For Quick Alerts
  ALLOW NOTIFICATIONS  
  For Daily Alerts

  ಆಸ್ಕರ್ ಪ್ರಶಸ್ತಿ ರೇಸ್‌ನಿಂದ ಹೊರಬಿದ್ದ ಭಾರತದ 'ಜಲ್ಲಿಕಟ್ಟು' ಸಿನಿಮಾ

  |

  ವಿಮರ್ಶಾತ್ಮಕವಾಗಿ ಭಾರಿ ಮೆಚ್ಚುಗೆ ಗಳಿಸಿಕೊಂಡಿದ್ದ ಮಲಯಾಳಂ ಭಾಷೆಯ 'ಜಲ್ಲಿಕಟ್ಟು' ಸಿನಿಮಾ ಆಸ್ಕರ್ ಪ್ರಶಸ್ತಿ ರೇಸ್‌ನಿಂದ ಹೊರಬಿದ್ದಿದೆ. 2021ನೇ ಸಾಲಿನ ಆಸ್ಕರ್ ಪ್ರಶಸ್ತಿ ಸುತ್ತಿಗೆ ಭಾರತದಿಂದ ಅಧಿಕೃತವಾಗಿ ಜಲ್ಲಿಕಟ್ಟು ಸಿನಿಮಾ ಆಯ್ಕೆಯಾಗಿತ್ತು. ಆದರೆ, ಆಸ್ಕರ್ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ಜಲ್ಲಿಕಟ್ಟು ವಿಫಲವಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

  ಆಸ್ಕರ್ ಸಮಿತಿ 2021ನೇ ಸಾಲಿನ ವಿದೇಶಿ ಭಾಷೆ ವಿಭಾಗದ ಸಿನಿಮಾಗಳ ಅಂತಿಮ ಪಟ್ಟಿಯನ್ನು ಪ್ರಕಟ ಮಾಡಿದ್ದು, 15 ಚಿತ್ರಗಳ ಪೈಕಿ ಜಲ್ಲಿಕಟ್ಟು ಸ್ಥಾನ ಪಡೆದುಕೊಂಡಿಲ್ಲ. ಜಲ್ಲಿಕಟ್ಟು ಸಿನಿಮಾ ವಿದೇಶಿ ಭಾಷಾ ಸಿನಿಮಾ ವಿಭಾಗದಲ್ಲಿ ಭಾರತದಿಂದ ಆಯ್ಕೆಯಾಗಿತ್ತು.

  Big News: ಆಸ್ಕರ್‌ ಸ್ಪರ್ಧೆಗೆ ಆಯ್ಕೆಯಾದ ದಕ್ಷಿಣ ಭಾರತದ ಸಿನಿಮಾBig News: ಆಸ್ಕರ್‌ ಸ್ಪರ್ಧೆಗೆ ಆಯ್ಕೆಯಾದ ದಕ್ಷಿಣ ಭಾರತದ ಸಿನಿಮಾ

  ಭಾರತದಿಂದ ಆಸ್ಕರ್ ರೇಸ್‌ನಲ್ಲಿದ್ದ 27 ಚಿತ್ರಗಳನ್ನು ಹಿಂದಿಕ್ಕಿ ಜಲ್ಲಿಕಟ್ಟು ಟಿಕೆಟ್ ಪಡೆದುಕೊಂಡಿತ್ತು. 'ಶಕುಂತಲಾ ದೇವಿ, ಚಪಾಕ್, ಗುಲಾಬೊ ಸಿತಾಬೊ, ಚಲಾಂಗ್, ದಿ ಸ್ಕೈ ಈಸ್ ಪಿಂಕ್ ಸೇರಿದಂತೆ ಹಲವು ಸಿನಿಮಾಗಳನ್ನು ಹಿಂದಿಕ್ಕಿದ್ದ 'ಜಲ್ಲಿಕಟ್ಟು' ಸಿನಿಮಾ ಆಸ್ಕರ್‌ಗೆ ಹೋಗಿತ್ತು. ಆದರೆ, ಪ್ರಶಸ್ತಿ ಸುತ್ತಿನಲ್ಲಿ ಹಿಂದೆ ಬೀಳುವ ಮೂಲಕ ಭಾರತೀಯರ ನಿರಾಸೆಗೆ ಕಾರಣವಾಗಿದೆ.

  ಸೆಪ್ಟೆಂಬರ್ 2019 ರಂದು ಬಿಡುಗಡೆಯಾದ ಜಲ್ಲಿಕಟ್ಟು ಬಹಳ ವಿಭಿನ್ನವಾದ ಕತೆ ಹೊಂದಿದ್ದು, ಮಹತ್ವದ ಸಂದೇಶವನ್ನು ಕಟ್ಟಿಕೊಡುವ ಸಿನಿಮಾ ಆಗಿದೆ. ಸಿನಿಮಾವನ್ನು ಲಿಜೊ ಜೋಸ್ ಫೆಲ್ಲಿಸೆರಿ ನಿರ್ದೇಶಿಸಿದ್ದರು.

  ಟಾಪ್ ಟಾಪ್ ಟಾಪ್ ಟಕ್ಕರ್ ನಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ | Top Tucker /Filmibeat kannada

  ಅಂತಿಮವಾಗಿ ಆಸ್ಕರ್‌ಗೆ ನಾಮನಿರ್ದೇಶನವಾಗುವ ಐದು ಚಿತ್ರಗಳು ಯಾವುದು ಎಂದು ಮಾರ್ಚ್ 5 ರಂದು ಪ್ರಕಟಿಸಲಾಗುವುದು ಎಂದು ಆಸ್ಕರ್ ಅಕಾಡೆಮಿ ತಿಳಿಸಿದೆ.

  English summary
  Oscars 2021: India's Official Entry Jallikattu Fails To Make the cut in International Film Shortlist.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X