಟೇಜ್ ಆಕ್ಷನ್ ಎಂಟರ್‌ಟೈನರ್ 'ಸಲಾರ್' ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ಕೂಡ ನಟಿಸಿದ್ದಾರೆ. ಹಾಗಾಗಿ ಮಲಯಾಳಂನಲ್ಲೂ ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ಮಾಡುವ ಪ್ರಯತ್ನಗಳು ನಡೀತಿದೆ. ಇದೀಗ ಮೋಹನ್ ಲಾಲ್ ಸಿನಿಮಾ ಬರ್ತಿರೋದು ಕೇರಳದಲ್ಲಿ 'ಸಲಾರ್'ಗೆ ಕೊಂಚಮಟ್ಟಿಗೆ ಹಿನ್ನಡೆ ಉಂಟು ಮಾಡುವ ಸಾಧ್ಯತೆಯಿದೆ.


Click it and Unblock the Notifications










