ದುಲ್ಕರ್ ಸಲ್ಮಾನ್ ಜೊತೆ ರೊಮ್ಯಾನ್ಸ್ ಮಾಡಲು ಸಜ್ಜಾದ ಹೃತಿಕ್ ರೋಷನ್ ಸಿನಿಮಾದ ನಟಿ ಮೃಣಾಲ್

ಮಲಯಾಳಂ ಸ್ಟಾರ್ ನಟ ದುಲ್ಕರ್ ಸಲ್ಮಾನ್‌ ರ ಖ್ಯಾತಿ ಪರಭಾಷೆಗಳಲ್ಲೂ ಪಸರಿಸಿ ಬಹುಕಾಲವೇ ಆಗಿದೆ. ಮಲಯಾಳಂನಲ್ಲಿ ಮಾತ್ರವಲ್ಲದೆ, ತೆಲುಗು, ತಮಿಳು ಚಿತ್ರರಂಗದಲ್ಲೂ ಮಿಂಚಿದ್ದಾರೆ.

ಇದೀಗ ಮತ್ತೆ ಬಾಲಿವುಡ್ ಕಡೆ ಮುಖ ಮಾಡಿದ್ದು, ಹಿಂದಿ ಸಿನಿಮಾದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಸೋನಂ ಕಪೂರ್ ಜೊತೆಗೆ 'ದಿ ಜೋಯಾ ಫ್ಯಾಕ್ಟರ್' ಹಾಗೂ ದಿವಂಗತ ಇರ್ಫಾನ್ ಖಾನ್ ಜೊತೆಗೆ 'ಕಾರವಾನ್' ನಲ್ಲಿ ನಟಿಸಿರುವ ದುಲ್ಕರ್ ಇದೀಗ, ಹಿಂದಿಯ ಪ್ರತಿಭಾವಂತ ನಿರ್ದೇಶಕ ಆರ್.ಬಾಲ್ಕಿ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ.

ಈ ನಡುವೆ ದುಲ್ಕರ್ ಮತ್ತೊಂದು ಸಿನಿಮಾ ಸದ್ದು ಮಾಡುತ್ತಿದೆ. ನಿರ್ದೇಶಕ ಹನು ರಾಘವಪುಡಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ರೊಮ್ಯಾಂಟಿಕ್ ಸಿನಿಮಾದಲ್ಲಿ ದುಲ್ಕರ್ ನಟಿಸುತ್ತಿದ್ದಾರೆ. ವಿಶೇಷ ಎಂದರೆ ದುಲ್ಕರ್ ಗೆ ನಾಯಕಿಯಾಗಿ ಬಾಲಿವುಡ್ ನಟಿ ಮೃಣಾಲ್ ಠಾಕೂರ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

Mrunal Thakur to star opposite in Dulquer Salmaans next movie

ಹೃತಿಕ್ ರೋಷನ್ ನಟನೆಯ ಸೂಪರ್ 30 ಸಿನಿಮಾ ಮೂಲಕ ಚಿತ್ರಪ್ರಿಯರ ಗಮನ ಸೆಳೆದಿದ್ದ ಮೃಣಾಲ್ ಇದೀಗ ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ದುಲ್ಕರ್ ಜೊತೆ ನಟಿಸುವ ಮೂಲಕ ಮೃಣಾಲ್ ಮೊದಲ ಬಾರಿಗೆ ದಕ್ಷಿಣ ಭಾರತೀಯ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ.

ಫ್ರೆಶ್ ಪೇರ್ ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದು, ಈ ಸಿನಿಮಾ ಮಲಯಾಳಂ ಜೊತೆಗೆ ತೆಲುಗು ಮತ್ತು ತಮಿಳಿನಲ್ಲೂ ಸಿದ್ಧವಾಗುತ್ತಿದ್ದು, ಮೃಣಾಲ್ ಮತ್ತು ದುಲ್ಕರ್ ಅವರನ್ನು ಒಟ್ಟಿಗೆ ನೋಡಲು ಕಾಯುತ್ತಿದ್ದಾರೆ. ಅಂದಹಾಗೆ ನಟಿ ಮೃಣಾಲ್, ಆಯುಷ್ಮಾನ್ ಖುರಾನ ನಟನೆಯ ಡಾಕ್ಟರ್ ಜಿ ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ ಆಯುಷ್ಮಾನ್ ಸಿನಿಮಾದಿಂದ ಹೊರನಡೆದಿರುವ ಮೃಣಾಲ್ ಈಗ ದುಲ್ಕರ್ ಜೊತೆ ಕೈಜೋಡಿಸಿದ್ದಾರೆ.

Recommended Video

ಸದ್ದಿಲ್ಲದೆ ಮುಗಿದುಹೋಯ್ತು ವರುಣ್ ಧವನ್ ಮದುವೆ | Filmibeat Kannada

More from Filmibeat

English summary
Bollywood Actress Mrunal Thakur to star opposite in Dulquer Salmaan's next movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X