For Quick Alerts
  ALLOW NOTIFICATIONS  
  For Daily Alerts

  ನಟಿ ನಯನತಾರಾ ತಂದೆ ಆರೋಗ್ಯ ಸ್ಥಿತಿ ಗಂಭೀರ ಆಸ್ಪತ್ರೆಗೆ ದಾಖಲು

  |

  ಬಹುಭಾಷಾ ನಟಿ, ಲೇಡಿ ಸೂಪರ್‌ಸ್ಟಾರ್ ನಯನತಾರಾ ತಂದೆಯ ಆರೋಗ್ಯ ಸ್ಥಿತಿ ಹಠಾತ್ತನೆ ಹದಗೆಟ್ಟಿದ್ದು ಅವರನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗಿದೆ.

  ಕೇರಳದ ಕೊಚ್ಚಿಯಲ್ಲಿ ವಾಸವಿರುವ ನಯನತಾರಾ ತಂದೆ ಕುರಿಯನ್ ಕೊಡಿಯಟ್ಟು ಆರೋಗ್ಯದಲ್ಲಿ ಹಠಾತ್ ವ್ಯತ್ಯಯ ಆದ ಕಾರಣ ಅವರನ್ನು ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ವೆಂಟಿಲೇಟರ್ ಸಹಾಯದೊಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.

  ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ನಯನತಾರಾ ವಿಷಯ ತಿಳಿಯುತ್ತಿದ್ದಂತೆ ವಿಶೇಷ ಫ್ಲೈಟ್ ಹಿಡಿದು ಕೊಚ್ಚಿಗೆ ಹಾರಿದ್ದಾರೆ. ನಯನತಾರಾ ಬಾಯ್‌ಫ್ರೆಂಡ್ ವಿಘ್ನೇಷ್ ಸಹ ಕೊಚ್ಚಿಗೆ ಹೋಗಿದ್ದಾರೆ ಎನ್ನಲಾಗಿದೆ. ನಯನತಾರಾ ತಾಯಿ ಸಹ ಮಗಳೊಟ್ಟಿಗೆ ಇದ್ದು ಮೂವರು ಒಟ್ಟಿಗೆ ಕೊಚ್ಚಿಗೆ ತಲುಪಿದ್ದಾರೆ.

  ನಯನತಾರಾ ಸಹೋದರ ದುಬೈನಲ್ಲಿ ವಾಸವಿದ್ದು ಅವರೂ ಸಹ ಕೊಚ್ಚಿಗೆ ಮರಳಿದ್ದಾರೆ. ಕೊಚ್ಚಿ ನಯನತಾರಾ ಹುಟ್ಟೂರಾಗಿದ್ದು ನಯನತಾರಾ ಅವರ ಅಮ್ಮ ಒಮನಾ ಕೊಡಿಯಟ್ಟು ಮತ್ತು ತಂದೆ ಕುರಿಯನ್ ಕೊಡಿಯಟ್ಟು ಅಲ್ಲಿಯೇ ವಾಸವಿದ್ದಾರೆ.

  ನಯನತಾರಾ ತಂದೆಗೆ ಕಳೆದ ಕೆಲವು ದಿನಗಳಿಂದಲೂ ಆರೋಗ್ಯ ಸರಿಯಿಲ್ಲವಂತೆ. ಕೆಲವು ದಿನಗಳಿಂದಲೂ ಅವರು ಪ್ರತಿದಿನ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದರು ಎನ್ನಲಾಗಿದೆ.

  ಕೊರೋನ ಕಾರಣದಿಂದ ಸಂಭ್ರಮಾಚರಣೆಗೆ ಬ್ರೇಕ್ ಹಾಕಿದ ಶಿವಣ್ಣ! | Filmibeat Kannada

  ಸಿನಿಮಾ ವಿಷಯಕ್ಕೆ ಮರಳುವುದಾದರೆ, ನಯನತಾರಾ, ರಜನೀಕಾಂತ್ ಜೊತೆಗೆ 'ಅಣ್ಣಾತೆ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಂಧ ಮಹಿಳೆಯ ಪಾತ್ರದಲ್ಲಿ 'ನೇತ್ರಿಕನ್' ಹೆಸರಿನ ಸಿನಿಮಾದಲ್ಲಿ ನಟಿಸಲಿದ್ದಾರೆ. 'ತಟ್ರಿಶನ್', 'ಪಾಟ್ಟು', 'ಕೂಳಂಗಲ್', 'ಕಾತು ವಾಕುಲ್ ರೆಂಡು ಕಾದಲ್' ಸಿನಿಮಾದಲ್ಲಿಯೈ ನಯನತಾರಾ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಬಾಯ್‌ಫ್ರೆಂಡ್ ವಿಘ್ನೇಶ್ ನಿರ್ಮಾಣ ಮಾಡುತ್ತಿದ್ದಾರೆ. ಚಿರಂಜೀವಿ ನಟಿಸಲಿರುವ 'ಆಟೊ ಜಾನಿ' ಸಿನಿಮಾದಲ್ಲಿಯೂ ನಯನತಾರಾ ನಟಿಸಲಿದ್ದಾರೆ.

  English summary
  Actress Nayanthara's father Kuriyan Kodiyattu hospitalized in Kochi. He is on ICU bed and treated through ventilator.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X