L2 Empuraan Box Office Collection Day 1 ; ಮೋಹನ್ ಲಾಲ್ ಸಿನಿಮಾ ಕರ್ನಾಟಕದಲ್ಲಿ ಗಳಿಸಿದ್ದೆಷ್ಟು ?

ಮೋಹನ್ ಲಾಲ್ ಯಾರಿಗೆ ತಾನೇ ಗೊತ್ತಿಲ್ಲ..? ದೇವರು ನಾಡು ಎಂದೆ ಕರೆಯಲ್ಪಡುವ ಕೇರಳದ ಸೂಪರ್ ಸ್ಟಾರ್. ನಾಲ್ಕು ದಶಕಗಳ ವೃತ್ತಿ ಬದುಕಿನಲ್ಲಿ ಇಲ್ಲಿಯವರೆಗೆ ಮುನ್ನೂರಕ್ಕೂ ಅಧಿಕ ಸಿನಿಮಾ ಮಾಡಿರುವ ಮೋಹನ್ ಲಾಲ್ ಅವರನ್ನು ಅವರ ಅಭಿಮಾನಿಗಳು ಸೇರಿದಂತೆ ಭಾರತೀಯ ಚಿತ್ರರಂಗ ಲಾಲೆಟ್ಟನ್ ಎಂಬ ಹೆಸರಿಂದನೇ ಕರೆಯುತ್ತೆ. ಜಯಘೋಷ ಮೊಳಗಿಸುತ್ತೆ.

ಇಂಥಾ ಮೋಹನ್ ಲಾಲ್ ಅಭಿನಯದ ಎಂಪುರಾನ್ ಚಿತ್ರ ನಿನ್ನೆ ಬಿಡುಗಡೆಯಾಗಿದೆ. ನಿರೀಕ್ಷೆಯಂತೆ ಬಾಕ್ಸಾಫೀಸ್‌ನಲ್ಲಿ ಹಣವನ್ನು ಕೂಡ ದೋಚಿದೆ. ಚಿತ್ರದ ಗಳಿಕೆಯ ಮೇಲೆ ಹದ್ದಿನ ಕಣ್ಣಿಡುವ ಸ್ಯಾಕ್ನಿಲ್ಕ್ ವೆಬ್ ಸೈಟ್ ಪ್ರಕಾರ ನಿನ್ನೆ ಎಂಪುರಾನ್ 22 ಕೋಟಿ ಹಣವನ್ನು ಗಳಿಸಿದೆ.

On Day 1 L2 Empuraan starring Mohanlal had a strong box office debut earning Rs 22 crore

ಇನ್ನು, ಎಂಪುರಾನ್ ಕೇವಲ ಮಲಯಾಳಂ ಭಾಷೆಯಲ್ಲಿ ಮಾತ್ರ ಬಿಡುಗಡೆಯಾಗಿಲ್ಲ. ಈ ಚಿತ್ರವನ್ನು ಬೇರೆ ಭಾಷೆಗಳಿಗೆ ಕೂಡ ಡಬ್ ಮಾಡಲಾಗಿದೆ. ಪ್ಯಾನ್ ಇಂಡಿಯಾ ಕಾನ್ಸೆಪ್ಟ್‌ನಡಿ ಏಕಕಾಲದಲ್ಲಿ ಬಿಡುಗಡೆ ಕೂಡ ಮಾಡಲಾಗಿದೆ. ಆದರೆ, ತವರಿನಲ್ಲಿ ಎಂಪುರಾನ್‌ ಚಿತ್ರಕ್ಕೆ ಸ್ವಾಗತ ಬೇರೆ ಕಡೆ ಸಿಕ್ಕಿಲ್ಲ. ಕೇರಳದಲ್ಲಿಯೇ ಎಂಪುರಾನ್ 19 ಕೋಟಿಯನ್ನು ಗಳಿಸಿದ್ದರೆ, ಆಂಧ್ರಪ್ರದೇಶದಲ್ಲಿ ಚಿತ್ರ 1.2 ಕೋಟಿಯನ್ನು ಗಳಿಸಿದೆ. ತಮಿಳುನಾಡಿನಲ್ಲಿ 80 ಲಕ್ಷವನ್ನು ಚಿತ್ರ ಗಳಿಸಿದ್ದರೆ ಹಿಂದಿ ಮಾರುಕಟ್ಟೆಯಲ್ಲಿ ಈ ಚಿತ್ರ 50 ಲಕ್ಷ ಹಣವನ್ನು ದೋಚಿದೆ.

ಇನ್ನು, ಮಲಯಾಳಂ ಸಿನಿಮಾಗಳಿಗೆ ಕರ್ನಾಟಕದಲ್ಲಿ ಅದರಲ್ಲಿಯೂ ವಿಶೇಷವಾಗಿ ಬೆಂಗಳೂರಿನಲ್ಲಿ ರತ್ನಗಂಬಳಿ ಹಾಕಿ ಸ್ವಾಗತಿಸುವ ಕಾರ್ಯಕ್ರಮ ಭರದಿಂದ ನಡೆಯುತ್ತಿದೆ. ಈ ಕಾರ್ಯಕ್ರಮದಡಿಯಲ್ಲಿಯೇ ಎಂಪುರಾನ್ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ. ಕೇರಳದ ರಾಜಧಾನಿ ತಿರುವುನಂತಪುರಂನಲ್ಲಿಯೇ ಸಿಗದ ಸ್ಕ್ರೀನ್‌ಗಳು ಎಂಪುರಾನ್ ಚಿತ್ರಕ್ಕೆ ಬೆಂಗಳೂರಿನಲ್ಲಿ ಸಿಕ್ಕಿವೆ. ತಿರುವುನಂತಪುರಂನಲ್ಲಿ ನಿನ್ನೆ ಎಂಪುರಾನ್ 367 ಪ್ರದರ್ಶನಗಳನ್ನು ಕಂಡಿದ್ದರೆ ಕೊಚ್ಚಿಯಲ್ಲಿ 362 ಪ್ರದರ್ಶನಗಳನ್ನು ಕಂಡಿದೆ.

ಆದರೆ ಬೆಂಗಳೂರಿನಲ್ಲಿ ಎಂಪುರಾನ್‌ ಚಿತ್ರವನ್ನು ನಿನ್ನೆ 820 ಬಾರಿ ಪ್ರದರ್ಶನ ಮಾಡಲಾಗಿದೆ. ಶೇಕಡಾ 43.25% ಚಿತ್ರಮಂದಿರದಲ್ಲಿ ಅಕ್ಯುಪೆನ್ಸಿ ಕಂಡು ಬಂದಿದೆ. ಸ್ಯಾಕ್ನಿಲ್ಕ್ ವೆಬ್ ಸೈಟ್ ನೀಡಿರುವ ಮಾಹಿತಿಯ ಪ್ರಕಾರ ಚಿತ್ರ ನಿನ್ನೆ ಕರ್ನಾಟಕದಲ್ಲಿ ಎಂಪುರಾನ್ ಚಿತ್ರದ ಕನ್ನಡ ಆವೃತ್ತಿ 5 ಲಕ್ಷ ಹಣವನ್ನು ಗಳಿಸಿದೆ.

ಮೊದಲ ದಿನದ ಗಳಿಕೆಯ ವಿವರ

ಭಾಷೆ ಗಳಿಕೆ

ಮಲಯಾಳಂ - ₹19 ಕೋಟಿ

ತೆಲುಗು - ₹1.2 ಕೋಟಿ

ತಮಿಳು - ₹80 ಲಕ್ಷ

ಹಿಂದಿ - ₹50 ಲಕ್ಷ

ಕನ್ನಡ - ₹05 ಲಕ್ಷ

ಒಟ್ಟು ಗಳಿಕೆ - 22 ಕೋಟಿ

ಅಂದ್ಹಾಗೇ ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ ತಮ್ಮ ಕಥೆಗಳ ಮೂಲಕ ಬೇರೆ ಭಾಷೆಯವರನ್ನು ನಿಬ್ಬೇರಗಾಗಿಸುವ ಮಲಯಾಳಂ ಚಿತ್ರರಂಗದವರು ಇನ್ನೂ ₹300 ಕೋಟಿಯ ಗಡಿಯನ್ನು ತಲುಪಲು ಸಾಧ್ಯವಾಗಿಲ್ಲ. 2024ರಲ್ಲಿ ಬಿಡುಗಡೆಯಾದ ಮಂಜುಮ್ಮೆಲ್ ಬಾಯ್ಸ್ ಚಿತ್ರವನ್ನು ಹೊರತು ಪಡಿಸಿ ಬೇರೆ ಯಾವ ಮಲಯಾಳಂ ಚಿತ್ರ ಕೂಡ ₹200 ಕೋಟಿ ಹಣವನ್ನು ಗಳಿಸಿಲ್ಲ. ಹೀಗಾಗಿ L 2 ; ಎಂಪುರಾನ್ ಚಿತ್ರದ ಮೇಲೀಗ ಎಲ್ಲರ ಕಣ್ಣಿದೆ. ಮೋಹನ್ ಲಾಲ್ ಮತ್ತು ಪೃಥ್ವಿರಾಜ್ ಸುಕುಮಾರನ್ ಮಲಯಾಳಂ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸುತ್ತಾರಾ ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತಿದೆ. ಮೊದಲ ದಿನ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ಮತ್ತು ಮೊದಲ ದಿನದ ಗಳಿಕೆಯಿಂದ ಚಿತ್ರ ₹200 ಕೋಟಿಯ ಗಡಿಯನ್ನು ದಾಟಬಹುದು ಎಂಬ ಭರವಸೆಯ ಗೀತೆಯನ್ನು ಮಲಯಾಳಂ ಚಿತ್ರರಂಗ ಸದ್ಯ ಹಾಡುತ್ತಿದೆ. ಇನ್ನು ಎಂಪುರಾನ್ ಚಿತ್ರದ ಮೊದಲ ಭಾಗ ಬಾಕ್ಸಾಫೀಸ್‌ನಲ್ಲಿ ₹100 ಕೋಟಿಗೂ ಅಧಿಕ ಹಣ ಗಳಿಸಿತ್ತು. ಈ ದಾಖಲೆಯನ್ನು ಎಂಪುರಾನ್ ಅನಾಯಾಸವಾಗಿ ಮುರಿಯಲಿದೆ ಎನ್ನುವ ಮಾತು ಸದ್ಯ ಮಲಯಾಳಂ ಚಿತ್ರರಂಗದಲ್ಲಿ ಕೇಳಿ ಬರುತ್ತಿದೆ.

Disclaimer ; ಬಾಕ್ಸ್ ಆಫೀಸ್ ನ ಈ ಅಂಕಿ ಅಂಶಗಳನ್ನು ಸ್ಯಾಕ್ನಿಲ್ಕ್ ವೆಬ್ ಸೈಟ್ ನಿಂದ ಸಂಗ್ರಹಿಸಲಾಗಿದೆ. ಫಿಲ್ಮಿಬೀಟ್ ಕನ್ನಡ ಈ ಡೇಟಾದ ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.

More from Filmibeat

Read more about: mohan lal box office mollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X