For Quick Alerts
  ALLOW NOTIFICATIONS  
  For Daily Alerts

  ಮಗಳ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಮ್ ಖಾತೆ: ಎಚ್ಚರಿಕೆ ನೀಡಿದ ನಟ ಪೃಥ್ವಿರಾಜ್

  |

  ಸಾಮಾಜಿಕ ಜಾಲತಾಣಗಳಿಂದ ಎಷ್ಟು ಉಪಯೋಗವಿದೆಯೋ ಅಷ್ಟೆ ದುರುಪಯೋಗ ಕೂಡ ಆಗುತ್ತಿದೆ. ಅದರಲ್ಲೂ ಸೆಲೆಬ್ರಿಟಿಗಳು ಹೆಚ್ಚಾಗಿ ಸಾಮಾಜಿಕ ಜಾಲತಾಣವನ್ನು ಬಳಸುತ್ತಿರುತ್ತಾರೆ. ಇದರಿಂದ ಅನೇಕ ಬಾರಿ ತೊಂದರೆಗೆ ಸಿಲುಕ್ಕಿದ್ದು ಇದೆ. ಹ್ಯಾಕ್ ಆಗುವುದು, ಫೇಕ್ ಅಕೌಂಟ್ ಕ್ರಿಯೇಟ್ ಆಗುವುದು ಹೀಗೆ ಅನೇಕ ವಿಚಾರಗಳಲ್ಲಿ ಮೊದಲು ಬಲಿ ಬಶುಗಳಾಗುವುದೇ ಸೆಲೆಬ್ರಿಟಿಗಳು.

  ಇದೀಗ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಗೆ ಫೇಕ್ ಇನ್ಸ್ಟಾಗ್ರಾಮ್ ಅಕೌಂಟ್ ನ ಕಾಟ ಶುರುವಾಗಿದೆ. ಹೌದು, ಪೃಥ್ವಿರಾಜ್ ಮಗಳ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಮ್ ಖಾತೆಯನ್ನು ಕ್ರಿಯೇಟ್ ಮಾಡಲಾಗಿದೆ. ಮಗಳ ಹೆಸರಿನಲ್ಲಿ ಕ್ರಿಯೇಟ್ ಆದ ನಕಲಿ ಖಾತೆಯ ಸ್ಕ್ರೀನ್ ಶಾಟ್ ತೆಗೆದು, ಶೇರ್ ಮಾಡಿ ಪೃಥ್ವಿರಾಜ್ ಎಚ್ಚರಿಕೆ ನೀಡಿದ್ದಾರೆ.

  ಕೊರೊನಾದಿಂದ ಚೇತರಿಕೆ ಕಂಡ ನಟ ಪೃಥ್ವಿರಾಜ್ ಸುಕುಮಾರನ್‌

  ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಪೃಥ್ವಿರಾಜ್, 'ಇದು ನಕಲಿ ಖಾತೆ ಎಂದು ನಿಮ್ಮ ಗಮನಕ್ಕೆ ತರುತ್ತಿದ್ದೇನೆ. ಈ ಖಾತೆಯನ್ನು ನಾವು ನಿರ್ಮಿಸಿಲ್ಲ. 6 ವರ್ಷದ ಮಗು ಸಾಮಾಜಿಕ ಜಾಲತಾಣದಲ್ಲಿ ಇರುವ ಅಗತ್ಯವಿಲ್ಲ. ಅವಳು ದೊಡ್ಡವಳಾದ ನಂತರ ಈ ಬಗ್ಗೆ ಅವಳೇ ಸ್ವತಃ ನಿರ್ಧರಿಸಬಹುದು. ದಯವಿಟ್ಟು ಇದಕ್ಕೆ ಬಲಿಯಾಗದಿರಿ' ಎಂದು ಹೇಳಿ 'ಶೇಮ್ ಫುಲ್' ಎಂದು ಹ್ಯಾಶ್ ಟ್ಯಾಗ್ ಹಾಕಿದ್ದಾರೆ.

  ಇನ್ನೂ ಸಿನಿಮಾ ವಿಚಾರಕ್ಕೆ ಬರುವುದಾದರೆ ನಟ ಪೃಥ್ವಿರಾಜ್ ಇತ್ತೀಚಿಗಷ್ಟೆ ಕೊರೊನಾ ಸೊಂಕಿನಿಂದ ಮುಕ್ತರಾಗಿದ್ದಾರೆ. ಸದ್ಯ ಗುಣಮುಖರಾಗಿರುವ ಪೃಥ್ವಿರಾಜ್ ಮತ್ತೆ ಚಿತ್ರೀಕರಣಕ್ಕೆ ಮರಳಿದ್ದಾರೆ. ಸದ್ಯ ಪೃಥ್ವಿರಾಜ್ 'ಜನಗಣಮನ' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

  ಮೋಷನ್ ಪೋಸ್ಟರ್ ರಿಲೀಸ್ ಮಾಡಿ ಚಿತ್ರದ ಬಗ್ಗೆ ಮಾತನಾಡಿದ ಕೈಮರ ಚಿತ್ರತಂಡ | Filmibeat Kannada

  ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ 'ಆದುಜೀವಿಥಮ್' ಚಿತ್ರತಂಡ ಜೋರ್ಡಾನ್‌ನಲ್ಲಿ ಸಿಲುಕಿಕೊಂಡಿತು. ನಂತರ ವಂದೇ ಭಾರತ್ ಕಾರ್ಯಾಚರಣೆಯಡಿ ವಿಶೇಷ ವಿಮಾನದಲ್ಲಿ ಭಾರತಕ್ಕೆ ಮರಳಿದ್ದರು. ಈ ವೇಳೆ ಪೃಥ್ವಿರಾಜ್ ಅವರಿಗೆ ಕೊರೊನಾ ನೆಗೆಟಿವ್ ಇತ್ತು.

  English summary
  Fake Instagram account created of Malayalam Actor prithviraj sukumaran daughter name.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X