ಅಭಿಮಾನಿಗಳಿಗೆ 'ಪ್ರಾಣ' ನೀಡಲು ಬಂದ ನಿತ್ಯಾ ಮೆನನ್

By Pavithra

ನಿತ್ಯಾ ಮೆನನ್ .. ಮಲೆಯಾಳಂ ಸಿನಿಮಾ ನಟಿ ಆದರೂ ಕೂಡ ಕನ್ನಡದವರೇ ಎನ್ನಿಸುವಷ್ಟು ಅದ್ಬುತವಾಗಿ ಕನ್ನಡ ಸಿನಿಮಾಗಳಲ್ಲಿಯೂ ನಟಿಸಿ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. 'ಸೆವೆನ್ ಓ ಕ್ಲಾಕ್', 'ಜೋಶ್', 'ಮೈನಾ' ಹಾಗೂ 'ಕೋಟಿಗೊಬ್ಬ2' ಸಿನಿಮಾಗಳ ನಂತರ ಮತ್ತೆ ನಿತ್ಯಾರನ್ನು ಕನ್ನಡದಲ್ಲಿ ಯಾವಾಗ ನೋಡುವುದು ಎನ್ನುತ್ತಿದ್ದ ಅಭಿಮಾನಿಗಳಿಗೆ ಖುಷಿಯಾಗಿವ ಸುದ್ದಿ ಇಲ್ಲಿದೆ.

ನಿತ್ಯಾ ಮೆನನ್ ಮತ್ತೆ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. 'ಪ್ರಾಣ' ಎನ್ನುವ ಸಿನಿಮಾ ತಮಿಳು, ತೆಲುಗು, ಮಲೆಯಾಳಂ ಸೇರಿದಂತೆ ಕನ್ನಡದಲ್ಲಿಯೂ ನಿರ್ಮಾಣವಾಗುತ್ತಿದೆ. ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗಿದ್ದು ನೋಡಿದ ಕೂಡಲೇ 'ಪ್ರಾಣ' ಥ್ರಿಲ್ಲರ್ ಸಿನಿಮಾ ಅನ್ನೋದು ತಿಳಿದು ಬರುತ್ತಿದೆ.

Nithya Menen is acting as heroine in Prana movie

'ಪ್ರಾಣ' ಸಂಪೂರ್ಣ ಸಿನಿಮಾವನ್ನು ಸಿಂಕ್ ಸೌಂಡ್ ನಲ್ಲಿ ಚಿತ್ರೀಕರಿಸಲಾಗುತ್ತಿದ್ದು. ವಿ ಕೆ ಪ್ರಕಾಶ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ರೆಸುಲ್ ಪುಕುಟ್ಟಿ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

Nithya Menen is acting as heroine in Prana movie

ಫಸ್ಟ್ ಬಿಡುಗಡೆ ಮಾಡುವುದರ ಜೊತೆಯಲ್ಲಿ ಶೂಟಿಂಗ್ ಶುರು ಮಾಡಿರುವ ಸಿನಿಮಾತಂಡ ಆದಷ್ಟು ಬೇಗ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಿದ್ದಾರಂತೆ. ಒಟ್ಟಾರೆ ಕನ್ನಡದಲ್ಲಿ ನಿತ್ಯಾ ಮೆನನ್ ಅವರನ್ನು ಮತ್ತೆ ನೋಡಬೇಕು ಎಂಬ ಆಸೆ ಇಟ್ಟುಕೊಂಡವರಿಗೆ ಇದು ಒಳ್ಳೆಯ ಸುದ್ದಿ.

More from Filmibeat

English summary
Malayalam actress Nitya Menen is acting as heroine in Prana movie. The film is being released in Telugu, Tamil, Malayalam and Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X