ಹೆತ್ತ ತಾಯಿಗೆ ಆಕ್ಷನ್ ಕಟ್ ಹೇಳಿದ ಪೃಥ್ವಿರಾಜ್ ಸುಕುಮಾರನ್

ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರ್ ನಿರ್ದೇಶನದ ಎರಡನೇ ಸಿನಿಮಾ ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆಯುತ್ತಿದೆ. ಜುಲೈ 15 ರಿಂದಲೇ ಶೂಟಿಂಗ್ ಆರಂಭಿಸಿರುವ ಸುಕುಮಾರನ್ ಆಗಸ್ಟ್ 31 ರಂದು ಬಹಳ ವಿಶೇಷವಾದ ಸಂಗತಿಯೊಂದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಮೋಹನ್ ಲಾಲ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ 'ಬ್ರೋ ಡ್ಯಾಡಿ' ಚಿತ್ರದಲ್ಲಿ ಪೃಥ್ವಿರಾಜ್ ಅವರ ತಾಯಿ ಮಲ್ಲಿಕಾ ಸುಕುಮಾರ್ ಸಹ ಪಾತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಮೋಹನ್ ಲಾಲ್ ಮತ್ತು ಮಲ್ಲಿಕಾ ಅವರು ಒಟ್ಟಿಗೆ ನಟಿಸುವ ದೃಶ್ಯ ನಿರ್ದೇಶಿಸಿರುವ ಸುಕುಮಾರನ್ ಸೋಶಿಯಲ್ ಮೀಡಿಯಾದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ''ಸಾರ್ವಕಾಲಿಕ ಶ್ರೇಷ್ಠ ನಟ ಮತ್ತು ಶ್ರೇಷ್ಠ ತಾಯಿಯನ್ನು ಒಂದೇ ಫ್ರೆಮ್‌ನಲ್ಲಿ ನಿರ್ದೇಶಿಸಲು ಅವಕಾಶ ಸಿಕ್ಕಾಗ'' ಎಂದು ಪೋಸ್ಟ್ ಹಾಕಿದ್ದಾರೆ.

ಪೃಥ್ವಿರಾಜ್ ಸುಕುಮಾರನ್ ಅವರ ತಾಯಿ ಮಲ್ಲಿಕಾ ಮಲಯಾಳಂ ಇಂಡಸ್ಟ್ರಿಯಲ್ಲಿ ದೊಡ್ಡ ನಟಿ. 1974ರಲ್ಲಿ ನಟನೆ ಚೊಚ್ಚಲ ಸಿನಿಮಾ ಮಾಡಿದ ಈಗಲೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇದೀಗ, ಮಗನ ನಿರ್ದೇಶನದಲ್ಲಿ ಮೊದಲ ಸಲ ನಟಿಸುವ ಅವಕಾಶ ಪಡೆದಿರುವುದು ಅಪರೂಪದ ಸಂಗತಿ ಆಗಿದೆ.

Prithviraj Sukumaran directs his mom Mallika Sukumaran in Bro Daddy film

ಅಂದ್ಹಾಗೆ, 'ಲೂಸಿಫರ್' ಚಿತ್ರದ ನಂತರ ಪೃಥ್ವಿರಾಜ್ ನಿರ್ದೇಶಿಸುತ್ತಿರುವ ಎರಡನೇ ಸಿನಿಮಾ 'ಬ್ರೋ-ಡ್ಯಾಡಿ'. ಲೂಸಿಫರ್ ಚಿತ್ರದಲ್ಲೂ ಮೋಹನ್ ಲಾಲ್ ಮುಖ್ಯ ಪಾತ್ರ ನಿಭಾಯಿಸಿದ್ದರು. ಈಗ ಎರಡನೇ ಚಿತ್ರದಲ್ಲೂ ಅದೇ ಕಾಂಬಿನೇಷನ್ ಮುಂದುವರಿದಿದೆ.

'ಬ್ರೋ-ಡ್ಯಾಡಿ' ಕಂಪ್ಲೀಟ್ ಫ್ಯಾಮಿಲಿ ಎಂಟರ್‌ಟೈನರ್ ಆಗಿರುವ ಈ ಚಿತ್ರದಲ್ಲಿ ಮೋಹನ್ ಲಾಲ್, ಪೃಥ್ವಿರಾಜ್ ಸುಕುಮಾರನ್, ಕಲ್ಯಾಣಿ ಪ್ರಿಯದರ್ಶನ್, ಮಲ್ಲಿಕಾ ಸುಕುಮಾರನ್, ಮೀನಾ, ಕನಿಹಾ ಮತ್ತು ಸೌಬಿನ್ ಶಾಹಿರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆಂಟನಿ ಪೆರುಂಬಾವೂರ್ ನಿರ್ಮಿಸುತ್ತಿದ್ದು, ಬರಹಗಾರರಾದ ಶ್ರೀಜಿತ್ ಮತ್ತು ಬಿಬಿನ್ ಸ್ಕ್ರಿಪ್ಟ್ ಬರೆದಿದ್ದಾರೆ.

ಈ ಚಿತ್ರದ ನಂತರ 'ಲೂಸಿಫರ್ 2' ನಿರ್ದೇಶಿಸುವುದಾಗಿ ಘೋಷಿಸಿದ್ದಾರೆ. ಮೋಹನ್ ಲಾಲ್ ಮತ್ತು ಸುಕುಮಾರನ್ ಕಾಂಬಿನೇಷನ್‌ನಲ್ಲಿ ಮೂಡಿಬರಲಿರುವ ಮೂರನೇ ಸಿನಿಮಾ ಇದಾಗಿದೆ.

More from Filmibeat

English summary
Malayalam actor-director Prithviraj Sukumaran directs superstar Mohanlal and his mom Mallika Sukumaran in Bro-daddy film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X