For Quick Alerts
  ALLOW NOTIFICATIONS  
  For Daily Alerts

  ನಿವಿನ್ ಪೌಲಿ ನಟನೆಯ ಹೊಸ ಸಿನಿಮಾ ಆರಂಭ

  |

  ಕ್ರೈಂ ಥ್ರಿಲ್ಲಿಂಗ್ 'ಮೂಥಾನ್' ಸಿನಿಮಾದಲ್ಲಿ ಕೊನೆಯದಾಗಿ ಮೋಡಿ ಮಾಡಿದ್ದ ಮಲಯಾಳಂ ನಟ ನಿವಿನ್ ಪೌಲಿ ಅವರು ಹೊಸ ಸಿನಿಮಾ ಇಂದು ಮುಹೂರ್ತ ಮಾಡಿಕೊಂಡಿದೆ. 'ಪಡವೆಟ್ಟು' ಹೆಸರಿನಲ್ಲಿ ತಯಾರಾಗುತ್ತಿರುವ ಹೊಸ ಸಿನಿಮಾಗೆ ಇಂದು ಚಾಲನೆ ಸಿಕ್ಕಿದ್ದು, ಮಾಲಿವುಡ್ ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ.

  ಚೊಚ್ಚಲ ಬಾರಿ ಆಕ್ಷನ್ ಕಟ್ ಹೇಳುತ್ತಿರುವ ಲಿಜು ಕೃಷ್ಣ ಈ ಚಿತ್ರ ನಿರ್ದೇಶನ ಮಾಡಲಿದ್ದು, ಸನ್ನಿ ವಯನ್ ಬಂಡವಾಳ ಹಾಕುತ್ತಿದ್ದಾರೆ. ಮಂಗಳವಾರ ಅಧಿಕೃತವಾಗಿ ಆರಂಭವಾದ ಈ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಇಡೀ ಚಿತ್ರತಂಡ ಭಾಗಿಯಾಗಿತ್ತು.

  ಮಮ್ಮುಟ್ಟಿ ಚಿತ್ರದಲ್ಲಿ ಚೊಚ್ಚಲ ಬಾರಿಗೆ ಮಂಜು ವಾರಿಯರ್ಮಮ್ಮುಟ್ಟಿ ಚಿತ್ರದಲ್ಲಿ ಚೊಚ್ಚಲ ಬಾರಿಗೆ ಮಂಜು ವಾರಿಯರ್

  ನಿವಿನ್ ಪೌಲಿಗೆ ಜೋಡಿಯಾಗಿ ಅದಿತಿ ಬಾಲನ್ ನಟಿಸುತ್ತಿದ್ದಾರೆ. ಈ ಮೂಲಕ ಮಾಲಿವುಡ್ ಇಂಡಸ್ಟ್ರಿಗೆ ಅಧಿಕೃತ ಎಂಟ್ರಿ ಪಡೆದುಕೊಂಡಿದ್ದಾರೆ. ಈ ಹಿಂದೆ ತಮಿಳಿನ ಅರುವಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಅದಿತಿಯ ಮೂರನೇ ಸಿನಿಮಾ ಪಡವೆಟ್ಟು.

   ನೆಗಿಟಿವ್ ಪಾತ್ರದಲ್ಲಿ ದುಲ್ಕರ್ ಸಲ್ಮಾನ್: ರೆಟ್ರೋ ಸ್ಟೈಲ್ ವೈರಲ್ ನೆಗಿಟಿವ್ ಪಾತ್ರದಲ್ಲಿ ದುಲ್ಕರ್ ಸಲ್ಮಾನ್: ರೆಟ್ರೋ ಸ್ಟೈಲ್ ವೈರಲ್

  ದೀಪಕ್ ಡಿ ಮೆನನ್ ಅವರು ಛಾಯಾಗ್ರಹಣ ಹೊಂದಿರುವ ಈ ಚಿತ್ರಕ್ಕೆ ಶಫಿಕ್ ಮೊಹಮ್ಮದ್ ಅಲಿ ಸಂಕಲನ ಇದೆ. ಗೋವಿಂದ ವಸುನಾಥ್ ಅವರ ಸಂಗೀತ ಒಳಗೊಂಡಿದೆ. ವಿಜಯ್ ಸೇತುಪತಿ ನಟಿಸಿದ್ದ 96 ಚಿತ್ರಕ್ಕೆ ಇವರೇ ಸಂಗೀತ ನೀಡಿದ್ದರು.

  ನಿವಿನ್ ಪೌಲಿ ಮತ್ತು ನಯನತಾರ ನಟಿಸಿದ್ದ ಮೂಥಾನ್ ಸಿನಿಮಾ ವಿಮರ್ಶಾತ್ಮಕವಾಗಿಯೂ ಮತ್ತು ಪ್ರೇಕ್ಷಕರಿಂದಲೂ ಮೆಚ್ಚುಗೆ ಗಳಿಸಿಕೊಂಡಿತ್ತು. ಹಾಗಾಗಿ, ನಿವಿನ್ ಅವರ ಮುಂದಿನ ಚಿತ್ರದ ಮೇಲೆ ಸಹಜವಾಗಿ ನಿರೀಕ್ಷೆ ಹುಟ್ಟಿಕೊಂಡಿದೆ.

  English summary
  Malayalam Actor Nivin Pauly and aditi balan starrer new movie Padavettu launch today.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X