ಮಲಯಾಳಂ ನಟ ಆಸಿಫ್ ಅಲಿಯನ್ನು ಅಪ್ಪಿಕೊಂಡಿದ್ದಕ್ಕೆ ಅಮಲಾ ಪೌಲ್ ವಿರುದ್ಧ ಟೀಕೆ: ಅಂತಹದ್ದೇನಾಯ್ತು?
'ಹೆಬ್ಬುಲಿ' ಸಿನಿಮಾದ ನಟಿ ಅಮಲಾ ಪೌಲ್ ಆಗಾಗ ವಿವಾದಗಳಲ್ಲಿ ಸಿಕ್ಕಿಕೊಳ್ಳುತ್ತಲೇ ಇರುತ್ತಾರೆ. ಬೇಡ ಬೇಡ ಅಂದರೂ ವಿವಾದಗಳು ಇವರನ್ನು ಹಿಂಬಾಲಿಸಿಕೊಂಡು ಬರುತ್ತಲೇ ಇರುತ್ತೆ. ಇತ್ತೀಚೆಗೆ ಅಮಲಾ ಪೌಲ್ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ನಟಿಯ ಮಲಯಾಳಂ ನಟನನ್ನು ಅಪ್ಪಿಕೊಂಡಿದ್ದಕ್ಕೆ ನೆಟ್ಟಿಗರು ಕಿಡಿಕಾರುತ್ತಿದ್ದಾರೆ.
ದಕ್ಷಿಣ ಭಾರತದ ನಟಿ ಅಮಲಾ ಪೌಲ್ ಈಗ ತುಂಬು ಗರ್ಭಿಣಿ. ತನ್ನ ಜೀವನದ ಅತ್ಯಂತ ಸುಂದರ ಘಟ್ಟದಲ್ಲಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಅಮಲಾ ಪೌಲ್ ತನ್ನ ಮಗುವಿಗೆ ಜನ್ಮ ನೀಡಲಿದ್ದಾರೆ. ತುಂಬು ಗರ್ಭಿಣಿಯಾಗಿದ್ದರೂ, ನಟಿ ಅಮಲಾ ಪೌಲ್ ಮನೆಯಲ್ಲಿ ವಿಶ್ರಾಂತಿ ಪಡೆದಿಲ್ಲ. ಸಿನಿಮಾ ಹಾಗೂ ಇನ್ನಿತರ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಲೇ ಇರುತ್ತಾರೆ.

ಇಂತಹ ಕಾರ್ಯಕ್ರಮಕ್ಕೆ ಹೋದ ವೇಳೆ ನಟಿಯ ವಿರುದ್ಧ ನೆಟ್ಟಿಗರು ತಿರುಗಿಬಿದ್ದಿದ್ದಾರೆ. ಇತ್ತೀಚೆಗೆ ಈವೆಂಟ್ ಒಂದರಲ್ಲಿ 'ಹೆಬ್ಬುಲಿ' ನಟಿ ಅಮಲಾ ಪೌಲ್ ರ್ಯಾಂಪ್ ವಾಕ್ ಮಾಡಿದ್ದರು. ಈ ವೇಳೆ ಮಲಯಾಳಂ ನಟ ಆಸಿಪ್ ಅಲಿಯನ್ನು ಅಪ್ಪಿಕೊಂಡಿದ್ದರು. ಅದೇ ಈಗ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಆ ಇವೆಂಟ್‌ನಲ್ಲಿ ಅಂತಹದ್ದೇನಾಯ್ತು? ತಿಳಿಯಲು ಮುಂದೆ ಓದಿ..
ನಟಿ ಅಮಲಾ ಪೌಲ್ ಇತ್ತೀಚೆಗಷ್ಟೇ 9 ತಿಂಗಳ ತುಂಬು ಗರ್ಭಿಣಿ ಅನ್ನುವ ಸಂತಸವನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದರು. ಆ ವಿಡಿಯೋಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿತ್ತು. "ಒಂಬತ್ತನೇ ತಿಂಗಳಿಗೆ ಕಾಲಿಡುತ್ತಿದ್ದೇನೆ. ಎಲ್ಲರ ಪ್ರೀತಿ ಮತ್ತು ಹಾರೈಕೆಗಳಿಗೆ ಧನ್ಯವಾದಗಳು" ಎಂದು ವಿಡಿಯೋ ಶೇರ್ ಮಾಡಿ ಬರೆದುಕೊಂಡಿದ್ದರು.

ಇತ್ತೀಚೆಗಷ್ಟೇ ಗರ್ಭಿಣಿಯರಿಗಾಗಿ ವಿಶ್ವದ ಅತಿ ದೊಡ್ಡ ಫ್ಯಾಷನ್ ಶೋ ಕೊಚ್ಚಿಯಲ್ಲಿ ನಡೆದಿದೆ. ಈ ಫ್ಯಾಷನ್ ಶೋನಲ್ಲಿ ನಟಿ ಅಮಲಾ ಪೌಲ್ ಅತಿಥಿಯಾಗಿ ಭಾಗವಹಿಸಿದ್ದರು. ಅಮ್ಮಂದಿರ ದಿನದಂದು ಈ ಫ್ಯಾಷನ್ ಶೋ ಅನ್ನು ಆರಂಭ ಮಾಡಲಾಗಿತ್ತು. ನೂರಾರು ಗರ್ಭಿಣಿಯರು ಫ್ಯಾಷನ್ ಶೋಗೆ ಆಗಮಿಸಿದ್ದರು. ಅವರ ಜೊತೆ ಅಮಲಾ ಕೂಡ ರ್‍ಯಾಂಪ್ ವಾಕ್ ಮಾಡಿದ್ದರು. ಈ ವೇಳೆ ತನ್ನ ಬದುಕಿನ ಅತ್ಯಂತ ಸಂತೋಷದಾಯಕ ಕ್ಷಣಗಳನ್ನು ಅನುಭವಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದರು.
ಮಾಡರ್ನ್ ಡ್ರೆಸ್‌ನಲ್ಲಿ ತುಂಬು ಗರ್ಭಿಣಿಯಾಗಿರುವ ಅಮಲಾ ಪೌಲ್ ರ್ಯಾಂಪ್ ವಾಕ್ ಮಾಡಿದ್ದರು. ಈ ವೇಳೆ ಮಲಯಾಳಂ ನಟ ಆಸಿಪ್ ಅಲಿ ನಟಿ ಅಮಲಾ ಪೌಲ್ ಅವರನ್ನು ತಬ್ಬಿಕೊಂಡಿದ್ದರು. ಇದೇ ವೇಳೆ ಆಸಿಲ್ ಅಲಿ ತುಂಬು ಗರ್ಭಿಣಿಯಾಗಿರುವ ನಟಿಯ ಹೊಟ್ಟೆಯನ್ನು ತಟ್ಟಿದ್ದರು. ಅದು ನೆಟ್ಟಿಗರು ಕೆಂಗಣ್ಣಿಗೆ ಗುರಿಯಾಗಿದ್ದಾರೆ. ವೀಡಿಯೊ ವೈರಲ್ ಆಗುತ್ತಿದ್ದಂತೆ ಆಸಿಫ್ ಅಲಿ ಮತ್ತು ಅಮಲಾ ಪೌಲ್ ವಿರುದ್ಧ ನಿಂದಿಸಿ ಕಾಮೆಂಟ್‌ಗಳನ್ನು ಮಾಡಲಾಗುತ್ತಿದೆ.
ನಟಿ ಅಮಲಾ ಪೌಲ್‌ರನ್ನು ಆಸಿಪ್ ಅಲಿ ತಬ್ಬಿಕೊಂಡಿದ್ದಕ್ಕೆ ಕೆಲ ನೆಟ್ಟಿಗರು ಕಿಡಿಕಾರುತ್ತಾರೆ. ಅದೇ ಮತ್ತೆ ಕೆಲವರು ನಟಿಯ ಬೆಂಬಲಕ್ಕೆ ಬಂದಿದ್ದಾರೆ. ಅದರಲ್ಲಿ ತಪ್ಪೇನಿದೆ? ಅವರ ವೃತ್ತಿಯಲ್ಲಿ ಇದು ಸಾಮಾನ್ಯ ಎನ್ನುವಂತೆ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಈ ಹಿಂದೆ ಮಾಡರ್ನ್ ಡ್ರೆಸ್ ತೊಟ್ಟು ಬಂದಿದ್ದ ಅಮಲಾ ಪೌಲ್ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದರು.


Click it and Unblock the Notifications











