For Quick Alerts
  ALLOW NOTIFICATIONS  
  For Daily Alerts

  ಮದುವೆ ಆಗುವುದಾಗಿ ನಂಬಿಸಿ 'ಜೋಶ್' ನಟಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿಗಳ ಬಂಧನ

  |

  ಬಹುಭಾಷ ನಟಿ ಶಾಮ್ನಾ ಕಾಸಿಮ್, ಪೂರ್ಣ ಹೆಸರಿನ ಮೂಲಕ ಪ್ರಖ್ಯಾತಿಗಳಿಸಿರುವ ನಟಿಗೆ ಮದುವೆ ಆಗುವುದಾಗಿ ನಂಬಿಸಿ, ಹಣ ವಸೂಲಿ ಮಾಡಲು ಯತ್ನಿಸಿದ ನಾಲ್ವರು ಆರೋಪಿಗಳನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ನಟಿ ಪೂರ್ಣ ತಾಯಿ ಕೇರಳದ ಮರಾಡು ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

  ಸೋನುನಿಗಮ್ ವಿರುದ್ಧ ಕಿಡಿಕಾರಿದ ದಿವ್ಯ ಖೊಸ್ಲೇ. | T Series | Sonu Nigam | Divya Khosla Kumar

  ನಾಲ್ವರು ಆರೋಪಿಗಳು ತ್ರಿಶೂಲ್ ಮೂಲದವರಾಗಿದ್ದು ರಫಿಕ್, ರಮೇಶ್, ಶರತ್ ಮತ್ತು ಚೆಟ್ಟುವಾದ ಅಶ್ರಫ್ ಎಂದು ಗುರುತಿಸಲಾಗಿದೆ. ಈ ಆರೋಪಿಗಳು ನಟಿ ಪೂರ್ಣ ಅವರಿಗೆ ಮದುವೆ ಆಗುವುದಾಗಿ ನಂಬಿಸಿ ಹಣವಸೂಲಿ ಮಾಡಲು ಮುಂದಾಗಿದ್ದರು ಎಂದು ತಿಳಿದುಬಂದಿದೆ. ಮುಂದೆ ಓದಿ..

  ಮಾರ್ಚ್ ತಿಂಗಳಲ್ಲಿ ನಟಿಯನ್ನು ಸಂಪರ್ಕಿಸಿದ ಗ್ಯಾಂಗ್

  ಮಾರ್ಚ್ ತಿಂಗಳಲ್ಲಿ ನಟಿಯನ್ನು ಸಂಪರ್ಕಿಸಿದ ಗ್ಯಾಂಗ್

  ಮಾರ್ಚ್ ನಲ್ಲಿ ನಟಿ ಪೂರ್ಣ ಅವರನ್ನು ಈ ಗ್ಯಾಂಗ್ ಸಂಪರ್ಕ ಮಾಡಿದೆ. ಕೋಳಿಕೋಡ್ ಮೂಲದವರು, ದುಬೈನಲ್ಲಿ ಬಿಸಿನೆಸ್ ನಡೆಸುತ್ತಿದ್ದೇನೆ, ದೊಡ್ಡ ಬಿಸಿನೆಸ್ ಮೆನ್ ಎಂದು ನಂಬಿಸಿದ್ದಾನೆ. ಅನ್ವರ್ ಅಲಿ ಎನ್ನುವ ಹೆಸರಿನಲ್ಲಿ ಪೂರ್ಣಗೆ ಫೋನ್ ಮಾಡಿ ಪರಿಚಯ ಮಾಡಿಕೊಂಡಿದ್ದಾರೆ. ಈ ಪರಿಚಯ ಕೊನೆಗೆ ಮದುವೆವರೆಗೂ ತಲುಪಿದೆ.

  ಮದುವೆ ಆಗುವುದಾಗಿ ನಂಬಿಸಿ ವಂಚನೆ

  ಮದುವೆ ಆಗುವುದಾಗಿ ನಂಬಿಸಿ ವಂಚನೆ

  ಈ ಗ್ಯಾಂಗ್ ಪೂರ್ಣ ಮನೆಯವರಿಗೆಲ್ಲ ಪರಿಚಯವಾದ ಬಳಿಕ, ಪೂರ್ಣ ಮನೆಗೂ ಭೇಟಿ ನೀಡಿ ಮದುವೆ ಮಾತುಕತೆ ನಡೆಸಿದ್ದಾರಂತೆ. ಅಲ್ಲದೆ ನಕಲಿ ಪ್ರೋಫೈಲ್ ರೆಡಿ ಮಾಡಿ ಮನೆಯವರಿಗೆ ನಂಬಿಸಿದ್ದಾರೆ. ನಂತರ ಮನೆಯಿಂದ ಹೊರಡುವಾಗ ನಟಿಯ ಮನೆಯ ಫೋಟೋ ಮತ್ತು ಕಾರುಗಳ ವಿಡಿಯೋಗಳನ್ನು ಮಾಡಿಕೊಂಡು ಹೋಗಿದ್ದಾರೆ. ಇದು ಪೂರ್ಣ ಪೋಷಕರಿಗೆ ಅನುಮಾನ ಮೂಡಿದೆ.

  ಹಣಕ್ಕೆ ಬೇಡಿಕೆ, ಬ್ಲ್ಯಾಕ್ ಮೇಲ್

  ಹಣಕ್ಕೆ ಬೇಡಿಕೆ, ಬ್ಲ್ಯಾಕ್ ಮೇಲ್

  ನಂತರ ಗ್ಯಾಂಗ್ ನ ಒಬ್ಬ ವ್ಯಕ್ತಿ ನಟಿಗೆ ಫೋನ್ ಮಾಡಿ 1 ಲಕ್ಷ ನೀಡುವಂತೆ ಕೇಳಿಕೊಂಡಿದ್ದಾನೆ. ಇದರಿಂದ ಅನುಮಾನಗೊಂಡ ಪೂರ್ಣ ಕುಟುಂಬ ಹಣ ನೀಡಲು ನಿರಾಕರಿಸಿದ್ದಾರೆ. ಬಳಿಕ ಪೂರ್ಣ, ಅನ್ವರ್ ಗೆ ಕರೆ ಮಾಡಿ ಹೇಳಿದ್ದಾರೆ. ಇಬ್ಬರ ನಡುವೆ ವಾಗ್ವಾದವೆ ನಡೆದಿದೆ. ನಂತರ ಅನ್ವರ್, ನಟಿ ಪೂರ್ಣಗೆ ಬೆದರಿಕೆ ಹಾಕಲು ಪ್ರಾರಂಭಿಸಿದ್ದಾನೆ. ನಿನ್ನ ವೃತ್ತಿ ಜೀವನ ಹಾಳು ಮಾಡುತ್ತೇನೆ, ಕೇಳಿದ್ದಷ್ಟು ಹಣ ಕೊಟ್ಟಿಲ್ಲ ಎಂದರೆ ಖಾಸಗಿ ವಿಡಿಯೋಗಳನ್ನು ಲೀಕ್ ಮಾಡುವುದಾಗಿ ಬ್ಲ್ಯಾಕ್ ಮೇಲ್ ಮಾಡಲು ಪ್ರಾರಂಭಿಸಿದ್ದಾನೆ.

  ವಿಚಾರಣೆ ನಡೆಸುತ್ತಿರುವ ಪೊಲೀಸರು

  ವಿಚಾರಣೆ ನಡೆಸುತ್ತಿರುವ ಪೊಲೀಸರು

  ನಂತರ ಪೂರ್ಣ ಕುಟುಂಬ ಪೊಲೀಸರ ಮೊರೆ ಹೋಗಿದ್ದಾರೆ. ದೂರು ನೀಡಿದ ನಂತರ ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆ ಆರಂಭಿಸಿದ್ದಾರೆ. ತನಿಖೆ ವೇಳೆ ಅನ್ವರ್ ಎನ್ನುವುದು ನಕಲಿ ಹೆಸರು ಎನ್ನುವುದು ಗೊತ್ತಾಗಿದೆ. ನಕಲಿ ಹೆಸರಿನಲ್ಲಿ ನಟಿಗೆ ವಂಚಿಸಲು ಮುಂದಾಗಿರುವುದು ಬೆಳಕಿಗೆ ಬಂದಿದೆ.

  English summary
  Police arrested A Gang of four for blackmailing to Actress Shamna Kasim.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X