For Quick Alerts
  ALLOW NOTIFICATIONS  
  For Daily Alerts

  'ನಿಜಾಲ್' ಚಿತ್ರತಂಡದ ಜೊತೆ ಬರ್ತಡೇ ಆಚರಿಸಿಕೊಂಡ ನಯನತಾರ

  |

  'ಲೇಡಿ ಸೂಪರ್ ಸ್ಟಾರ್' ನಯನತಾರಾ ನವೆಂಬರ್ 18 ರಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು, ಸೆಲೆಬ್ರಿಟಿಗಳು ನೆಚ್ಚಿನ ನಟಿಯ ಜನ್ಮದಿನಕ್ಕೆ ಶುಭಕೋರಿದ್ದರು.

  ಇದೀಗ, ನಯನತಾರಾ ನಟಿಸುತ್ತಿರುವ ಮಲಯಾಳಂ ಚಿತ್ರದ ಸೆಟ್‌ನಲ್ಲಿ ಹುಟ್ಟುಹಬ್ಬ ಸೆಲೆಬ್ರೆಟ್ ಮಾಡಿದ್ದಾರೆ. ಈ ಫೋಟೋಗಳು ಈಗ ವೈರಲ್ ಆಗಿದೆ.

  ನಯನತಾರಾ ಹುಟ್ಟುಹಬ್ಬಕ್ಕೆ ಬಾಯ್‌ಫ್ರೆಂಡ್ ವಿಘ್ನೇಶ್ ಬಂದಿಲ್ಲವೇಕೆ?ನಯನತಾರಾ ಹುಟ್ಟುಹಬ್ಬಕ್ಕೆ ಬಾಯ್‌ಫ್ರೆಂಡ್ ವಿಘ್ನೇಶ್ ಬಂದಿಲ್ಲವೇಕೆ?

  ಮಲಯಾಳಂ ಭಾಷೆಯಲ್ಲಿ ತಯಾರಾಗುತ್ತಿರುವ ನಿಜಾಲ್ ಚಿತ್ರದಲ್ಲಿ ನಯನತಾರಾ ಕಾಣಿಸಿಕೊಳ್ಳುತ್ತಿದ್ದು, ಶೂಟಿಂಗ್ ಸೆಟ್‌ನಲ್ಲಿ ಕಲಾವಿದರು, ತಂತ್ರಜ್ಞರು ಕೇಕ್ ಕತ್ತರಿಸುವ ಮೂಲಕ ನಯನತಾರಾ ಜನಮದಿನ ಸಂಭ್ರಮಿಸಿದ್ದಾರೆ.

  ನಯನತಾರಾ ಹುಟ್ಟುಹಬ್ಬವನ್ನು ಕುಟುಂಬ ಸದಸ್ಯರು ಅದ್ಧೂರಿಯಾಗಿ ಆಚರಿಸಿದ್ದರು. ಈ ಸಂಭ್ರಮದಲ್ಲಿ ಬಾಯ್‌ಫ್ರೆಂಡ್‌ ವಿಘ್ನೇಶ್ ಶಿವನ್ ಭಾಗಿಯಾಗಿರಲಿಲ್ಲ. ಆದರೂ, ಬರ್ತಡೇ ಫೋಟೋಗಳನ್ನು ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದರು.

  ಅಂದ್ಹಾಗೆ, ನಯನತಾರಾ ಹುಟ್ಟುಹಬ್ಬದ ಪ್ರಯುಕ್ತ ನಿಜಾಲ್ ಚಿತ್ರತಂಡ ಪೋಸ್ಟರ್‌ವೊಂದನ್ನು ಬಿಡುಗಡೆ ಮಾಡಿತ್ತು. ರಾಜ್ಯ ಪ್ರಶಸ್ತಿ ನಿರ್ದೇಶಕ ಅಪ್ಪು ಭಟ್ಟತಿರಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ರಸ್ತುತ ಎರ್ನಾಕುಲಂನಲ್ಲಿ ಚಿತ್ರೀಕರಣ ಸಾಗುತ್ತಿದೆ. ಕುಂಚಾಕೊ ಬೊಬನ್ ಈ ಚಿತ್ರದಲ್ಲಿ ನಾಯಕರಾಗಿದ್ದಾರೆ.

  Act1978 : ಅಲೆದು ಅಲೆದು ಸಾಕಾಗಿ ಸರ್ಕಾರಿ ಕಛೇರಿಗೆ ಹಾವು ತಂದು ಬಿಟ್ಟಿದ್ರು | Filmibeat Kannada

  ಇನ್ನು ಹುಟ್ಟುಹಬ್ಬದ ವಿಶೇಷವಾಗಿ ನಯನತಾರ ನಟಿಸುತ್ತಿರುವ 'ನೆಟ್ರಿಕಣ್' ಚಿತ್ರದ ಟೀಸರ್ ರಿಲೀಸ್ ಆಗಿದೆ. ಈ ಚಿತ್ರವನ್ನು ವಿಘ್ನೇಶ್ ನಿರ್ಮಿಸುತ್ತಿದ್ದಾರೆ. ಇನ್ನು ವಿಘ್ನೇಶ್ ನಿರ್ದೇಶನದ ಚಿತ್ರದಲ್ಲಿ ನಯನತಾರಾ, ಸಮಂತಾ ಹಾಗೂ ವಿಜಯ್ ಸೇತುಪತಿ ನಟಿಸುತ್ತಿದ್ದಾರೆ.

  English summary
  Nizhal movie team celebrates Nayanthara's birthday on the sets in Kochi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X