ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ಮನೆ ಪಕ್ಕ ಮುಂಬೈನಲ್ಲಿ ಭವ್ಯವಾದ ಮನೆ ಖರೀದಿಸಿದ ಸೌತ್ ಸೂಪರ್ ಸ್ಟಾರ್...!
ತಮ್ಮನ್ನ ತಾವು ಪ್ರಯತ್ನಕ್ಕೆ ಹಾಗೂ ಪ್ರಯೋಗಕ್ಕೆ ಒಡ್ಡಿಕೊಳ್ಳುವರಲ್ಲಿ ಪೃಥ್ವಿರಾಜ್ ಸುಕುಮಾರನ್ ಕೂಡ ಒಬ್ಬರು. ತಮ್ಮ ಚಿತ್ರಗಳಿಂದ ಹಾಗೂ ಪಾತ್ರಗಳಿಂದ, ಕೇವಲ ಕೇರಳದಲ್ಲಿ ಅಷ್ಟೇ ಅಲ್ಲ ಭಾರತದೆಲ್ಲೆಡೆ ಮನೆ ಮಾತಾಗಿರುವ ಪೃಥ್ವಿರಾಜ್ ಸುಕುಮಾರನ್, ಲೂಸಿಫರ್ ಚಿತ್ರವನ್ನು ನಿರ್ದೇಶಿಸಿ ಮಲಯಾಳಂ ಚಿತ್ರರಂಗದಲ್ಲಿ ಇತಿಹಾಸವನ್ನು ಸೃಷ್ಟಿಸಿದ್ದರು. ತಾನು ಕೇವಲ ಅತ್ಯುತ್ತಮ ಆಕ್ಟರ್ ಮಾತ್ರ ಅಲ್ಲ ಡೈರೆಕ್ಟರ್ ಕೂಡ ಹೌದು ಅನ್ನುವುದನ್ನು ಈ ಚಿತ್ರದ ಮೂಲಕ ಪೃಥ್ವಿರಾಜ್ ಸುಕುಮಾರನ್ ಸಾಬೀತು ಮಾಡಿದ್ದರು.
ಇಂಥಾ ಪೃಥ್ವಿರಾಜ್ ಸುಕುಮಾರನ್ ಈಗ ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ಮನೆ ಪಕ್ಕ ಮನೆಯನ್ನು ಖರೀದಿಸಿದ್ದಾರೆ. ಮುಂಬೈನ ಬಾಂದ್ರಾದ ಪಾಲಿ ಹಿಲ್‌ನಲ್ಲಿ ಐಷಾರಾಮಿ ಡ್ಯೂಪ್ಲೆಕ್ಸ್ ಅಪಾರ್ಟ್‌ಮೆಂಟ್ ನ ಖರೀದಿ ಮಾಡಿರುವ ಪೃಥ್ವಿರಾಜ್ ಸುಕುಮಾರನ್ ಈ ಮನೆಗೆ ಬರೋಬ್ಬರಿ ಮೂವತ್ತು ಕೋಟಿ ಹಣವನ್ನು ನೀಡಿದ್ದಾರೆ.

276 ಚದರ ಮೀಟರ (ಅಂದಾಜು 2,971 ಚದರ ಅಡಿ) ವಿಸ್ತೀರ್ಣ ಹೊಂದಿರುವ ಈ ಅಪಾರ್ಟ್‌ಮೆಂಟ್ ನಲ್ಲಿ 40 ಚದರ ಮೀಟರ ವಿಸ್ತೀರ್ಣದಲ್ಲಿ ನಾಲ್ಕು ಕಾರ್ ಪಾರ್ಕಿಂಗ್ ಸ್ಥಳಗಳನ್ನು ನಿರ್ಮಾಣ ಮಾಡಲಾಗಿದೆ. ಸ್ಟ್ಯಾಂಪ್ ಡ್ಯೂಟಿಗೆ 1.84 ಕೋಟಿ ಖರ್ಚಾಗಿದ್ದು, ಸೆಪ್ಟೆಂಬರ್ ಹನ್ನೆರಡರಂದು ಪೃಥ್ವಿರಾಜ್ ಈ ಭವ್ಯವಾದ ಮನೆಯನ್ನು ಖರೀದಿಸಿದ್ದಾರೆ.
ಅಂದ್ಹಾಗೇ ಪೃಥ್ವಿರಾಜ್ ಸುಕುಮಾರನ್ ಬಾಲಿವುಡ್‌ನಲ್ಲಿ ಚಿರಪರಿಚಿತ ವ್ಯಕ್ತಿ. 2012ರಲ್ಲಿ ರಾಣಿ ಮುಖರ್ಜಿ ಅಭಿನಯದ ಅಯ್ಯಾ ಚಿತ್ರದ ಮೂಲಕ ಬಾಲಿವುಡ್ ನ ಬಾಗಿಲು ತೆರೆದು ಒಳ ಪ್ರವೇಶಿಸಿದ ಪೃಥ್ವಿರಾಜ್ ಆ ನಂತರ ಔರಂಗಜೇಬ್ ಮತ್ತು ನಾಮ್ ಶಬಾನಾ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ಇನ್ನೂ.. ಅಕ್ಷಯ್ ಕುಮಾರ್ ಮತ್ತು ಜಾಕಿ ಶ್ರಾಫ್ ಅಭಿನಯದಲ್ಲಿ ಈ ವರ್ಷ ತೆರೆಗೆ ಬಂದ, ಬಾಲಿವುಡ್‌ನ ಅತೀ ದೊಡ್ಡ ಫ್ಲಾಪ್ ಚಿತ್ರದಲ್ಲಿ ಒಂದಾದ ಬಡೆ ಮಿಯಾ ಚೋಟೆ ಮಿಯಾ ಚಿತ್ರದಲ್ಲಿ ಕೂಡ ಪೃಥ್ವಿರಾಜ್ ಸುಕುಮಾರನ್ ಕಾಣಿಸಿಕೊಂಡಿದ್ದರು. ಆದರೆ ಚಿತ್ರ ಗೆಲ್ಲಲಿಲ್ಲ. ಪೃಥ್ವಿರಾಜ್ ಗೆ ಸಿಗಬೇಕಿದ್ದ ಹೆಸರು ಸಿಗಲಿಲ್ಲ.
ಆದರೆ, ಪೃಥ್ವಿರಾಜ್ ಅಭಿನಯದ ಆಡು ಜೀವಿತಂ ಚಿತ್ರಕ್ಕೆ ಪ್ರೇಕ್ಷಕರ ಪ್ರೀತಿ ಸಿಕ್ಕಿತ್ತು. ಭಾಷೆಯ ಬೇಧ ಭಾವ ಇಲ್ಲದೇ ಎಲ್ಲ ವರ್ಗದ ಪ್ರೇಕ್ಷಕರು ಈ ಚಿತ್ರವನ್ನು ಮೆಚ್ಚಿಕೊಂಡಿದ್ದರು. ಇನ್ನೂ ಇದು ಪ್ಯಾನ್ ಇಂಡಿಯಾ ಕಾಲ. ಎಲ್ಲ ಭಾಷೆಯ ಸ್ಟಾರ್‌ಗಳಿಗೆ ಪ್ಯಾನ್ ಇಂಡಿಯಾ ಸ್ಟಾರ್ ಆಗಬೇಕೆಂಬ ಆಸೆ. ಪೃಥ್ವಿರಾಜ್ ಸುಕುಮಾರನ್ ಅಅವರಲ್ಲಿ ಕೂಡ ಈ ಆಸೆ ಇರಬಹುದು. ಈ ಕಾರಣಕ್ಕೆ ಮಲಯಾಳಂ ಚಿತ್ರರಂಗದ ಜೊತೆ ಬಾಲಿವುಡ್‌ನ ಪ್ರಾಜೆಕ್ಟ್ ಗಳ ಕುರಿತು ಚರ್ಚೆಯನ್ನು ಮಾಡಲು, ಬಾಲಿವುಡ್‌ಗೆ ಇನ್ನಷ್ಟು ಹತ್ತಿರವಾಗಲು ಮೂವತ್ತು ಕೋಟಿ ಹಣವನ್ನು ನೀಡಿ ಪೃಥ್ವಿರಾಜ್ ಮುಂಬೈನ ಪ್ರತಿಷ್ಠಿತ ಪ್ರದೇಶವಾದ ಪಾಲಿ ಹಿಲ್‌ನಲ್ಲಿ ಮನೆಯನ್ನು ಖರೀದಿ ಮಾಡಿರಬಹುದು ಎನ್ನುವ ಅನುಮಾನ ಅನೇಕರನ್ನು ಈಗ ಕಾಡುತ್ತಿದೆ.


Click it and Unblock the Notifications