ಮಲಯಾಳಂನಲ್ಲಿ ಪಾತ್ರಕ್ಕಾಗಿ ಪಲ್ಲಂಗ ಸಂಸ್ಕ್ರತಿ, ನಮ್ಮ ಮಧ್ಯೆ ಎಲ್ಲವೂ ಸರಿ ಇದೆ ಎಂದ ಮಿಲನಾ ನಾಯಕಿ ಪಾರ್ವತಿ ಮೆನನ್..!
ಸಿನಿಮಾ ಜಗತ್ತಿನಲ್ಲಿ ನಡೆಯುವ ಕಾಸ್ಟಿಂಗ್ ಕೌಚ್ ಬಗ್ಗೆ ಅನೇಕ ನಟಿಯರು ಬಾಯಿ ಬಿಟ್ಟಿದ್ದಾರೆ. ಸಾಕಷ್ಟು ಸಹ ನಟರು, ನಿರ್ಮಾಪಕರ ಮಾನ ಮರ್ಯಾದೆಯನ್ನು ಮೂರು ಕಾಸಿಗೆ ಬಾಳದಂತೆ ಹರಾಜು ಹಾಕಿದ್ದಾರೆ.
ಆದರೂ ಕೂಡ ನಾಯಕಿಯರು ನಮಗೆ ಅನ್ಯಾಯವಾಗಿದೆ ಎಂದು ಹೇಳಿಕೊಂಡಾಗ ಹಲವರು ನಂಬುವುದಿಲ್ಲ.ಬದಲಿಗೆ ಚಿತ್ರರಂಗದ ಬಗ್ಗೆ ಕೆಟ್ಟದಾಗಿ ಮಾತನಾಡಿ ಪ್ರಚಾರ ಪಡೆಯುತ್ತಾರೆ ಎಂದು ಅನೇಕರು ಅಂದುಕೊಳ್ಳುತ್ತಾರೆ. ಅವರೆಲ್ಲರಿಗೆ ಮೊನ್ನೆ ಮಲಯಾಳಂ ಚಿತ್ರರಂಗದ ಕರಾಳತೆಗೆ ಕೈಗನ್ನಡಿಯಾದ ಜಸ್ಟಿಸ್ ಹೇಮಾ ಆಯೋಗ ನೀಡಿರುವ ವರದಿ ಉತ್ತರವನ್ನು ನೀಡಿದೆ. ಮಲಯಾಳಂ ಚಿತ್ರರಂಗದಲ್ಲಿ ಹೆಣ್ಣು ಬಾಕರ ಸಂಖ್ಯೆ ಹೆಚ್ಚಿದೆ ಎಂಬ ವಿಚಾರ ಕೂಡ ಇದೇ ಹೇಮಾ ವರದಿಯಿಂದ ಜಗಜ್ಜಾಹೀರಾಗಿದೆ.ಮಲಯಾಳಂ ಚಿತ್ರರಂಗದ ಈ ಹೀನ ಸಂಸ್ಕ್ರತಿಯ ಕುರಿತು ದೇಶದೆಲ್ಲೆಡೆ ಚರ್ಚೆ ಶುರುವಾಗಿದೆ. ಇದರ ನಡುವೆ ಪಾರ್ವತಿ ತಿರುವೋತ್ತು{ಮೆನನ್} ಹೇಮಾ ವರದಿಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಹೌದು, ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಪಾರ್ವತಿ, ಹೇಮಾ ಆಯೋಗ ನೀಡಿದ ವರದಿಯ ಬಗ್ಗೆ ಖುಷಿ ಮತ್ತು ದುಖ ಎರಡು ಇದೆ ಎಂದಿದ್ದಾರೆ. 2018ರಲ್ಲಿ ನಾವು ಧ್ವನಿ ಎತ್ತಿದ್ದೇವು, 2019ರಲ್ಲಿ ವರದಿಯನ್ನು ಸಲ್ಲಿಸಲಾಯಿತು. ಅಲ್ಲಿಂದ ಇಲ್ಲಿಯವರೆಗೆ ನಾವೆಲ್ಲ ಸಾಕಷ್ಟು ಹೋರಾಡಿದ್ದೇವೆ, ಜಗಳ ಮಾಡಿಕೊಂಡಿದ್ದೇವೆ, ವರದಿಗಾಗಿ ಭಿಕ್ಷೆಯನ್ನು ಬೇಡಿದ್ದೇವೆ ಎಂದಿರುವ ಪಾರ್ವತಿ, ಮಾಧ್ಯಮದವರು ಮತ್ತು ಸಾರ್ವಜನಿಕರು ಆಗ ನಮ್ಮ ಜೊತೆ ನಿಲ್ಲಬೇಕಿತ್ತು. ಯಾಕೆ ವರದಿಯನ್ನು ಬಹಿರಂಗಗೊಳಿಸುತ್ತಿಲ್ಲ, ಯಾಕೆ ಮುಚ್ಚಿಡುತ್ತಿದ್ದೀರಾ ಎಂದು ಕೇಳಬೇಕಿತ್ತು ಎಂದಿದ್ದಾರೆ.
ಇನ್ನೂ ಈ ವರದಿಗಾಗಿ ನಾವು ದಿನ 06ರಿಂದ 07 ಘಂಟೆಯವರೆಗೆ ಪ್ರಯಾಣ ಮಾಡಿದ್ದೇವೆ, ವಾರಾನುವಾರ ತಿರುಗಿದ್ದೇವೆ, ಯಾಕೆಂದರೆ ಇದರಿಂದ ನಮಗೆ, ಚಿತ್ರರಂಗಕ್ಕೆ ಮುಂದೆ ಬರುವ ಮಹಿಳೆಯರಿಗೆ ಅನುಕೂಲವಾಗುತ್ತೆ ಎಂಬ ನಂಬಿಕೆ ನಮ್ಮಲ್ಲಿತ್ತು. ಆದರೆ ದಿನಗಳು ಉರುಳಿದಂತೆ ವರದಿ ಯಾವುದೇ ಕಾರಣಕ್ಕೂ ಹೊರ ಬರುವುದಿಲ್ಲ ಎಂದು ಗೊತ್ತಾದಾಗ ನಮ್ಮೆಲ್ಲರಿಗೆ ಆಕಾಶ ಕಳಚಿ ಬಿದ್ದಂತಾಗಿತ್ತು ಎಂದಿರುವ ಪಾರ್ವತಿ ಸದ್ಯ ವರದಿ ಹೊರ ಬಂದಿರುವುದು ಸಮಾಧಾನ ನೀಡಿದೆ ಎಂದಿದ್ದಾರೆ.

ಇನ್ನೂ ಮಲಯಾಳಂ ಚಿತ್ರರಂಗ ಸಂಪೂರ್ಣ ಹಾಳಾಗಿದೆ, ಕಾಮಾಂಧರಿಂದ ತುಂಬಿಕೊಂಡಿದೆ ಎಂದೆಲ್ಲ ಜನ ಮಾತನಾಡುತ್ತಿದ್ದಾರೆ. ಆದರೆ ಈ ಮಾತನ್ನು ನಾನು ಒಪ್ಪಲ್ಲ. ಯಾಕೆಂದರೆ ನಾವು ಒಳಗಿನಿಂದ ಚೆನ್ನಾಗಿಯೇ ಇದ್ದೇವೆ. ಹೀಗಾಗಿಯೇ ಈ ವಿಚಾರದ ಕುರಿತು ನಾವು ಧ್ವನಿ ಎತ್ತಿದ್ದೇವೆ. ಮಾತನಾಡುತ್ತಿದ್ದೇವೆ. ನಮ್ಮ ಸಮಸ್ಯೆಯನ್ನು ನಾವು ಬಗೆಹರಿಸಿಕೊಳ್ಳುತ್ತಿದ್ದೇವೆ. ಯಾವಾಗ ಎಲ್ಲಿಯೂ ಏನೂ ಕೇಳಿ ಬರುತ್ತಿಲ್ಲ ಎಲ್ಲವೂ ಶಾಂತವಾಗಿದೆ ಎಂದಾಗ ನಾವು ಚಿಂತೆ ಮಾಡಬೇಕು ಎಂದಿದ್ದಾರೆ.
ಮುಂದುವರೆದು ಹೇಮಾ ಸಮಿತಿ ನೀಡಿರುವ ವರದಿಯಿಂದ ತಪ್ಪುಗಳನ್ನು ತಿದ್ದಿಕೊಂಡು ಕೆಲಸ ಮಾಡಬೇಕಿದೆ ಎಂದಿರುವ ಪಾರ್ವತಿ, ಕೆಲಸ ಮಾಡುವ ಸ್ಥಳದಲ್ಲಿ ಈ ವರದಿಯಿಂದ ಒಳ್ಳೇಯ ವಾತಾವರಣ ಮತ್ತು ಸಂಸ್ಕ್ರತಿ ನಿರ್ಮಾಣ ಮಾಡಲು ಸಹಕಾರಿಯಾಗುತ್ತೆ ಎಂದಿದ್ದಾರೆ. ಆದರೆ, ಈಗ ವರದಿ ಬಂದ ನಂತರ ಮುಖ್ಯ ಸಮಸ್ಯೆ ಕುರಿತು ಮಾತನಾಡದೇ, ಅನೇಕರು ಈ ವಿಚಾರವನ್ನು ಎಲ್ಲಿಂದ ಎಲ್ಲೆಲ್ಲಿಗೋ ತಗೆದುಕೊಂಡು ಹೋಗುತ್ತಿದ್ದಾರೆ. ವೈಭವಿಕರಣ ಮಾಡುತ್ತಿದ್ದಾರೆ. ಅವರನ್ನೆಲ್ಲ ಮರಳಿ ತಮ್ಮ ಕೆಲಸದ ಕಡೆ ಗಮನ ವಹಿಸುವಂತೆ ಮಾಡುವುದು ಕೂಡ ಸದ್ಯದ ದೊಡ್ಡ ಸವಾಲು ಎಂದಿರುವ ಪಾರ್ವತಿ ತಿರುವೋತ್ತು ಬೇರೆ ಬೇರೆ ಭಾಷೆಯವರು ಎಚ್ಚೆತ್ತುಕೊಳ್ಳಬೇಕು, ಅವರಲ್ಲಿ ಕೂಡ ಈ ತರಹದ ಆಯೋಗಗಳು ರಚನೆಯಾಗಬೇಕು ಎಂದು ಕೂಡ ಹೇಳಿದ್ದಾರೆ.


Click it and Unblock the Notifications











