ನನ್ನ ಹುಚ್ಚುತನದಿಂದ ಅವನ ಪ್ರೀತಿಯನ್ನು ಕಳೆದುಕೊಂಡೆ, ಮಿಲನಾ ನಾಯಕಿ ಪಾರ್ವತಿ ಮೆನನ್ ಕಣ್ಣೀರು..!
ಪ್ರೀತಿಯ ಸುಖದ ಕ್ಷಣಗಳನ್ನು ಹೇಗೆ ಕೆಲವರು ಗುನುಗುತ್ತಿರುತ್ತಾರೋ ಹಾಗೇಯೇ ನೋವನ್ನು ಕೂಡ ಪದೇ ಪದೇ ಮನದೊಳಗೆ ಅನುಭವಿಸುತ್ತಿರುತ್ತಾರೆ. ಆಗಾಗ ಪ್ರೀತಿಯಲ್ಲಿ ಬೀಳುವುದು ಮತ್ತು ಪ್ರೀತಿಯಿಂದ ದೂರವಾಗುವುದು ಎಲ್ಲ ಸಾಮಾನ್ಯ ಈಗ. ಅನುಭವಗಳ ಮೂಲಕ ಪಾಠ ಕಲಿತರೂ ಪ್ರೀತಿಯ ವಿಷಯದಲ್ಲಿ ಮಾತ್ರ ತುಂಬಾ ಹರ್ಟ್ ಆಗಿ ಬಿಡುತ್ತಾರೆ. ಈ ನೋವು ಕೆಲವೊಮ್ಮೆ ಜೀವನಪೂರ್ತಿ ಕಾಡುತ್ತೆ. ಉದಾಹರಣೆಗೆ ಪಾರ್ವತಿ ಮೆನನ್.
ಹೌದು, ಪಾರ್ವತಿ ಮೆನನ್ ಅಲಿಯಾಸ್ ಪಾರ್ವತಿ ತಿರುವೋತ್ತು .. ಪುನೀತ್ ರಾಜ್ ಕುಮಾರ್ ಅಭಿನಯದ ಮಿಲನ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಪಾರ್ವತಿ ಆ ನಂತರ ಮಳೆ ಬರಲಿ ಮಂಜೂ ಇರಲಿ.. ಪೃಥ್ವಿ.. ಮತ್ತು ಅಂದರ್ ಬಾಹರ್ ಚಿತ್ರಗಳಲ್ಲಿ ನಟಿಸಿದರು. ಕನ್ನಡಿಗರ ಹೃದಯವನ್ನೂ ಗೆದ್ದರು. ಇನ್ನು. ಮಾಲಿವುಡ್‌ನ ಈ ಬಟ್ಟಲುಗಣ್ಣಿನ ಚೆಲುವೆ ಕೇವಲ ತಮ್ಮ ಅಭಿನಯದಿಂದ ಮಾತ್ರ ಹೆಸರುವಾಸಿಯಾಗಿಲ್ಲ. ಬದಲಿಗೆ ತಮ್ಮ ನೇರ ಹಾಗೂ ದಿಟ್ಟ ನುಡಿಗಳಿಂದ ಕೂಡ ಹೆಸರುವಾಸಿಯಾದವರು ಇವರು. ಇಂಥಾ ಪಾರ್ವತಿ ತಮ್ಮ ಪ್ರೇಮ ಕಥೆ ಮತ್ತು ವ್ಯಥೆಯನ್ನು ಹಂಚಿಕೊಂಡಿದ್ದಾರೆ. ಚಿನ್ನದಂತಹ ಹುಡುಗನನ್ನು ಕಳೆದುಕೊಂಡಿದ್ದಕ್ಕೆ ಇವತ್ತು ಕೂಡ ಪಶ್ಚಾತಾಪ ಪಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಹೌದು, ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಪಾರ್ವತಿ ನಾನು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ದಿನಗಳವು. ಆ ಸಮಯದಲ್ಲಿ ನನ್ನ ಬದುಕಿನಲ್ಲಿ ಒಬ್ಬ ಅತ್ಯದ್ಭುತ ವ್ಯಕ್ತಿಯ ಪ್ರವೇಶವಾಗಿತ್ತು, ನಾವು ಇಬ್ಬರು ಪ್ರೀತಿಸುತ್ತಿದ್ದೇವು ಎಂದು ಹೇಳಿದ್ದಾರೆ. ಮುಂದುವರೆದು ಆದರೆ ನನಗೆ ಆಗ ಚಿಕ್ಕ ಚಿಕ್ಕ ವಿಚಾರಕ್ಕೆ ಕೋಪ ಬರುತ್ತಿತ್ತು ಹಸಿವು ಆದರೂ ಸಾಕು ಪಿತ್ತ ನೆತ್ತಿಗೇರುತ್ತಿತ್ತು, ನಮ್ಮ ನಡುವೆ ಇದ್ದ ಸುಂದರವಾದ ಸಂಬಂಧ ಹಾಳಾಗಲು ಇಷ್ಟೇ ಸಾಕಿತ್ತು ಎಂದಿರುವ ಪಾರ್ವತಿ ತಿರುವೋತ್ತು ಹಲವು ವರ್ಷಗಳ ನಂತರ ನಾನು ಆ ವ್ಯಕ್ತಿಯನ್ನು ಭೇಟಿಯಾದೆ. ನನ್ನ ವರ್ತನೆಗಳಿಗೆ ಅವರಲ್ಲಿ ಕ್ಷಮೆಯನ್ನು ಕೇಳಿದೆ ಎಂದು ಹೇಳಿದ್ದಾರೆ. ನನ್ನ ಬದುಕಿನ ಈ ಅನುಭವ ನನಗೆ ಒಳ್ಳೆಯ ಪಾಠವನ್ನು ಕಲಿಸಿದೆ ಎಂದು ಹೇಳಿದ್ದಾರೆ.
ಇನ್ನು ಇದೇ ಸಮಯದಲ್ಲಿ ಕೇವಲ ಒಂದು ಬಾರಿ ಮಾತ್ರ ಅಲ್ಲ ಹಲವು ಬಾರಿ ನಾನು ಲವ್ ಸಬ್ಜೆಕ್ಟ್‌ನಲ್ಲಿ ಫೇಲ್ ಆಗಿದ್ದೇನೆ ಎಂದಿರುವ ಪಾರ್ವತಿ ನಾನು ಇಲ್ಲಿಯವರೆಗೆ ಯಾವುದೇ ಹೀರೋ ಅಥವಾ ಡೈರೆಕ್ಟರ್ ಜೊತೆ ಸುತ್ತಾಡಿಲ್ಲ ಯಾರನ್ನು ನಾನು ಪ್ರೀತಿಸಿಲ್ಲ ಎಂದಿದ್ದಾರೆ. ಇನ್ನು ಇದೇ ಸಮಯದಲ್ಲಿ ಚಿತ್ರರಂಗದಲ್ಲಿರುವವರ ಮೇಲೆ ನನಗೆ ಪ್ರೇಮಾಂಕುರವಾಗಿಯೇ ಇಲ್ಲ ಅಂತೇನು ಇಲ್ಲ ಆಗಿತ್ತು ಆದರೆ ಅವರು ತೆರೆಯ ಹಿಂದೆ ಕೆಲಸ ಮಾಡುವ ತಂತ್ರಜ್ಞರಾಗಿದ್ದರು ಎಂದು ಕೂಡ ಪಾರ್ವತಿ ತಿರುವೋತ್ತು ಹೇಳಿದ್ದಾರೆ.
ಕಳೆದ ಮೂರು ನಾಲ್ಕು ವರ್ಷಗಳಿಂದ ನಾನು ಒಂಟಿಯಾಗಿದ್ದೇನೆ ಎಂದು ಹೇಳಿರುವ ಪಾರ್ವತಿ ಈಗಲೂ ನನ್ನ ಮಾಜಿ ಬಾಯ್‌ಫ್ರೆಂಡ್‌ಗಳ ಜೊತೆ ಸಂಪರ್ಕದಲ್ಲಿದ್ದೇನೆ, ಅವರ ಜೊತೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ಸಂಬಂಧದಲ್ಲಿ ಆ ಆತ್ಮೀಯತೆ ಇರಿದಿದ್ದರೂ ಯಾವಾಗಲಾದರೂ ಒಮ್ಮೆ ಕರೆ ಮಾಡಿ ಹೇಗಿದ್ದೀರಾ ಎಂದು ಕೇಳುವುದರಲ್ಲಿ ಯಾವ ತಪ್ಪಿಲ್ಲ ಎಂದಿರುವ ಪಾರ್ವತಿ ಒಂದು ಹಂತದಲ್ಲಿ ನಾವು ಪರಸ್ಪರ ಪ್ರೀತಿ ಮಾಡುತ್ತಿದ್ದೇವು, ಜೊತೆಯಾಗಿ ಬದುಕಲು ಬಯಸಿದ್ದೇವು, ಹೀಗಾಗಿ ಅವರಿಗೆ ಸಂತೋಷವನ್ನು ಸದಾ ನಾನು ಬಯಸುವುದರಲ್ಲಿ ತಪ್ಪಿಲ್ಲ ಎಂದು ಹೇಳಿದ್ದಾರೆ.
ಇನ್ನು ಡೇಟಿಂಗ್ ಆಪ್ ಬಗ್ಗೆ ಕೂಡ ಮಾತನಾಡಿರುವ ಪಾರ್ವತಿ ನಾನು ಡೇಟಿಂಗ್ ಆಪ್ ನಲ್ಲಿದ್ದೇನೆ, ಗೆಳತಿಯ ಮೂಲಕ ಈ ಜಗತ್ತಿನ ಪರಿಚಯ ನನಗಾಗಾಯಿತು ಎಂದು ಹೇಳಿದ್ದಾರೆ. ಟಿಂಡರ್, ಬಂಬಲ್ ಮತ್ತು ರಾಯಾ ಅಂತಹ ಅಪ್ಲಿಕೇಶನ್ ಗಳಲ್ಲಿ ನನ್ನ ಪ್ರೊಪೈಲ್ ಇದೆ ಎಂದು ಹೇಳಿರುವ ಪಾರ್ವತಿ ಆ ನಂತರ ಸಡನ್ ಜ್ಞಾನೋದಯವಾದಂತೆ ಆಗಿ ಅಲ್ಲಿ ನಾನು ಹೆಚ್ಚಾಗಿ ಆಕ್ಟಿವ್ ಇಲ್ಲ ಎಂದು ಹೇಳಿದ್ದಾರೆ.


Click it and Unblock the Notifications











