ಮಲಯಾಳಂ ಖ್ಯಾತ ಹಾಸ್ಯನಟ ಶಶಿ ಕಳಿಂಗ ನಿಧನ
ಮಲೆಯಾಳಂ ಚಿತ್ರರಂಗದ ಖ್ಯಾತ ಹಾಸ್ಯನಟ ಶಶಿ ಕಳಿಂಗ ಅವರು ಇಂದು ನಿಧನರಾಗಿದ್ದಾರೆ. ಅನಾರೋಗ್ಯದ ಕಾರಣದಿಂದ ಅವರು ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ.
Recommended Video
ಲೇಡಿ ಸೂಪರ್ ಸ್ಟಾರ್ ಹೆಸರಿನ ಬಗ್ಗೆ ಭಾರೀ ಚರ್ಚೆ | NAYANTARA | SUPERSTAR | ONEINDIA KANNADA
ಕೆಲವು ವರ್ಷಗಳಿಂದಲೂ ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಕೋಯಿಕ್ಕೋಡ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.
ರಂಗಭೂಮಿಯಲ್ಲಿ ಸುಮಾರು ಎರಡು ದಶಕ ಸವೆಸಿದ್ದ ಅವರು, 500 ಕ್ಕೂ ಹೆಚ್ಚು ನಾಟಕಗಳಲ್ಲಿ ಪಾತ್ರ ನಿರ್ವಹಿಸಿದ್ದರು.

ಅವರ ಪ್ರತಿಭೆಯನ್ನು ಗುರುತಿಸಿದ ನಿರ್ದೇಶಕ ರಂಜಿತ್ ಸಿನಿಮಾಗಳಲ್ಲಿ ಅವಕಾಶ ನೀಡಿದರು. ನಂತರ ಅವರು ಹಿಂದಿರುಗಿ ನೋಡಲೇ ಇಲ್ಲ.
ಆಮೆನ್, ಅಮರ್ ಅಕ್ಬರ್ ಆಂಥೋನಿ, ಅದಾಮಿಟ್ಟೆ ಮಕನ್ ಅಬು, ಪುಲಿಮುರುಗನ್, ಕಸಬ ಇನ್ನೂ ಹಲವು ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ.
More from Filmibeat
English summary
Mollywood comedy actor Sasi Kalinga passed away today. He was suffering from multi organ failure.


Click it and Unblock the Notifications











