ಎರಡೆರಡು ಬಾರಿ 'ನಿತ್ಯಾ ಮೆನನ್‌'ನ 'ಬ್ಯಾನ್' ಮಾಡಲು ಮುಂದಾಗಿದ್ದೇಕೆ ಮಲಯಾಳಂ ಚಿತ್ರರಂಗ ?

ಕನ್ನಡದ ''ಸೆವೆನ್ ಓ ಕ್ಲಾಕ್'' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟವರು ''ನಿತ್ಯಾ ಮೆನನ್''. ಆ ನಂತರ ''ಕನ್ನಡ'' ಸೇರಿದಂತೆ ''ಮಲಯಾಳಂ'', ''ತೆಲುಗು'', ''ತಮಿಳು'' ಭಾಷೆಗಳಲ್ಲಿ ನಟಿಸಿದ್ದ ನಿತ್ಯಾ, ''ಮಿಷನ್ ಮಂಗಲ್'' ಚಿತ್ರದ ಮೂಲಕ ''ಹಿಂದಿ''ಗೂ ಪದಾರ್ಪಣೆ ಮಾಡಿದ್ದರು.

ತಮ್ಮ ಅಮೋಘ ಅಭಿನಯದಿಂದನೇ ದಕ್ಷಿಣದ ಎಲ್ಲೆಡೆ ಕೀರ್ತಿಯ ಪತಾಕೆಯನ್ನ ಹಾರಿಸಿರುವ ನಿತ್ಯಾ, ತಮ್ಮ ''ನೇರ ದಿಟ್ಟ ನಡುವಳಿಕೆ''ಗಳಿಂದ ಕೂಡ ಹೆಸರುವಾಸಿಯಾದವರು. ಆದರೆ ಒಮ್ಮೊಮ್ಮೆ ನಿತ್ಯಾ ಅವರ ಇದೇ ನಡುವಳಿಕೆ ಬೇರೆಯವರ ಕಣ್ಣನ್ನ ಕೆಂಪಾಗಿಸಿದೆ. ಇದಕ್ಕೆ ಸಾಕ್ಷಿ ಅನ್ನುವಂತೆ ನಿತ್ಯಾ ಮೆನನ್ ಅವರನ್ನ ಹಿಂದೊಮ್ಮೆ ''ಮಲಯಾಳಂ'' ಚಿತ್ರರಂಗ ''ಬ್ಯಾನ್'' ಮಾಡಲು ಮುಂದಾಗಿತ್ತು. ಅದು ''ಒಂದಲ್ಲ.. ಎರಡೆರಡು ಬಾರಿ''

Multilingual Actress Nitya Menon faced ban twice

ಹೌದು. 2012ರಲ್ಲಿ ನಿತ್ಯಾ ವಿರುದ್ದ ''ಮಲಯಾಳಂ ಚಿತ್ರರಂಗ''ದ ಅನೇಕ ನಿರ್ಮಾಪಕರು ಮುನಿಸಿಕೊಂಡಿದ್ದರು. ಯಾಕೆಂದರೆ ಖ್ಯಾತ ಮಲಯಾಳಂನ ''ನಿರ್ಮಾಪಕ''ರೊಬ್ಬರು ಆಗ ನಿತ್ಯಾ ಅವರ ''ಕಾಲ್ ಶೀಟ್'' ಕೇಳಿಕೊಂಡು ಅವರ ಮನೆಗೆ ಹೋಗಿದ್ದರು. ಆದರೆ ನಿತ್ಯಾ ಮಾತ್ರ ನಿರ್ಮಾಪಕರ ಮುಖ ನೋಡಲು ಕೂಡ ಮನೆಯಾಚೆ ಬರಲಿಲ್ಲ. ಬದಲಿಗೆ ಮನೆಯಲ್ಲಿಯೇ ಇದ್ದರೂ ಕೂಡ ''ಮ್ಯಾನೇಜರ್'' ನ ಕಳಿಸಿದ್ದರು. ಕೇವಲ ಇವರೊಬ್ಬರಷ್ಟೇ ಅಲ್ಲ ಅನೇಕ ನಿರ್ಮಾಪಕರನ್ನ ನಿತ್ಯಾ ಇದೇ ರೀತಿ ನಡೆಸಿಕೊಂಡಿದ್ದಾರೆ ಎಂಬ ಮಾತು ಆಗ ಕೇಳಿ ಬಂದಿತ್ತು. ಈ ಕಾರಣಕ್ಕೆ ನಿತ್ಯಾ ಅವರ ಮೇಲೆ ''ನಿಷೇಧ'' ಹೇರುವ ಚಿಂತನೆ ನಡೆದಿತ್ತು.

ಆದರೆ ಈ ಎಲ್ಲ ಬೆಳವಣಿಗೆಯ ನಂತರವೂ 2012ರಲ್ಲಿ ''ಅರ್ಧ ಡಜನ್'' ಮಲಯಾಳಂ ಸಿನಿಮಾಗಳಲ್ಲಿ ನಿತ್ಯಾ ಕಾಣಿಸಿಕೊಂಡರು. ಅದರಲ್ಲಿ ಆ ಕಾಲಕ್ಕೆ ಎಲ್ಲರ ಗಮನ ಸೆಳದು ಸಿಕ್ಕಾಪಟ್ಟೆ ಪ್ರಶಂಸೆಯನ್ನ ಪಡೆದಿದ್ದ ''ಉಸ್ತಾದ್ ಹೊಟೇಲ್'' ಕೂಡ ಒಂದು.

ಇನ್ನೂ 2019ರಲ್ಲಿಯೂ ಕೂಡ ಇಂಥಹದ್ದೇ ಬೆಳವಣಿಗೆ ನಡೆದಿತ್ತು. 2019ರಲ್ಲಿ ಮಲಯಾಳಂ ಸಿನಿಮಾದಲ್ಲಿ ನಟಿಸುವ ಸಂದರ್ಭದಲ್ಲಿ ನಿತ್ಯಾ ಮೆನನ್ ರವರ ತಾಯಿಗೆ ''ಕ್ಯಾನ್ಸರ್'' ಇರುವುದಾಗಿ ಸುದ್ದಿ ಬಂದಿತ್ತು. ಅದು ಮೂರನೇ ಹಂತದಲ್ಲಿಯೂ ಇತ್ತು. ಇನ್ನು ನಿತ್ಯಾರವರು ಬಹುಕಾಲದ ''ಮೈಗ್ರೇನ್ ಸಮಸ್ಯೆ''ಯಿಂದ ಬಳಲುತ್ತಿದ್ದರು. ಇದರಿಂದ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದ ನಿತ್ಯಾ ಮನೆಯಲ್ಲಿಯೇ ಉಳಿದರು. ತಾಯಿ ಕ್ಯಾನ್ಸರ್ ನಿಂದ ಬಳಲುತ್ತಿದ್ದರೆ ನಿತ್ಯಾ ಅರೆತಲೆನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು.

Multilingual Actress Nitya Menon faced ban twice

ಆಗ ಮಲೆಯಾಳಂ ನಿರ್ಮಾಪಕರು ನಿತ್ಯಾ ಮೆನನ್ ಅನುಮತಿಯಿಲ್ಲದೇ ದಿಢೀರನೇ ಮನೆಗೆ ಧಾವಿಸಿ ಅಪ್ ಕಮಿಂಗ್ ಸಿನಿಮಾದಲ್ಲಿ ಮಾತನಾಡುವುದಕ್ಕೆ ಮುಂದಾಗಿದ್ದರು. ಆಗ ನಿತ್ಯಾ ಈಗ ಸದ್ಯಕ್ಕೆ ನನ್ನ ''ಆರೋಗ್ಯ ಸರಿ ಇಲ್ಲ''. ನನ್ನ ಆರೋಗ್ಯ ಸುಧಾರಿಸಿದ ಮೇಲೆ ಮಾತನಾಡೋಣ ಎಂದಿದ್ದರು. ಇಷ್ಟಕ್ಕೇ ಸಿಟ್ಟಾದ ನಿರ್ಮಾಪಕರು ಕೂಡಲೇ ಮಲಯಾಳಂನ ಹಿರಿಯ ನಿರ್ಮಾಪಕ ''ಜಿ.ಸುರೇಶ್ ಕುಮಾರ್'' ನೇತೃತ್ವದಲ್ಲಿ ಸಭೆ ಕರೆದರು. ನಿತ್ಯಾ ಮೆನನ್ ಗೆ ''ಅಹಂಕಾರ ಜಾಸ್ತಿ'' ಈ ಕ್ಷಣದಿಂದನೇ ಅವರನ್ನ ''ಬ್ಯಾನ್'' ಮಾಡಬೇಕೆಂದು ಆಗ್ರಹಿಸಿದರು.

ಇನ್ನೂ ಇದೇ ವಿಚಾರಕ್ಕೆ ಅವತ್ತು ಪ್ರತಿಕ್ರಿಯೆ ನೀಡಿದ್ದ ನಿತ್ಯಾ ಮೆನನ್, ನನಗೆ ಅಹಂಕಾರವಿಲ್ಲ. ಅಂತಹ ಅಹಂಕಾರವಿರುವ ನಿರ್ಮಾಪಕರ ಜತೆಗೆ ನಾನು ಮಾತನಾಡಲು ಇಚ್ಚಿಸುವುದಿಲ್ಲ ಎಂದು ಖಂಡ ತುಂಡವಾಗಿ ಹೇಳಿದ್ದರು.

Multilingual Actress Nitya Menon faced ban twice

ಆದರೆ ಈ ಬಾರಿ ನಿತ್ಯಾ ಅವರ ಈ ನಡೆ ಹಾಗೂ ನುಡಿ ಎರಡು ಪರಿಣಾಮವನ್ನ ಬೀರಿತು. ಇದಕ್ಕೆ ಕೈಗನ್ನಡಿ ಅನ್ನುವಂತೆ, ಒಂದ್ಕಾಲದಲ್ಲಿ ಮಲಯಾಳಂ ಚಿತ್ರರಂಗದ ಮುಂಚೂಣಿ ನಾಯಕಿಯಾಗಿದ್ದ ನಿತ್ಯಾ 2019ರಿಂದ ಇಲ್ಲಿಯವರೆಗೆ ನಟಿಸಿದ್ದು ಕೇವಲ ಮೂರೇ ಮೂರು ಸಿನಿಮಾದಲ್ಲಿ ಮಾತ್ರ. ಸದ್ಯಕ್ಕೆ ನಿತ್ಯಾ ಕೈಯಲ್ಲಿ ಮಲಯಾಳಂನ ಯಾವ ಸಿನಿಮಾ ಇಲ್ಲ.

Multilingual Actress Nitya Menon faced ban twice

ಹೀಗೆ ಕಾಲ.. ಕಾಲಕ್ಕೆ.. ಮಲಯಾಳಂ ಚಿತ್ರರಂಗದವರ ಕೆಂಗಣ್ಣಿಗೆ ಗುರಿಯಾಗುತ್ತಾನೇ ಬಂದ ನಿತ್ಯಾ ಮೆನನ್ ಗೆ ಇಂದು ''ಜನುಮದಿನ''ದ ಸಂಭ್ರಮ. Happy Birthday ನಿತ್ಯಾ

More from Filmibeat

English summary
Nitya Menon, Who Made Her Debut With Kannada Film Seven O Clock Has Faced Fear Of Getting Banned From Malayalam Industry Twice.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X