ಸಂಭಾವನೆ ಕಡಿತ, ನಿರ್ಮಾಪಕ ಕಷ್ಟಕ್ಕೆ ಸ್ಪಂದಿಸಿದ ನಟಿ ನಯನತಾರ!
ಲಾಕ್‌ಡೌನ್ ಆದ್ಮೇಲೆ ಸ್ಟಾರ್ ನಟ-ನಟಿಯರು ಹಾಗೂ ತಂತ್ರಜ್ಞರು ಸಂಭಾವನೆಯನ್ನು ಕಡಿತ ಮಾಡಿಕೊಂಡರೆ ಉತ್ತಮ. ಇದರಿಂದ ನಿರ್ಮಾಪಕರಿಗೆ ಸಹಾಯವಾಗಬಹುದು ಎಂದು ತಮಿಳು ನಿರ್ಮಾಪಕರ ಸಂಘವೂ ಮನವಿ ಮಾಡಿದೆ.
ಇಂತಹದೊಂದು ಮನವಿ ಬಂದ ಕೂಡಲೇ ದಕ್ಷಿಣ ಭಾರತದ ನಂಬರ್ ವನ್ ನಟಿ ನಯನತಾರ, ತಮ್ಮ ಮುಂದಿನ ಚಿತ್ರದಲ್ಲಿ ಸಂಭಾವನೆ ಕಡಿತ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ವರದಿಯಾಗಿದೆ.
ಮಲಯಾಳಂನಲ್ಲಿ ನಟ ಕುಂಚಾಕೊ ಬೊಬನ್ ಅವರ 'ನಿಜಾಲ್' ಚಿತ್ರದಲ್ಲಿ ನಯನತಾರ ನಟಿಸುತ್ತಿದ್ದು, ಈ ಚಿತ್ರದ ಸಂಭಾವನೆಯಲ್ಲಿ ಕಡಿತ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕೊರೊನಾ ಲಾಕ್‌ಡೌನ್ ಕಾರಣದಿಂದ ನಿರ್ಮಾಪಕರು ಸಂಕಷ್ಟದಲ್ಲಿದ್ದಾರೆ. ಅವರ ಆರ್ಥಿಕ ಪರಿಸ್ಥಿತಿ ಉತ್ತಮಗೊಳಿಸುವ ಸಲುವಾಗಿ ನಯನತಾರ ಸಂಭಾವನೆ ಕಡಿಮೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

'ನಿಜಾಲ್' ಚಿತ್ರದ ನಾಯಕಿ ಪಾತ್ರಕ್ಕಾಗಿ ಕುಂಚಕೋ ಬೊಬನ್ ಅವರು ನಯನತಾರಾ ಹೆಸರನ್ನು ಸೂಚಿಸಿದ್ದರಂತೆ. ಸ್ಕ್ರಿಪ್ಟ್ ಓದಿದ ನಂತರ, ನಯನತಾರಗೂ ಇದು ಇಷ್ಟ ಆಗಿದೆ.
ಇನ್ನು ನಯನತಾರ ಸಂಭಾವನೆ ವಿಚಾರಕ್ಕೆ ಬಂದರೆ, ಸೌತ್ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂದು ಹೇಳಲಾಗಿದೆ. ಚಿತ್ರವೊಂದಕ್ಕೆ 4-5 ಕೋಟಿವರೆಗೂ ನಯನತಾರ ಚಾರ್ಜ್ ಮಾಡ್ತಾರಂತೆ.


Click it and Unblock the Notifications











