ನಿವಿನ್ ಪೌಲಿ ನಟನೆಯ ಹೊಸ ಸಿನಿಮಾ ಆರಂಭ
ಕ್ರೈಂ ಥ್ರಿಲ್ಲಿಂಗ್ 'ಮೂಥಾನ್' ಸಿನಿಮಾದಲ್ಲಿ ಕೊನೆಯದಾಗಿ ಮೋಡಿ ಮಾಡಿದ್ದ ಮಲಯಾಳಂ ನಟ ನಿವಿನ್ ಪೌಲಿ ಅವರು ಹೊಸ ಸಿನಿಮಾ ಇಂದು ಮುಹೂರ್ತ ಮಾಡಿಕೊಂಡಿದೆ. 'ಪಡವೆಟ್ಟು' ಹೆಸರಿನಲ್ಲಿ ತಯಾರಾಗುತ್ತಿರುವ ಹೊಸ ಸಿನಿಮಾಗೆ ಇಂದು ಚಾಲನೆ ಸಿಕ್ಕಿದ್ದು, ಮಾಲಿವುಡ್ ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ.
ಚೊಚ್ಚಲ ಬಾರಿ ಆಕ್ಷನ್ ಕಟ್ ಹೇಳುತ್ತಿರುವ ಲಿಜು ಕೃಷ್ಣ ಈ ಚಿತ್ರ ನಿರ್ದೇಶನ ಮಾಡಲಿದ್ದು, ಸನ್ನಿ ವಯನ್ ಬಂಡವಾಳ ಹಾಕುತ್ತಿದ್ದಾರೆ. ಮಂಗಳವಾರ ಅಧಿಕೃತವಾಗಿ ಆರಂಭವಾದ ಈ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಇಡೀ ಚಿತ್ರತಂಡ ಭಾಗಿಯಾಗಿತ್ತು.
ನಿವಿನ್ ಪೌಲಿಗೆ ಜೋಡಿಯಾಗಿ ಅದಿತಿ ಬಾಲನ್ ನಟಿಸುತ್ತಿದ್ದಾರೆ. ಈ ಮೂಲಕ ಮಾಲಿವುಡ್ ಇಂಡಸ್ಟ್ರಿಗೆ ಅಧಿಕೃತ ಎಂಟ್ರಿ ಪಡೆದುಕೊಂಡಿದ್ದಾರೆ. ಈ ಹಿಂದೆ ತಮಿಳಿನ ಅರುವಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಅದಿತಿಯ ಮೂರನೇ ಸಿನಿಮಾ ಪಡವೆಟ್ಟು.

ದೀಪಕ್ ಡಿ ಮೆನನ್ ಅವರು ಛಾಯಾಗ್ರಹಣ ಹೊಂದಿರುವ ಈ ಚಿತ್ರಕ್ಕೆ ಶಫಿಕ್ ಮೊಹಮ್ಮದ್ ಅಲಿ ಸಂಕಲನ ಇದೆ. ಗೋವಿಂದ ವಸುನಾಥ್ ಅವರ ಸಂಗೀತ ಒಳಗೊಂಡಿದೆ. ವಿಜಯ್ ಸೇತುಪತಿ ನಟಿಸಿದ್ದ 96 ಚಿತ್ರಕ್ಕೆ ಇವರೇ ಸಂಗೀತ ನೀಡಿದ್ದರು.
ನಿವಿನ್ ಪೌಲಿ ಮತ್ತು ನಯನತಾರ ನಟಿಸಿದ್ದ ಮೂಥಾನ್ ಸಿನಿಮಾ ವಿಮರ್ಶಾತ್ಮಕವಾಗಿಯೂ ಮತ್ತು ಪ್ರೇಕ್ಷಕರಿಂದಲೂ ಮೆಚ್ಚುಗೆ ಗಳಿಸಿಕೊಂಡಿತ್ತು. ಹಾಗಾಗಿ, ನಿವಿನ್ ಅವರ ಮುಂದಿನ ಚಿತ್ರದ ಮೇಲೆ ಸಹಜವಾಗಿ ನಿರೀಕ್ಷೆ ಹುಟ್ಟಿಕೊಂಡಿದೆ.


Click it and Unblock the Notifications











