Salaar: ಕೆಜಿಎಫ್ ರಾಜಮಾರ್ಗದಲ್ಲೇ 'ಸಲಾರ್' ದರ್ಬಾರ್: ರಿಲೀಸ್ ಡೇಟ್‌ನಲ್ಲಿ ಬದಲಾವಣೆ ಇಲ್ಲ ಎಂದ ಹೊಂಬಾಳೆ
ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ಬಿಡುಗಡೆಗೆ ಇನ್ನು 46 ದಿನಗಳು ಮಾತ್ರ ಬಾಕಿಯಿದೆ. ದಿನದಿಂದ ದಿನಕ್ಕೆ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗುತ್ತಲೇ ಇದೆ. ಶಾರುಕ್ ಖಾನ್ ನಟನೆಯ 'ಡಂಕಿ' ಸಿನಿಮಾ ಜೊತೆ 'ಸಲಾರ್' ಬಾಕ್ಸಾಫೀಸ್ ಫೈಟ್ ಕನ್ಫರ್ಮ್ ಆಗಿದೆ. ಜೊತೆಗೆ ಹಾಲಿವುಡ್‌ನ 'ಅಕ್ವಾಮನ್' ಹಾಗೂ ಮಲಯಾಳಂನ 'ನೆರು' ಸಿನಿಮಾಗಳು ರಿಲೀಸ್ ಆಗ್ತಿವೆ.
ಸೆಪ್ಟೆಂಬರ್ 28ಕ್ಕೆ ರಿಲೀಸ್ ಆಗಬೇಕಿದ್ದ 'ಸಲಾರ್' 3 ತಿಂಗಳು ತಡವಾಗಿ ಪ್ರೇಕ್ಷಕರ ಮುಂದೆ ಬರ್ತಿದೆ. ಕ್ರಿಸ್‌ಮಸ್ ವೀಕೆಂಡ್‌ನಲ್ಲಿ ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ಏಕಕಾಲಕ್ಕ ದೇಶ ವಿದೇಶಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ. 1000 ಕೋಟಿ ರೂ. ಕಲೆಕ್ಷನ್ ಟಾರ್ಗೆಟ್ ಜೊತೆಗೆ 5 ಸಾವಿರಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಓವರ್‌ಸೀಸ್ ಮಾರ್ಕೆಟ್‌ನಲ್ಲೂ ಸಿನಿಮಾ ದೊಡ್ಡದಾಗಿ ತೆರೆಗಪ್ಪಳಿಸಲಿದೆ.

ಅದಾಗಲೇ ಒಮ್ಮೆ ವಿದೇಶಗಳಲ್ಲಿ ಅಡ್ವಾನ್ಸ್ ಬುಕ್ಕಿಂಗ್ ನಡೆದು ರಿಲೀಸ್ ಡೇಟ್ ಬದಲಾಗಿದ್ದರಿಂದ ಟಿಕೆಟ್ ರದ್ದು ಪಡಿಸಲಾಗಿತ್ತು. ಪ್ರೇಕ್ಷಕರಿಗೆ ಟಿಕೆಟ್ ಹಣ ವಾಪಸ್ ನೀಡಲಾಗಿತ್ತು. ಗ್ರಾಫಿಕ್ಸ್ ಚೆನ್ನಾಗಿ ಬಂದಿಲ್ಲ ಎನ್ನುವ ಕಾರಣಕ್ಕೆ ರೀ ವರ್ಕ್ ಮಾಡುತ್ತಿದ್ದು ಸಿನಿಮಾ ತಡವಾಗುತ್ತಿದೆ. ಕಳೆದೊಂದು ವಾರದಿಂದ ಮತ್ತೆ 'ಸಲಾರ್' ರಿಲೀಸ್ ಡೇಟ್ ಪೋಸ್ಟ್‌ಪೋನ್ ಎನ್ನುವ ಗುಸುಗುಸು ಕೇಳಿ ಬಂದಿತ್ತು. ಆದರೆ ಹೊಸ ಅಪ್‌ಡೇಟ್‌ನಲ್ಲಿ ಹೊಂಬಾಳೆ ಸಂಸ್ಥೆ ಅದಕ್ಕೆ ಸ್ಪಷ್ಟನೆ ನೀಡಿದೆ. ಹೇಳಿದಂತೆಯೇ ಡಿಸೆಂಬರ್ 22ಕ್ಕೆ 'ಸಲಾರ್' ಆಗಮನ ಖಚಿತ ಎಂದಿದೆ.
'ಸಲಾರ್' ಚಿತ್ರದ ಕೇರಳ ವಿತರಣೆ ಹಕ್ಕು ಪೃಥ್ವಿರಾಜ್ ಪ್ರೊಡಕ್ಷನ್ಸ್ ಸಂಸ್ಥೆ ಪಾಲಾಗಿದೆ. ಈ ಹಿಂದೆ ಯಶ್ ನಟನೆಯ 'KGF' ಸರಣಿ ಸಿನಿಮಾಗಳನ್ನು ಪೃಥ್ವಿರಾಜ್ ಸುಕುಮಾರನ್ ಕೇರಳದಲ್ಲಿ ರಿಲೀಸ್ ಮಾಡಿದ್ದರು. ಬಳಿಕ ಹೊಂಬಾಳೆ ಸಂಸ್ತೆಯ 'ಕಾಂತಾರ', 'ಧೂಮಂ' ಸಿನಿಮಾಗಳನ್ನು ಮಲಯಾಳಂ ಪ್ರೇಕ್ಷಕರ ಮುಂದೆ ಇಟ್ಟಿದ್ದರು. ಇನ್ನು 'ಸಲಾರ್' ಚಿತ್ರದಲ್ಲಿ ವರದರಾಜ್ ಮನ್ನಾರ್ ಆಗಿ ಖಡಕ್ ರೋಲ್‌ನಲ್ಲಿ ಪೃಥ್ವಿರಾಜ್ ನಟಿಸಿದ್ದಾರೆ. ಇದೀಗ ತಾವೇ ನಟಿಸಿರುವ 'ಸಲಾರ್' ಚಿತ್ರವನ್ನು ಕೇರಳದಲ್ಲಿ ರಿಲೀಸ್ ಮಾಡಲು ಮುಂದಾಗಿದ್ದಾರೆ.
ಹೊಂಬಾಳೆ ಸಂಸ್ಥೆ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಕೇರಳದಲ್ಲಿ 'ಸಲಾರ್' ಪ್ರೇಕ್ಷಕರ ಮುಂದಿಡಲು ನಮ್ಮ ಜೊತೆ ಪೃಥ್ವಿರಾಜ್ ಪ್ರೊಡಕ್ಷನ ಸಂಸ್ಥೆ ಕೈ ಜೋಡಿಸಿದೆ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟರ್‌ನಲ್ಲಿ ಡಿಸೆಂಬರ್ 22ಕ್ಕೆ ಸಿನಿಮಾ ರಿಲೀಸ್ ಅನ್ನೋದನ್ನು ಖಚಿತಪಡಿಸಿದ್ದಾರೆ. ಅಲ್ಲಿಗೆ ಪೋಸ್ಟ್‌ಪೋನ್ ವದಂತಿಗೆ ಬ್ರೇಕ್ ಬಿದ್ದಂತಾಗಿದೆ.
ಹೊಂಬಾಳೆ ಸಂಸ್ಥೆಯ 'KGF' ಚಿತ್ರವನ್ನು ಮಲಯಾಳಂನಲ್ಲಿ ಪೃಥ್ವಿರಾಜ್, ಉತ್ತರ ಭಾರತದಲ್ಲಿ ಎಎ ಫಿಲ್ಮ್ಸ್ ರಿಲೀಸ್ ಮಾಡಿತ್ತು. ಇದೀಗ 'ಸಲಾರ್' ಕೂಡ ಅದೇ ಹಾದಿಯಲ್ಲಿ ಸಾಗಿದೆ. ನವೆಂಬರ್ ಕೊನೆ ವಾರ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ 'ಸಲಾರ್' ಮೊದಲ ಭಾಗದ ಟ್ರೈಲರ್ ರಿಲೀಸ್ ಆಗಲಿದೆ. ಚಿತ್ರದಲ್ಲಿ ಹಾಡುಗಳ ಸಂಖ್ಯೆ ಕಮ್ಮಿ ಇದೆ ಎನ್ನಲಾಗ್ತಿದೆ. ಅದೇ ಕಾರಣಕ್ಕೆ ಈವರೆಗೆ ಹಾಡುಗಳ ರಿಲೀಸ್ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಭುವನ್ ಗೌಡ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ 'ಸಲಾರ್' ಚಿತ್ರಕ್ಕಿದೆ.
ಟ್ರೈಲರ್ ರಿಲೀಸ್ ಮಾಡಿ ಹೊಂಬಾಳೆ ಸಂಸ್ಥೆ ಸಿನಿಮಾ ಪ್ರಮೋಷನ್ ಶುರು ಮಾಡಲಿದೆ. ಚಿತ್ರದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ನಟಿಸಿದ್ದು ಜಗಪತಿ ಬಾಬು ಹಾಗೂ ಪೃಥ್ವಿರಾಜ್ ತಂದೆ ಮಗನಾಗಿ ಅಬ್ಬರಿದಿದ್ದಾರೆ. ಈಶ್ವರಿ ರಾವ್, ಭಜರಂಗಿ ಲೋಕಿ, ಟಿನ್ನು ಆನಂದ್, ಮಧು ಗುರುಸ್ವಾಮಿ, ಝಾನ್ಸಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.


Click it and Unblock the Notifications











