ಲೈಂ*ಗಿಕ ಕಿರುಕುಳ ಆರೋಪ ; ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ರಂಜಿತ್ ಅರೆಸ್ಟ್ - ನಡುಗಿದ ಮಲಯಾಳಂ ಚಿತ್ರರಂಗ

ಬಣ್ಣದ ಪ್ರಪಂಚದಲ್ಲಿ ಅನೇಕರು ಮುಖವಾಡದ ಬದುಕನ್ನ ಬದುಕುತ್ತಾರೆ. ಇನ್ನೂ ಕೆಲವರು ಪ್ರಚಾರದ ಹುಚ್ಚಿಗೆ ಬಂದರೆ, ಬಹುತೇಕರು ಹೆಣ್ಣಿನ ಚಪಲಕ್ಕಾಗಿ ಸಿನಿಮಾ ನಿರ್ಮಾಣ ಮಾಡಲು ಬರುತ್ತಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಪಾತ್ರಕ್ಕಾಗಿ ಪಲ್ಲಂಗ ಹತ್ತಬೇಕು ಎನ್ನುವ ಅಲಿಖಿತ ನಿಯಮ ಮಲಯಾಳಂ ಚಿತ್ರರಂಗದಲ್ಲಿದೆ ಅನ್ನುವುದು ಹೇಮಾ ಆಯೋಗದ ವರದಿಯ ಮೂಲಕ ಎರಡು ವರ್ಷದ ಹಿಂದೆ ಸಾಬೀತಾಗಿತ್ತು.

ವರದಿ ಬಂದ ಬೆನ್ನಲ್ಲಿಯೇ ಮಲಯಾಳಂ ಚಿತ್ರರಂಗದಲ್ಲಿ ಅಲ್ಲೋಲ .. ಕಲ್ಲೋಲ .. ಸೃಷ್ಟಿಯಾಗಿತ್ತು. ದಿನಕ್ಕೊಂದು ಪ್ರಕರಣ ಬಯಲಿಗೆ ಬಂದಿದ್ದವು. ಹಲವರ ಮಾನ ಮೂರು ಕಾಸಿಗೆ ಹರಾಜು ಆಗಿತ್ತು. ಆದರೂ ಕೂಡ ಮಲಯಾಳಂ ಚಿತ್ರರಂಗದಲ್ಲಿ ಪಾತ್ರಕ್ಕಾಗಿ ಪಲ್ಲಂಗದ ಸಂಸ್ಕ್ರತಿಗೆ ಕಡಿವಾಣ
ಬಿದ್ದಿಲ್ಲ. ನಿರ್ಮಾಪಕ, ನಿರ್ದೇಶಕ ಮತ್ತು ನಟರಲ್ಲಿ ಭಯದ ವಾತಾವರಣವೂ ಇಲ್ಲ.

National Award-Winning Director Ranjith Arrested Industry Shaken by Actress s Misconduct

ಇದಕ್ಕೆ ಪುರಾವೆ ಎಂಬಂತೆ ಸದ್ಯ ಮಲಯಾಳಂನ ಖ್ಯಾತ ನಿರ್ದೇಶಕ, ಕೇರಳ ರಾಜ್ಯ ಚಲನಚಿತ್ರ ಅಕಾಡೆಮಿಯ ಮಾಜಿ ಅಧ್ಯಕ್ಷ, ಮತ್ತು ಮೂರು ಭಾರಿ ರಾಷ್ಟ್ರ ಪ್ರಶಸ್ತಿ ಪಡೆದು ಮಲಯಾಳಂ ಚಿತ್ರರಂಗದ ಹಿರಿಮೆ ಹೆಚ್ಚಿಸಿದ್ದ ರಂಜಿತ್ ಬಾಲಕೃಷ್ಣನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಯುವ ನಟಿಯೊಬ್ಬರು ನೀಡಿದ ದೂರಿನ ಅನ್ವಯ ರಂಜಿತ್ ಅವರನ್ನು ಎರ್ನಾಕುಲಮ್ ಸೆಂಟ್ರಲ್ ಪೊಲೀಸರು ಬಂಧಿಸಿದ್ದು, ಕೊಚ್ಚಿಯಲ್ಲಿ ಚಿತ್ರದ ಚಿತ್ರೀಕರಣದ ಸಮಯದಲ್ಲಿ ರಂಜಿತ್ ತನ್ನ ಮೇಲೆ ದೌರ್ಜನ್ಯ ಎಸಗಲು ಪ್ರಯತ್ನ ಮಾಡಿದರು ಎಂದು ನಟಿ ಆರೋಪ ಮಾಡಿದ್ದಾರೆ.

ಶೂಟಿಂಗ್ ವೇಳೆ ಕ್ಯಾರವಾನ್​​ಗೆ ಕರೆದು ಲೈಂ*ಗಿಕ ದೌರ್ಜನ್ಯ ಎಸಗುವ ಪ್ರಯತ್ನವನ್ನು ರಂಜಿತ್ ಮಾಡಿದ್ದಾಗಿ ನಟಿ ಆರೋಪ ಮಾಡಿದ್ದು, ಈ ಘಟನೆಯಿಂದ ತೀವ್ರವಾದ ಮಾನಸಿಕ ಆಘಾತವಾಗಿದೆ ಎಂದು ಹೇಳಿದ್ದಾರೆ. ಮಾನಸಿಕ ಆಘಾತದಿಂದ ಹೊರಬರಲು ಕೌನ್ಸೆಲಿಂಗ್ ಕೂಡ ಪಡೆಯಬೇಕಾಯಿತು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಬಂಧನಕ್ಕೂ ಕೆಲವು ದಿನಗಳ ಮೊದಲು ಎರ್ನಾಕುಲಂನ ಮಹಿಳಾ ಪೊಲೀಸ್ ಠಾಣೆಯಲ್ಲಿ ನಟಿಯ ಹೇಳಿಕೆಯನ್ನು ದಾಖಲಿಸಿಕೊಂಡ ಪೊಲೀಸರು ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದ ರಂಜಿತ್ ಅವರನ್ನು ಮಾರ್ಗಮಧ್ಯದಲ್ಲಿ ಬಂಧಿಸಿದ್ದಾರೆ.

National Award-Winning Director Ranjith Arrested Industry Shaken by Actress s Misconduct

ಅಂದ್ಹಾಗೇ 2024ರಲ್ಲಿ ಹೇಮಾ ವರದಿ ಹೊರ ಬಂದ ಬೆನ್ನಲ್ಲೇ ಇದೇ ರಂಜಿತ್ ವಿರುದ್ದ
ಬೆಂಗಾಲಿ ನಟಿ ಶ್ರೀಲೇಖಾ ಮಿತ್ರಾ ಆರೋಪ ಮಾಡಿದ್ದರು. ಮಲಯಾಳಂ ನಿರ್ದೇಶಕ ರಂಜಿತ್ ಅವರ ಅಪಾರ್ಟ್‌ಮೆಂಟ್‌ಗೆ ಕರೆಸಿಕೊಂಡಿದ್ದರು. ಅಷ್ಟೊತ್ತಿಗಾಗಲೇ ಸಾಕಷ್ಟು ಮಂದಿ ಅಲ್ಲಿ ಇದ್ದರು. ಫೋನ್‌ನಲ್ಲಿ ಈಕೆ ನಟಿಸಿದ ಹಿಂದಿನ ಸಿನಿಮಾದ ಛಾಯಾಗ್ರಾಹಕರೊಂದಿಗೆ ಫೋನ್‌ನಲ್ಲಿ ಮಾತಾಡುತ್ತಿದ್ದರು. ಆ ವೇಳೆ ತನ್ನ ಬೆಡ್‌ರೂಮ್‌ಗೆ ಬರುವಂತೆ ಕರೆಸಿಕೊಂಡವರು. ಅಲ್ಲಿ ಹೆಚ್ಚು ಗಲಾಟೆ ಇದ್ದಿದ್ದರಿಂದ ತನ್ನ ಪಾತ್ರದ ಬಗ್ಗೆ ಮಾತಾಡುವುದಕ್ಕೆ ಕರೆಸಿಕೊಂಡಿದ್ದಾರೆಂದು ಒಳಗೆ ಹೋದೆ. ಆದರೆ ಅಲ್ಲಿ ನಿರ್ದೇಶಕ ರಂಜಿತ್ ಅನುಚಿತವಾಗಿ ವರ್ತಿಸುವುದಕ್ಕೆ ಶುರು ಮಾಡಿದ್ದರು ಎಂದು ಆರೋಪಿಸಿದ್ದರು.

ನಾನು ಛಾಯಾಗ್ರಾಹಕನೊಂದಿಗೆ ಮಾತಾಡುತ್ತಿದೆ. ಆಗ ರಂಜಿತ್ ನನ್ನ ಹಿಂದೆ ಬಂದು ನಿಂತುಕೊಂಡರು. ನನ್ನ ಕೈಯಲ್ಲಿದ್ದ ಬಳೆಗಳೊಂದಿಗೆ ಆಟ ಆಡುವುದಕ್ಕೆ ಶುರು ಮಾಡಿದ್ದರು. ಅದೇ ವೇಳೆ ನನ್ನ ಸ್ಕಿನ್ ಅನ್ನು ಮುಟ್ಟಿದರು. ಆಗ ನನಗೆ ಕಸಿವಿಸಿ ಆಗುವುದಕ್ಕೆ ಶುರುವಾಗಿತ್ತು. ಆದರೆ, ಆಗ ನನಗೆ ಓವರ್ ಆಗಿ ಯೋಚನೆ ಮಾಡುತ್ತಿದ್ದೇನೆ ಅಂತ ಅನಿಸಿ ಸುಮ್ಮನಿದ್ದೆ. ಆ ರೂಮ್‌ನಲ್ಲಿ ಕತ್ತಲು ಆವರಿಸಿತ್ತು. ನಾನು ಅದಕ್ಕೆ ಪ್ರತಿಕ್ರಿಯೆ ನೀಡದೇ ಇದ್ದಾಗ, ನನ್ನ ಕತ್ತು ಹಾಗೂ ಕೂದಲಿನೊಂದಿಗೆ ಆಟ ಆಡುವುದಕ್ಕೆ ಶುರು ಮಾಡಿದ್ದರು. ನನಗೆ ಯಾಕೋ ಸರಿ ಹೋಗುತ್ತಿಲ್ಲ ಅಂತ ಅನಿಸಿ. ಅಲ್ಲಿಂದ ಹೊರಟು ಹೋದೆ ಎಂದು ಶ್ರೀಲೇಖಾ ಹೇಳಿದ್ದರು.

ಇನ್ನೂ ಅದೇ ವರ್ಷ ಅಂದರೆ 2024ರಲ್ಲಿ ರಂಜಿತ್ ವಿರುದ್ಧ ನಟ ಒಬ್ಬರು ಆರೋಪ ಮಾಡಿದ್ದರು. 2012ರಲ್ಲಿ ಸಿನಿಮಾವೊಂದರ ಆಡಿಷನ್ ವಿಚಾರವಾಗಿ ಬೆಂಗಳೂರಿನ ಹೋಟೆಲ್‌ಗೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದರು. ಇದು ಆಡಿಷನ್ ಪ್ರಕ್ರಿಯೆ ಭಾಗವೆಂದು ಭಾವಿಸಿದ್ದೆ. ಇದರ ಬದಲಾಗಿ ಪಾತ್ರ ನೀಡೋದಾಗಿ ಭರವಸೆ ನೀಡಿ ರಂಜಿತ್ ತನಗೆ ಬಟ್ಟೆ ಬಿಚ್ಚಿಸಿ ಹಲ್ಲೆ ನಡೆಸಿದ್ದಾರೆ ನಟ ದೂರಿನಲ್ಲಿ ಉಲ್ಲೇಖಿಸಿದ್ದರು.

ಆ ನಂತರ ಈ ಪ್ರಕರಣ ರದ್ದತಿ ಕೋರಿ ಹೈಕೋರ್ಟ್ ನಲ್ಲಿ ರಂಜಿತ್ ಅರ್ಜಿ ಸಲ್ಲಿಸಿದ್ದರು. ರಂಜಿತ್ ಅರ್ಜಿ ಪುರಸ್ಕರಿಸಿದ ಹೈಕೋರ್ಟ್ ನ್ಯಾ. ಎಸ್ ಆರ್ ಕೃಷ್ಣಕುಮಾರ್ ಅವರಿಂದ ಪ್ರಕರಣ ವಜಾಗೊಳಿಸಿತ್ತು.

More from Filmibeat

English summary
From National Awards to police custody: Malayalam filmmaker Ranjith arrested after a shocking on-set incident. Inside the investigation that shook the industry.
Read more about: casting couch me too mollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X