'ಧೂಮಂ' ಕನ್ನಡ, ಮಲಯಾಳಂನಲ್ಲಷ್ಟೇ ಅಲ್ಲ: ತೆಲುಗು, ತಮಿಳಿನಲ್ಲೂ ರಿಲೀಸ್..ಆದ್ರೆ ಯಾವಾಗ?

By ಫಿಲ್ಮಿಬೀಟ್ ಡೆಸ್ಕ್

'ಕೆಜಿಎಫ್', 'ಕಾಂತಾರ'ದಂತಹ ಮೆಗಾ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಹೊಂಬಾಳೆ ಫಿಲ್ಮ್ಸ್ ಮಲಯಾಳಂಗೂ ಲಗ್ಗೆ ಇಟ್ಟಿದ್ದು ಗೊತ್ತೇ ಇದೆ. 'ಧೂಮಂ' ಮೂಲಕ ಮಾಲಿವುಡ್‌ನಲ್ಲಿ ಯಶಸ್ಸಿನ ರುಚಿ ನೋಡುವುದಕ್ಕೆ ಸಜ್ಜಾಗಿದೆ.

ಕನ್ನಡದ ನಿರ್ದೇಶಕ ಪವನ್ ಕುಮಾರ್ ನಿರ್ದೇಶಿಸಿರುವ 'ಧೂಮಂ'ನ ಪ್ರಮುಖ ಆಕರ್ಷಣೆ ಫಹಾದ್ ಫಾಸಿಲ್. ಮಲಯಾಳಂನ ಸ್ಟಾರ್ ನಟ ಫಹಾದ್ ಫಾಸಿಲ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

'ಧೂಮಂ ಸಿನಿಮಾ ಇದೇ ಜೂನ್ 23ಕ್ಕೆ ಕನ್ನಡ ಹಾಗೂ ಮಲಯಾಳಂ ಎರಡೂ ಭಾಷೆಯಲ್ಲಿ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ. 'ಧೂಮಂ' ಕನ್ನಡ ಅವತರಣಿಕೆ ರಿಲೀಸ್ ಗೊಂದಲವಿತ್ತು. ಆದ್ರೀಗ ಕನ್ನಡದ 'ಧೂಮಂ' ಹೆಚ್ಚಿನ ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ. ಹಾಗೇ ಕೇರಳದಲ್ಲೂ ಸುಮಾರು 300 ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ.

Pawan Kumar, Fahadh Faasil Movies Dhoomam Release in Kannada,Malayalam,Telugu,Tamil

ಹಾಗಂತ ಕೇವಲ ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಷ್ಟೇ ಅಲ್ಲ. ತೆಲುಗು ಹಾಗೂ ತಮಿಳು ಭಾಷೆಯಲ್ಲೂ ಈ ಸಿನಿಮಾ ರಿಲೀಸ್ ಆಗಲಿದೆ. ಆದರೆ, ಅದಕ್ಕೂ ಮುನ್ನ ಎರಡು ಭಾಷೆಗಳಲ್ಲಿ ಸಿಗುವ ರೆಸ್ಪಾನ್ಸ್ ನೋಡಿ ಒಂದು ವಾರದ ಬಳಿಕ ಅಂದ್ರೆ, ಜೂನ್ 29ರಂದು ಉಳಿದೆರಡು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

'ಲೂಸಿಯಾ', 'ಯೂಟರ್ನ್' ಅಂತಹ ಸಿನಿಮಾಗಳ ಮೂಲಕ ಪವನ್ ಕುಮಾರ್ ಜನಪ್ರಿಯರಾಗಿದ್ದಾರೆ. ಹೀಗಾಗಿ 'ಧೂಮಂ' ಬಗ್ಗೆ ಸ್ಪಲ್ಪ ಎಕ್ಸ್‌ಟ್ರಾ ಇಂಟ್ರೆಸ್ಟ್ ಸಿನಿಪ್ರೇಮಿಗಳಲ್ಲಿ ಇದೆ. ಅಂದ್ಹಾಗೆ, ಫಹಾದ್ ಫಾಸಿಲ್, ಅಪರ್ಣ ಬಾಲಮುರಳಿ, ಅಚ್ಯುತ್ ಕುಮಾರ್, ರೋಷನ್ ಮ್ಯಾಥ್ಯೂ, ವಿನೀತ್ ರಾಧಾಕೃಷ್ಣನ್, ಅನು ಮೋಹನ್, ಜಾಯ್ ಮ್ಯಾಥ್ಯೂ, ನಂದು ಸೇರಿದಂತೆ ಹಲವರು ನಟಿಸಿದ್ದಾರೆ.

ಪೂರ್ಣಚಂದ್ರ ತೇಜಸ್ವಿ ಸಂಗೀತವಿದ್ದರೆ, ಸುರೇಶ್ ಎಡಿಟಿಂಗ್ ಮಾಡಿದ್ದಾರೆ.'ಧೂಮಂ' ಆಕ್ಷನ್ ಥ್ರಿಲ್ಲರ್ ಸ್ಟೋರಿ ಇರುವ ಸಿನಿಮಾ. ಈ ಸಿನಿಮಾಗೆ ಕಥೆ, ಚಿತ್ರಕಥೆ ಬರೆದಿದ್ದು ಪವನ್ ಕುಮಾರ್. ಟ್ರೈಲರ್ ಈಗಾಗಲೇ ಸದ್ದು ಮಾಡಿದ್ದು, ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.

More from Filmibeat

English summary
Pawan Kumar, Fahadh Faasil Movies Dhoomam Release in Kannada,Malayalam,Telugu,Tamil, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X