ತನ್ನ ಕೊರೊನಾ ಪರೀಕ್ಷಾ ವರದಿಯನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ನಟ

ತನ್ನ ಕೊರೊನಾ ಪರೀಕ್ಷಾ ವರದಿಯನ್ನು ಮಲಯಾಳಂ ನ ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Recommended Video

ಟ್ವಿಟ್ಟರ್ ನಲ್ಲಿ ದರ್ಶನ್ ಪತ್ನಿ ಬೇಸರ ಹೊರಹಾಕಿದ್ದು ಯಾಕೆ?? | Vijay Lakshmi | Sumalatha Ambareesh

ಮಲೆಯಾಳಂ ನ ಈ ಖ್ಯಾತ ನಟ ಕೊರೊನಾ ಲಾಕ್‌ಡೌನ್ ಸಮಯದಲ್ಲಿ ವಿದೇಶದಲ್ಲಿ ಸಿಲುಕಿಕೊಂಡಿದ್ದರು. ಎರಡು ತಿಂಗಳಿಗೂ ಹೆಚ್ಚು ಕಾಲ ಫೃಥ್ವಿರಾಜ್ ಅವರು ಜೋರ್ಡನ್‌ನಲ್ಲಿ ಸಿಲುಕಿಕೊಂಡಿದ್ದರು.

ಮೇ 21 ರಂದು ಫೃಥ್ವಿರಾಜ್ ಅವರು ವಿಶೇಷ ವಿಮಾನದಲ್ಲಿ ಭಾರತಕ್ಕೆ ವಾಪಸ್ ಬಂದಿದ್ದರು. ನಿಯಮದಂತೆ ಕ್ವಾರಂಟೈನ್‌ಗೆ ಒಳಗಾಗಿದ್ದರು. ಅವರ ಕೊರೊನಾ ಪರೀಕ್ಷೆ ಸಹ ಕಾಲ ಕಾಲಕ್ಕೆ ಮಾಡಲಾಗಿತ್ತು.

ಸಾಮಾಜಿಕ ಜಾಲತಾಣದಲ್ಲಿ ಪರೀಕ್ಷಾ ವರದಿ

ಸಾಮಾಜಿಕ ಜಾಲತಾಣದಲ್ಲಿ ಪರೀಕ್ಷಾ ವರದಿ

ಅದೇ ಪರೀಕ್ಷಾ ವರದಿಯನ್ನು ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು. ಅವರಿಗೆ ಕೊರೊನಾ ನೆಗೆಟಿವ್ ಇದೆ. ಇದು ಫೃಥ್ವಿರಾಜ್ ಅಭಿಮಾನಿಗಳು ಹಾಗೂ ಕುಟುಂಬ ಸದಸ್ಯರಿಗೆ ನೆಮ್ಮದಿ ತಂದಿದೆ.

58 ಮಂದಿ ವಿದೇಶಕ್ಕೆ ತೆರಳಿದ್ದರು

58 ಮಂದಿ ವಿದೇಶಕ್ಕೆ ತೆರಳಿದ್ದರು

ಫೃಥ್ವಿರಾಜ್ ಹಾಗೂ 58 ಮಂದಿ 'ಆಡುಜೀವಿತಂ' ಸಿನಿಮಾದ ಚಿತ್ರೀಕರಣಕ್ಕೆಂದು ಮಾರ್ಚ್‌ ತಿಂಗಳಲ್ಲಿ ಜೋರ್ಡನ್‌ ಗೆ ತೆರಳಿದ್ದರು. ಆದರೆ ಕೊರೊನಾ ಲಾಕ್‌ಡೌನ್‌ನಿಂದ ವಿಮಾನ ಹಾರಾಟ ಬಂದ್ ಆದ ಕಾರಣ ಅವರು ಎರಡು ತಿಂಗಳಿಗೂ ಹೆಚ್ಚು ಕಾಲ ಅಲ್ಲೇ ಉಳಿದಿದ್ದರು.

ಜೂನ್ 05 ಕ್ಕೆ ಕ್ವಾರಂಟೈನ್ ಅವಧಿ ಮುಕ್ತಾಯ

ಜೂನ್ 05 ಕ್ಕೆ ಕ್ವಾರಂಟೈನ್ ಅವಧಿ ಮುಕ್ತಾಯ

ಎಲ್ಲರೂ ವಿಶೇಷ ವಿಮಾನದಲ್ಲಿ ಭಾರತಕ್ಕೆ ವಾಪಸ್ ಆದ ಬಳಿಕ ಎರಡು ವಾರಗಳ ಕ್ವಾರಂಟೈನ್‌ಗೆ ಒಳಗಾಗಿದ್ದರು. ಎಲ್ಲರ ಕ್ವಾರಂಟೈನ್ ಅವಧಿ ನಾಳೆಗೆ ಮುಕ್ತಾಯವಾಗಲಿದ್ದು, ಫೃಥ್ವಿರಾಜ್ ಸೇರಿ ಹಲವರ ಕೊರೊನಾ ವರದಿ ನೆಗೆಟಿವ್ ಬಂದಿದೆ.

ಒಬ್ಬ ವ್ಯಕ್ತಿಗೆ ಕೊರೊನಾ ಪಾಸಿಟಿವ್

ಒಬ್ಬ ವ್ಯಕ್ತಿಗೆ ಕೊರೊನಾ ಪಾಸಿಟಿವ್

ಆದರೆ ಇದೇ ತಂಡದಲ್ಲಿದ್ದ ಇವರೊಂದಿಗೆ ವಿದೇಶದಿಂದ ವಾಪಸ್ಸಾದ 58 ವರ್ಷದ ವ್ಯಕ್ತಿಯೊಬ್ಬನಿಗೆ ಕೊರೊನಾ ಪಾಸಿಟಿವ್ ಆಗಿರುವುದು ಗೊತ್ತಾಗಿದೆ. ವೃದ್ಧ ದುಭಾಷಿಯಾಗಿ ಚಿತ್ರತಂಡದೊಂದಿಗೆ ತೆರಳಿದ್ದ. ಆತನನ್ನು ಆತನ ಮೂಲ ಸ್ಥಳ ಮಲಪ್ಪುರಂ ನಲ್ಲಿ ಕ್ವಾರಂಟೈನ್‌ನಲ್ಲಿಟ್ಟು ಪರೀಕ್ಷೆ ನಡೆಸಲಾಗಿತ್ತು. ಆಗ ಆತನಿಗೆ ಕೊರೊನಾ ಪಾಸಿಟಿವ್ ಇರುವುದು ಗೊತ್ತಾಗಿದೆ.

More from Filmibeat

English summary
Actor Prithviraj Sukumaran shared his coronavirus test report on social media. He tests negative.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X